• Home
  • »
  • News
  • »
  • state
  • »
  • ನನ್ನ ಬಗ್ಗೆ ಮಾತಾಡಿದ್ರೆ ಬಿಜೆಪಿಯಲ್ಲಿ ಪ್ರಮೋಷನ್ ಸಿಗುತ್ತೆ; ಎಸ್​ಟಿ ಸೋಮಶೇಖರ್​ಗೆ ಡಿಕೆ ಶಿವಕುಮಾರ್ ಲೇವಡಿ

ನನ್ನ ಬಗ್ಗೆ ಮಾತಾಡಿದ್ರೆ ಬಿಜೆಪಿಯಲ್ಲಿ ಪ್ರಮೋಷನ್ ಸಿಗುತ್ತೆ; ಎಸ್​ಟಿ ಸೋಮಶೇಖರ್​ಗೆ ಡಿಕೆ ಶಿವಕುಮಾರ್ ಲೇವಡಿ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ನನಗೆ ಮತ್ತು ಸಿದ್ದರಾಮಯ್ಯನವರಿಗೆ ಮಾರ್ಕೆಟ್​ನಲ್ಲಿ ಒಳ್ಳೆಯ ಬೆಲೆ ಇದೆ. ಹೀಗಾಗಿ, ನಮ್ಮ ವಿರುದ್ಧ ಮಾತನಾಡದಿದ್ದರೆ ಇಲ್ಲಿಂದ ವಲಸೆ ಹೋದ ಶಾಸಕರಿಗೆ ಬಿಜೆಪಿಯಲ್ಲಿ ಬೆಲೆ ಸಿಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

  • Share this:

ಬೆಂಗಳೂರು (ಅ. 25): ಬಿಜೆಪಿ ಪಕ್ಷದ ಶಾಸಕರು, ಸಚಿವರು ಸರದಿಯಂತೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುತ್ತಾರೆ. ಇಂದು ಕೂಡ ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ, ನಾನು ಕಾಂಗ್ರೆಸ್ ಬಿಡೋದಕ್ಕೆ ಡಿಕೆ ಶಿವಕುಮಾರ್ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್, ಸೋಮಶೇಖರ್ ಅವರು ರಾಜ್ಯದ ಜನರಿಗೆ ಇಷ್ಟು ಬೇಗ ಸಂತೋಷದ ವಿಷಯ ಹೇಳಿದ್ದಾರೆ. ಅದು ಕೂಡ ವಿಜಯದಶಮಿ ದಿನ ಹೇಳಿದ್ದಾರೆ. ಆದಷ್ಟು ಬೇಗ ಅವರಿಗೂ ಒಳ್ಳೆಯದಾಗಲಿ, ಬಿಜೆಪಿಯಲ್ಲಿ ಪ್ರಮೋಷನ್ ಸಿಗುವಂತಾಗಲಿ ಎಂದು ಲೇವಡಿ ಮಾಡಿದ್ದಾರೆ.


ಅವರೆಲ್ಲ ನನ್ನ ಬಗ್ಗೆ ಮಾತನಾಡಿದರೆ ಬಿಜೆಪಿಯಲ್ಲಿ ಪ್ರಮೋಷನ್ ಸಿಗುತ್ತದೆ. ನನಗೆ ಮತ್ತು ಸಿದ್ದರಾಮಯ್ಯನವರಿಗೆ ಮಾರ್ಕೆಟ್​ನಲ್ಲಿ ಒಳ್ಳೆಯ ಬೆಲೆ ಇದೆ. ಹೀಗಾಗಿ, ನಮ್ಮ ಬಗ್ಗೆ ಆರೋಪ ಮಾಡಿದರೆ ಇಲ್ಲಿಂದ ವಲಸೆ ಹೋದ ಶಾಸಕರಿಗೆ ಬಿಜೆಪಿಯಲ್ಲಿ ಪ್ರಮೋಷನ್ ಸಿಗುತ್ತದೆ. ನಮ್ಮ ವಿರುದ್ಧ ಮಾತನಾಡದಿದ್ದರೆ ಅವರಿಗೆ ಬಿಜೆಪಿಯಲ್ಲಿ ಬೆಲೆ ಸಿಗುವುದಿಲ್ಲ. ನಮ್ಮಿಬ್ಬರ ಬಗ್ಗೆ ಮಾತನಾಡಿದರೆ ಮಾತ್ರ ಮಾಧ್ಯಮಗಳಲ್ಲಿ ತೋರಿಸುತ್ತಾರೆ, ಹೀಗಾಗಿ, ಏನೇನೋ ಮಾತಾಡ್ತಾ ಇರುತ್ತಾರೆ. ಎಸ್​ಟಿ ಸೋಮಶೇಖರ್ ಅವರಿಗೂ ಬೇಗ ಪ್ರಮೋಷನ್ ಸಿಗಲಿ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ: ಡಿಕೆ ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ; ಸಚಿವ ಎಸ್​ಟಿ ಸೋಮಶೇಖರ್ ಲೇವಡಿ


ಡಿ.ಕೆ. ಶಿವಕುಮಾರ್ ಮಾತನ್ನು ಯಾರು ಕೇಳುತ್ತಾರೆ? ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ನಾವೆಲ್ಲ ಹೊರ ಬರೋಕೆ ಕಾರಣ ಯಾರು? ನಾವೆಲ್ಲಾ ಕಾಂಗ್ರೆಸ್‌ ಬಿಡೋಕೆ‌ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.


ಡಿ.ಕೆ. ಶಿವಕುಮಾರ್ ಮಾತಿಗೆ ಎಲ್ಲೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮಾತನ್ನು ಸಿದ್ದರಾಮಯ್ಯನೇ ಕೇಳುವುದಿಲ್ಲ. ಹಾಗಿದ್ದಮೇಲೆ ನಾವು ಡಿಕೆ ಶಿವಕುಮಾರ್ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ನಾನು, ಮುನಿರತ್ನ, ಭೈರತಿ ಕಾಂಗ್ರೆಸ್​ನ ನಿಷ್ಟಾವಂತ ಕಾರ್ಯಕರ್ತರಾಗಿದ್ದೆವು. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ದರು? ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ವ? ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರಿಲ್ಲ. ಎಲ್ಲರೂ ಮುನಿರತ್ನನವರ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆತಂದು ಭಿತ್ತಿ ಪತ್ರ ಹಂಚಿಸುತ್ತಿದೆ ಎಂದು ಇಂದು ಮೈಸೂರಿನಲ್ಲಿ ಎಸ್​ಟಿ ಸೋಮಶೇಖರ್ ಹೇಳಿದ್ದರು.

Published by:Sushma Chakre
First published: