ಬೆಂಗಳೂರು: ಮೇಕೆದಾಟು ಯೋಜನೆ (Mekedatu Project) ಬೇಡ, ಅರಣ್ಯ(Forest) ನಾಶ ಆಗುತ್ತದೆ ಎಂಬ ಹೋರಾಟಗಾರ್ತಿ ಮೇದಾ ಪಾಟ್ಕರ್ (Medha Patkar) ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಆ ಹೆಣ್ಣುಮಗಳು ಅವರದ್ದೇ ಆದ ಹೋರಾಟ ಮಾಡುತ್ತಿದ್ದಾರೆ. ನಾವು ಜನರಿಗೆ ಹೋರಾಟ ಮಾಡುತ್ತಿದ್ದೇವೆ, ಜನರ ಬದುಕಿಗಾಗಿ ಮಾಡುತ್ತಿದ್ದೇವೆ. ಅವರ ಅಭಿಪ್ರಾಯ ಅವರಿಗೆ, ಮೇದಾಪಾಟ್ಕರ್ ಏನಾದ್ರು ಮಾಡ್ಕೊಳ್ಳಿ. ಸರ್ಕಾರದವರು ಅದಕ್ಕೆ ಉತ್ತರ ಕೊಡಲಿ. ಈ ಪ್ರೊಜೆಕ್ಟ್ ನಿಂದ ನಮ್ಮ ತಾಲೂಕಿಗೆ ಎಷ್ಟು ಲಾಸ್ ಆಗ್ತಿದೆ ಗೊತ್ತಾ. ನಮ್ಮ ಜಮೀನು ಕಳೆದುಕೊಳ್ತೀವಿ, ದಮ್ ಕಟ್ಟಕೊಂಡು ಸುಮ್ಮನಿದ್ದೇವೆ. ನನ್ನ ಕ್ಷೇತ್ರದ ಜನರ ಭೂಮಿ ಕಳೆದುಕೊಳ್ಳುತ್ತಾರೆ. ಆದರೆ ಕುಡಿಯುವ ನೀರು ಬೇಕು. ನನ್ನ ಕ್ಷೇತ್ರದ ಜನರಿಗೆ ಆ ಮೇಲೆ ಹಣ ಕೊಡಿಸೋ ಪ್ರಯತ್ನ ಮಾಡ್ತೇವೆ ಎಂದರು.
ಮೇಕೆದಾಟು ಮಾಡ್ಲಿ, ಬಿಡ್ಲಿ. ನನ್ನ ವಿರುದ್ಧ ಏನೆಲ್ಲ ಪ್ರಯತ್ನ ನಡೆಯಬೇಕೋ ನಡೆಯುತ್ತಿದೆ. ಒಂದು ದಿನ ಕೇಸ್ ಹಾಕಬಹುದಿತ್ತು. ದಿನಾ ಕೇಸ್ ಹಾಕುವ ಪ್ರಮೇಯ ಏನಿತ್ತು. ನಮ್ಮ ಮೇಲೆ ಅಷ್ಟೇ ಯಾಕೆ ಕೇಸ್. ಬಿಜೆಪಿ ಅವರ ಮೇಲೆ ಕೇಸ್ ಹಾಕಿಲ್ಲ. ಬಹಳ ಅಂದ್ರೆ ಜೈಲಿಗೆ ಹಾಕಬಹುದು, ಖುಷಿ ಪಡಬಹುದು, ಪಡಲಿ ಬಿಡಿ ಎಂದರು.
ಇದನ್ನೂ ಓದಿ: ಜಿಲ್ಲೆಗೆ ತಾರತಮ್ಯ: ಮಂಗಳವಾರ ಸಿಎಂ ಮನೆ ಮುಂದೆ HD Revanna ಧರಣಿ
ದಿನಾ ಒಂದು ಕೇಸ್ ಹಾಕ್ತಾರೆ
ಮೇಕೆದಾಟು ಯೋಜನೆ ಬದಲು, ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿ ಮಾಡುವ ವಿಚಾರವಾಗಿ ಬಗ್ಗೆ ಸರ್ಕಾರವೇ ಒಂದು ಸಮಿತಿ ರಚನೆ ಮಾಡಲಿ. ಮತ್ತೆ 5 ದಿನಗಳ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಲಾಗಿದೆ. ಈಗಿರುವ ಕೊರೊನಾ ಮಾರ್ಗಸೂಚಿ ಸಡಿಲ ಆದ ನಂತರ ಪಾದಯಾತ್ರೆ ಮಾಡ್ತೇವೆ ಎಂದು ತಿಳಿಸಿದರು. ಟಾರ್ಗೆಟ್ ಶಿವಕುಮಾರ್ ಮಾಡಿದ್ರೂ ಹೋರಾಟಕ್ಕೆ ಸಿದ್ದ, ದಿನಾ ಒಂದು ಕೇಸ್ ಹಾಕ್ತಾರೆ. CM ರಾಮನಗರಕ್ಕೆ ಬಂದಾಗಲೆ ಕೇಸ್ ದಾಖಲಾಗಬೇಕಿತ್ತು ಯಾಕಿಗಿಲ್ಲ? ನಾವು ಕೋರ್ಟ್ಗೂ ಹಾಕ್ತಿವಿ, ಸರ್ಕಾರಕ್ಕೂ ಕಾಗದ ಬರಿತೇವೆ. ನಮಗೂ ಕಾಲ ಬರುತ್ತೆ, ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ಎಂದು ಬಿಜೆಪಿ ಸರ್ಕಾರದ ಕ್ರಮಕ್ಕೆ ತಿರುಗೇಟು ನೀಡಿದರು.
ಸುಮ್ಮನೆ ಚಪಲಕ್ಕೆ ಕುಮಾರಸ್ವಾಮಿ ಮಾತಾಡ್ಕೊತಾರೆ
ತಮಿಳುನಾಡಿನ ಜನರನ್ನ ಪಾದಯಾತ್ರೆಗೆ ಬಳಕೆ ಮಾಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಕ್ಕೆ, ತಮಿಳುನಾಡಿನ ಜನ ನಮ್ಮ ಬ್ರದರ್ಸ್. ನಾವು ಭಾರತದಲ್ಲಿ ಜೀವನ ಮಾಡ್ತಿದ್ದೇವೆ, ಬಾರ್ಡಲಿ ಹೋರಾಟ ಮಾಡಲಾಗುತ್ತಾ? ಅವರು ಇಲ್ಲಿ ಬಂದು ಕೆಲಸ ಮಾಡಬಾರ್ದಾ? ಇವರು ಯಾರನ್ನೂ ಬೇರೆ ರಾಜ್ಯದವರನ್ನ ಕೆಲಸಕ್ಕೆ ಇಟ್ಕೊಂಡಿಲ್ವ? ಸುಮ್ಮನೆ ಚಪಲಕ್ಕೆ ಕುಮಾರಸ್ವಾಮಿ ಮಾತಾಡ್ಕೊತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಹೇಗಿದಾರಂತೆ..?
ಶಿವಕುಮಾರ್ ಮೇಲೆ ED, IT ಅಸ್ತ್ರ ಪ್ರಯೋಗ ವಿಚಾರವಾಗಿ ಮಾತನಾಡಿ, ನಾವು ಕೆಲವು ಸಾಕ್ಷಿಗಳ ಜೊತೆ ಮಾತಾಡ್ತಿನಿ. ದಾಖಲೆಗಳನ್ನು ಇಟ್ಟುಕೊಂಡು ಹೋರಾಟ ಮಾಡಬೇಕಲ್ವಾ ಎಂದರು. ಶಿವಕುಮಾರ್ ಬೇಲ್ ಮೇಲೆ ಎಂಬ ಹೇಳಿಕೆಗೆ, ಯಡಿಯೂರಪ್ಪ ಹೇಗಿದಾರಂತೆ ಎಂದು ಮರುಪ್ರಶ್ನೆ ಹಾಕಿದರು. ನನ್ನ ಹೆಸರು ನೆನಸಿಕೊಂಡರೇ ಮಾತ್ರ ಕೆಲವರಿಗೆ ನೆಮ್ಮದಿ. ನನ್ನನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ. ಏನೆಲ್ಲ ತೊಂದರೆ ಕೊಡ್ತಾ ಇದ್ದಾರೆ ಗೊತ್ತಾ? ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Weekend Curfew: ಮಾಸ್ಕ್ ಹಾಕಲ್ಲ ಏನ್ ಮಾಡ್ತೀಯಾ ಎಂದ ಯುವಕನಿಗೆ ಕಪಾಳಮೋಕ್ಷ
ಚುನಾವಣೆ ಹತ್ತಿರದಲ್ಲಿದಾಗ ಇಡಿ, ಐಟಿ ವಿಚಾರ ಕೆದಕುವ ಪ್ಲಾನ್ ಬಗ್ಗೆ ಮಾತನಾಡಲ್ಲ, ಇನ್ನೂ ಸ್ವಲ್ಪ ದಿನದಲ್ಲಿ ದಾಖಲೆ ಸಮೇತ ಮಾತಾಡುತ್ತೇನೆ. ಜನರ ಮುಂದೆ ಸತ್ಯ ಇಡುವ ಸಮಯ ಬಂದಿದೆ, ಆಗ ಎಲ್ಲವೂನ್ನು ಹೇಳುತ್ತೇನೆ. ಪಾದಯಾತ್ರೆಗೆ ಬಂದ ಪೊಲೀಸರಿಗೆ ಪಾಸಿಟಿವ್ ಆಗಿರುವ ವಿಚಾರವಾಗಿ ಪ್ರತಿಕ್ರಿತಿಸಿ, ಪೊಲೀಸರು ಕೆಲಸ ಮಾಡಿದ್ರೇ ತಾನೆ ಬರೋದು. ಯಾವ ಪೊಲೀಸ್ ಯಾವ ಡ್ಯೂಟಿ ಮಾಡಿದ್ರು ತೋರಿಸಿ. ನಾವೇ ಅವರಿಗೆ ಊಟ ಹಾಕಿದ್ದೇವೆ. ನಮ್ಮ ರಕ್ಷಣೆ ಮಾಡಿದವರನ್ನು ನಾವು ಚನ್ನಾಗಿ ನೋಡಿಕೊಂಡಿದ್ದೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ