ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್​ ಉತ್ತಮ ಆಯ್ಕೆ; ಜನಾರ್ದನ ಪೂಜಾರಿ

ಡಿಕೆಶಿ ವಿರುದ್ಧ ನಾನು ಬೈದಿದ್ದರೂ ತಿದ್ದಿಕೊಂಡಿದ್ದೇನೆ. ಜೈಲಿಗೆ ತುಂಬಾ ಜನ ಹೋಗಿ ಬಂದಿದ್ದಾರೆ, ಅದೊಂದು ಅನುಭವ. ಜೈಲಿಗೆ ಹೋಗಿ ಬಂದ ಬಳಿಕ ಡಿಕೆ ಶಿವಕುಮಾರ್ ಬದಲಾಗಿದ್ದಾರೆ ಎಂದರು.

ಡಿಕೆಶಿ-ಜನಾರ್ದನ ಪೂಜಾರಿ

ಡಿಕೆಶಿ-ಜನಾರ್ದನ ಪೂಜಾರಿ

  • Share this:
ಮಂಗಳೂರು(ಡಿ.09): ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಭಾರೀ ಮುಖಭಂಗವಾಗಿದೆ. ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.  ಹಿರಿಯ ಕಾಂಗ್ರೆಸ್​ ಮುಖಂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

ದಿನೇಶ್​ ಗುಂಡೂರಾವ್​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಂಗಳೂರಿನಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿಕೆ  ಶಿವಕುಮಾರ್​ ಉತ್ತಮ ಆಯ್ಕೆ ಎಂದು ಹೇಳಿದ್ಧಾರೆ.

ಉಪಚುನಾವಣೆ ಶಾಕ್: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಉತ್ತಮ ಆಯ್ಕೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನ ಅನುಭವದ ಮಾತು. ಡಿಕೆ ಶಿವಕುಮಾರ್​ ಧೈರ್ಯವಂತ. ಯಾರಿಗೂ ಕೂಡ ಹೆದರುವುದಿಲ್ಲ ಎಂದು ಜನಾರ್ದನ ಪೂಜಾರಿ ಡಿಕೆಶಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಡಿಕೆಶಿ ವಿರುದ್ಧ ನಾನು ಬೈದಿದ್ದರೂ ತಿದ್ದಿಕೊಂಡಿದ್ದೇನೆ. ಜೈಲಿಗೆ ತುಂಬಾ ಜನ ಹೋಗಿ ಬಂದಿದ್ದಾರೆ, ಅದೊಂದು ಅನುಭವ. ಜೈಲಿಗೆ ಹೋಗಿ ಬಂದ ಬಳಿಕ ಡಿಕೆ ಶಿವಕುಮಾರ್ ಬದಲಾಗಿದ್ದಾರೆ ಎಂದರು.
First published: