ಏನು ಸಾಧನೆ ಮಾಡದೆ ಬಿಜೆಪಿ ಜನಸಂವಾದ ರ್‍ಯಾಲಿ ಮಾಡುವುದರಲ್ಲಿ ಅರ್ಥವಿಲ್ಲ- ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಕೋರೋನ ಸೋಂಕಿತರ ಸಾವು ಹೆಚ್ಚಳದ ವಿಚಾರವಾಗಿಯೂ ಮಾತನಾಡಿದ ಡಿಕೆ ಶಿವಕುಮಾರ್​, ಸರ್ಕಾರದಲ್ಲಿ ಬುದ್ಧಿವಂತ, ಜ್ಞಾನವಂತ, ವಿದ್ಯಾವಂತರಿದ್ದಾರೆ. ಅವರೆಲ್ಲ ಏನು ಮಾಡುತ್ತಾರೋ ನೋಡೋಣ ಎಂದರು.

news18-kannada
Updated:June 14, 2020, 1:20 PM IST
ಏನು ಸಾಧನೆ ಮಾಡದೆ ಬಿಜೆಪಿ ಜನಸಂವಾದ ರ್‍ಯಾಲಿ ಮಾಡುವುದರಲ್ಲಿ ಅರ್ಥವಿಲ್ಲ- ಡಿ.ಕೆ. ಶಿವಕುಮಾರ್
ಡಿಕೆ ಶಿವಕುಮಾರ್
  • Share this:
ಬೆಂಗಳೂರು (ಜೂ.14): ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಆರಂಭವಾದ ಕೆಪಿಸಿಸಿ ನೂತನ ಕಚೇರಿಯಲ್ಲಿ ಹೋಮ ಹವನ ನಡೆಸಿದ್ದಾರೆ. ಹವನ ಮುಗಿದ ನಂತರ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕೆಪಿಸಿಸಿ ನೂತನ ಕಚೇರಿಯಲ್ಲಿ ಬೆಳಗ್ಗೆ 6 ಗಂಟೆಗೆ  ಹೋಮ ಮತ್ತು ವಿಶೇಷ ಪೂಜೆ ನೆರವೇರಿತು. ಇನ್ನು ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಿತು. ಮುಂದೆ ಯಾವುದೇ ವಿಘ್ನಗಳು ಎದುರಾಗಬಾರದೆಂದು ಹೋಮ ನಡೆಸಲಾಯಿತು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿ. ಪರಮೇಶ್ವರ್​ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕಟ್ಟಡ ಕೆಲಸ ಆರಂಭವಾಗಿ ಅರ್ಧಕ್ಕೆ ನಿಂತಿತ್ತು.  ಈಗ ಮತ್ತೆ ಪೂಜೆ ಮಾಡಿದ್ದೇವೆ. . ನಾಳೆಯಿಂದ ನೂತನ ಕಟ್ಟಡದ ಉಳಿಕೆ ಕೆಲಸ ಆರಂಭ ಮಾಡಲಾಗುವುದು, ಎಂದರು.

ಬೆಂಗಳೂರಿನಲ್ಲಿ ಕೋರೋನ ಸೋಂಕಿತರ ಸಾವು ಹೆಚ್ಚಳದ ವಿಚಾರವಾಗಿಯೂ ಮಾತನಾಡಿದ ಅವರು, "ಸರ್ಕಾರದಲ್ಲಿ ಬುದ್ಧಿವಂತ, ಜ್ಞಾನವಂತ, ವಿದ್ಯಾವಂತರಿದ್ದಾರೆ. ಅವರೆಲ್ಲ ಏನು ಮಾಡುತ್ತಾರೋ ನೋಡೋಣ. ಆಮೇಲೆ ಪ್ರತಿಕ್ರಿಯಿಸೋಣ," ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.

ಇದನ್ನೂ ಓದಿ: ಕರ್ನಾಟಕ ಜನಸಂವಾದ ವರ್ಚುವಲ್ ರ್‍ಯಾಲಿ; ಇಂದು ಸಂಜೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಭಾಷಣ

"ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಜನ ಸಂವಾದ ರ್ಯಾಲಿ ಮಾಡುತ್ತಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಅವರು ನುಡಿದಂತೆ ನಡೆದೇ ಇಲ್ಲ. ಹೀಗಿರುವಾಗ ಏನು ಕಾರ್ಯಕ್ರಮ ಮಾಡ್ತಾರೆ ನೋಡೋಣ," ಎಂದರು ಡಿಕೆಶಿ.
First published: June 14, 2020, 1:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading