D.K Shivakumar: ವೇದಿಕೆ ಮೇಲೆ ಶಾಸಕರ ವಿರುದ್ಧ ಸಿಡಿದೆದ್ದ ಡಿಕೆಶಿ; ದೇಶಪಾಂಡೆಗೆ ಕೊಟ್ರು ಡಿಚ್ಚಿ!

ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಗೊಂದಲ ಉಂಟಾಗಿದ್ದು, ಕೈ ನಾಯಕರ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಡಿಕೆಶಿ ವೇದಿಕೆಯಲ್ಲೇ ಗರಂ ಆಗಿದ್ರು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು (ಸೆ.16): ಕರ್ನಾಟಕದಲ್ಲಿ 21 ದಿನ ಭಾರತ್ ಜೋಡೋ ಯಾತ್ರೆ ಹಿನ್ನಲೆ (Bharat Jodo Yatra) ಕಾಂಗ್ರೆಸ್​ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಅಂಬೇಡ್ಕರ್ ಭವನದಲ್ಲಿಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕೆಪಿಸಿಸಿ ಸಂಯೋಜಕರ ಸಭೆ ನಡೆಸಲಾಯ್ತು. ಇದೆ ವೇಳೆ ಮಾತಾಡಿದ ಕೆಪಿಸಿಸಿ  ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar), ನಾವು ಮಾಡಿದ ಕೆಲಸಕ್ಕೆ ಬಿಜೆಪಿ ಅವರಿಗೆ ಉತ್ತರ ಕೊಡಲು ಆಗಿಲ್ಲ.  ನಾನು, ಸಿದ್ದರಾಮಯ್ಯ, ಸೋನಿಯಾ ಗಾಂಧಿ (Sonia Gandhi) ಅವರು ಸೋಲು ಕಂಡಿದ್ದೇವೆ ಆದರೆ ರಾಜಕೀಯದಲ್ಲಿ ಇದೆಲ್ಲಾ ಸಹಜ ಎಂದು ​ ಹೇಳಿದ್ರು.

ಯಾವುದಕ್ಕೂ ನಾನು ಹೆದರುವುದಿಲ್ಲ

ನನ್ನನ್ನು ಹಲವರು ಕೆಲವರು ತಿಹಾರ್​ ಜೈಲಿಗೆ ಹೋಗಿ ಬಂದವನು ಎನ್ನುತ್ತಾರೆ. ನನ್ನ ಮೇಲೆ ಯಾವ ಕಮಿಷನ್ ಆರೋಪ ಇದ್ಯಾ. ನನ್ನ ಮೇಲೆ ಯಾವ ಲಂಚ ಪಡೆದಿದ್ದ ಆರೋಪ ಇದ್ಯಾ, ನನ್ನ ಮೇಲೆ ಮಂಚ ಹತ್ತಿದ ಆರೋಪ ಇದ್ಯಾ? ನನ್ನ ವಿರುದ್ಧ ಎಷ್ಟು ಇಡಿ ನೋಟಿಸ್ ಕೊಡ್ತಾರೋ ಕೊಡಲಿ, ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್​ ಕಿಡಿಕಾರಿದ್ರು.

ಬೈ ಪ್ಯಾಷನ್ I Am Politician

ಬೈ ಬರ್ತ್ I am agriculturist, ಬೈ ಚಾಯ್ಸ್ I am business men, ಬೈ ಪ್ಯಾಷನ್ I am politician, ಎಲ್ಲಿ ಶ್ರಮ ಇರುತ್ತೋ ಅಲ್ಲಿ ಪ್ರತಿಫಲ ‌ಇರುತ್ತೆ, ಇದಕ್ಕೆ ನಾನೇ ಉದಾಹರಣೆ, ಈಗ ಇರೋ ಪದಾಧಿಕಾರಿಗಳು ಕೆಲಸ ಮಾಡಿ ಎಂದ್ರು.

DK Shivakumar given suggestion to party workers in chitradurga tvtc mrq
ಡಿಕೆ ಶಿವಕುಮಾರ್


ಕೈ ಶಾಸಕರ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಗೊಂದಲ ಉಂಟಾಗಿದ್ದು, ಕೈ ನಾಯಕರ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಡಿಕೆಶಿ ವೇದಿಕೆಯಲ್ಲೇ ಗರಂ ಆದ್ರು. ನಮ್ಮಲ್ಲಿ ಕೆಲ ಶಾಸಕರು ಇದ್ದಾರೆ. ಒಂದು ದಿನ ಬಂದು ಕೆಲಸ ಮಾಡೋಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಸೋಕೆ  ಕೇಳಿದೆ. ಅವರು ಆಗಲ್ಲ ಅಂದ್ರು , 5 ವರ್ಷದಲ್ಲಿ ಒಂದು ದಿನ ಅದ್ರೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದ್ರೆ‌ ಏನ್ಮಾಡೋದು? ಯಾವ ಎಂಎಲ್‌ಎಗೂ  ಮಾಫಿ ಮಾಡೋಕೆ ಆಗಲ್ಲ.

ಪ್ರತಿ ದಿನ ಎರಡು ಎಂಎಲ್ಎ ಫಿಕ್ಸ್

ಪ್ರತಿ ದಿನ ಎರಡು ಎಂಎಲ್ಎ ಫಿಕ್ಸ್ ಮಾಡಿದ್ದೇವೆ. ಅವರು ಜನರ ಜೊತೆ ಬಂದು ಯಾತ್ರೆಯಲ್ಲಿ ಭಾಗವಹಿಸಿ ಎಂದು ಹೇಳಿದ್ದೇವೆ. ಯಾರು ಮುಂದಿನ ಚುನಾವಣೆಗೆ ಆಕಾಂಕ್ಷಿ ಇದ್ದಿರೋ ಅವರು ಬನ್ನಿ, ನನ್ನ, ಸಿದ್ದರಾಮಯ್ಯ ‌ಫೋಟೋ ಹಾಕಬೇಡಿ ನೀವು ಕೆಲಸ ಮಾಡಿ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ: Basangouda Patil Yatnal: ಸಿಎಂಗೆ ಧಮ್ ಇದ್ದರೆ ಎನ್​​ಕೌಂಟರ್ ಮಾಡಲಿ; ಶಾಸಕ ಯತ್ನಾಳ್

ಈಗಾಗಲೇ ಸೀಟು ಮೀಸಲಾಗಿದೆ ಎಂದು ತಿಳಿಯಬೇಡಿ, ನಿಮಗೂ ಅವಕಾಶ ಇರುತ್ತದೆ. ನಾಗರಾಜ್ ಯಾದವ್ ಟಿವಿಯಲ್ಲಿ ಕಿರುಚಿ ಕಿರುಚಿ MLC ಆದ್ರು, ಅವನ ಬಳಿ ಹಣನೇ ಇಲ್ಲ. ನನಗೆ ಒಂದು ಟೀ ಸಹ ಕುಡಿಸಿಲ್ಲ. ಒಂದು ಬೊಕ್ಕೆ ಕೊಟ್ಟಿದ್ದಾನೆ ಅಷ್ಟೇ ಹಾಗಾಗಿಯೇ ನಿಮಗೂ ಅವಕಾಶ ಇರುತ್ತದೆ ಎನ್ನುವ ಮೂಲಕ ಟಿಕೆಟ್ ವಿಚಾರದಲ್ಲಿ ಸಿ ಎಲ್ ಪಿಗಿಂತ ಪಕ್ಷದ ಅಧ್ಯಕ್ಷರೇ ಅಲ್ಟಿಮೇಟ್ ಎಂಬ ಸಂದೇಶ ಡಿಕೆಶಿ ರವಾನೆ ಮಾಡಿದ್ದಾರೆ. ವೇದಿಕೆಯ ಮೇಲೆ ದೇಶಪಾಂಡೆ ವಿರುದ್ಧ ಗುಟುರು ಹಾಕಿದ್ದ ಡಿ.ಕೆ ಶಿವಕುಮಾರ್, ಕಾರ್ಯಕ್ರಮದ ಬಳಿಕ ದೇಶಪಾಂಡೆ ಅವರನ್ನು ಪಕ್ಕದಲ್ಲೇ ಕುರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ರು.
Published by:ಪಾವನ ಎಚ್ ಎಸ್
First published: