ಜೂನ್.14 ರಂದು ನಿಗದಿಯಾದ ಡಿ.ಕೆ. ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮ; ಅನುಮತಿ ಕೋರಿ ಸರ್ಕಾರಕ್ಕೆ ಮತ್ತೊಂದು ಮನವಿ

ಜೂನ್ 14ರಂದು ಪದಗ್ರಹಣದ 'ಪ್ರತಿಜ್ಞೆ' ಕಾರ್ಯಕ್ರಮಕ್ಕೆ ಅನುಮತಿ ಕೋರಿರುವ  ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ಬೆಂಗಳೂರು (ಜೂನ್‌ 06); ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ 'ಪ್ರತಿಜ್ಞೆ' ಕಾರ್ಯಕ್ರಮವನ್ನು ಇದೇ ಜೂನ್. 14 ರಂದು ನಡೆಸಲು ನಿರ್ಧರಿಸಿದ್ದು ಅನುಮತಿ ನೀಡಬೇಕು ಎಂದು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಜೂನ್‌ 07 ರಂದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಸರ್ಕಾರ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ.

ಜೂನ್ 14ರಂದು ಪದಗ್ರಹಣದ 'ಪ್ರತಿಜ್ಞೆ' ಕಾರ್ಯಕ್ರಮಕ್ಕೆ ಅನುಮತಿ ಕೋರಿರುವ  ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, "ಕಾಂಗ್ರೆಸ್‌ ಹೈಕಮಾಂಡ್‌ ನನ್ನನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿದೆ. ಆದರೆ, ಕೇಂದ್ರ ಸರಕಾರವು  ಲಾಕ್‌ಡೌನ್ ಅವಧಿ ವಿಸ್ತರಿಸಿದ ಕಾರಣ ಈ ಕಾರ್ಯಕ್ರಮವನ್ನೂ ಮುಂದೂಡಿದ್ದೇವೆ .

ಈಗ ನನ್ನ ನೇಮಕಾತಿಯಾಗಿ ಸುಮಾರು ಮೂರು ತಿಂಗಳು ಮುಗಿದಿದ್ದು, ಇನ್ನಷ್ಟು ಕಾಲ ಕಾಯಲು ಸಾಧ್ಯವಿಲ್ಲ, ಹೀಗಾಗಿ ದಿನಾಂಕ 14-06-2020 ಭಾನುವಾರದಂದು ನನ್ನ ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಲಾಕ್‌ಡೌನ್ ಅವಧಿ ಜಾರಿಯಲ್ಲಿದ್ದರೂ , ಅದರ ಎಲ್ಲಾ ನಿಯಮ ಮತ್ತು ನಿಬಂಧನೆಗಳಿಗೆ ಒಳಪಟ್ಟು ಈ ಕಾರ್ಯಕ್ರಮವನ್ನು ನಾವು ನಡೆಸಲಿದ್ದೇವೆ . ಬೆಂಗಳೂರಿನ ಕೆಪಿಸಿಸಿ ಕಛೇರಿಯ ಮುಂದೆ  150 ಮಂದಿ ನಾಯಕರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದೇವೆ ಜೊತೆಗೆ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿ ,

ಮುನಿಸಿಪಾಲಿಟಿ / ಕಾರ್ಪೊರೇಷನ್ ವಾರ್ಡ್ ಹಾಗೂ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಕಾರ್ಯಾಲಯಗಳಲ್ಲಿ ಇದರ ನೇರ ಪ್ರಸಾರವನ್ನು ಮಾಡಲಾಗುತ್ತದೆ . ಎಲ್ಲಾ ಕಡೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರುಲಾಕ್‌ಡೌನ್ ನಿಯಮಗಳನ್ನು ಪಾಲಿಸಿಕೊಂಡೇ  ವೀಕ್ಷಣೆ ಮಾಡಲಿದ್ದಾರೆ .

ಇಂತಹ ಸಭೆಗಳನ್ನು ಲಾಕ್‌ಡೌನ್ ಸಂದರ್ಭದಲ್ಲೇ ರಾಷ್ಟ್ರದ ಬೇರೆಬೇರೆ ಕಡೆಗಳಲ್ಲಿ ಇತರರು ಆಯೋಜಿಸಿದ ವಿಚಾರ ತಮ್ಮ ಗಮನಕ್ಕೆ ಬಂದಿರಬಹುದು . ಆದುದರಿಂದ ನನ್ನ ಈ ಮೇಲಿನ ಮನವಿಯನ್ನು ತಾವು ದಯವಿಟ್ಟು ಪರಿಗಣಿಸಿ. ನಾವು ಹಮ್ಮಿಕೊಂಡಿರುವ ಈ ಪ್ರಮುಖ ಮತ್ತು ಅಗತ್ಯ ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನೀಡಬೇಕಾಗಿ ವಿನಂತಿ" ಎಂದು ಪತ್ರದಲ್ಲಿ  ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಆದರೆ. ಸರ್ಕಾರ ಅನುಮತಿ ನೀಡುತ್ತದೆಯಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್; ಯಾರ್‍ಯಾರಿಗೆ ಟಿಕೆಟ್‌ ನೀಡಲಾಗಿದೆ? ಇಲ್ಲಿದೆ ವಿವರ..
First published: