• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • DK Shivakumar: ನಾನು ಒಬ್ಬನೇ ನಿಂತು ಪಕ್ಷ ಕಟ್ಟಿದ್ದೇನೆ ಎಂದ ಡಿಕೆಶಿ! ಸಿಎಂ ಕುರ್ಚಿಗಾಗಿ ಪಟ್ಟುಬಿಡದ 'ಬಂಡೆ'!

DK Shivakumar: ನಾನು ಒಬ್ಬನೇ ನಿಂತು ಪಕ್ಷ ಕಟ್ಟಿದ್ದೇನೆ ಎಂದ ಡಿಕೆಶಿ! ಸಿಎಂ ಕುರ್ಚಿಗಾಗಿ ಪಟ್ಟುಬಿಡದ 'ಬಂಡೆ'!

ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಹೈಕಮಾಂಡ್ ಬುಲಾವ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಹೊರಟು ನಿಂತಿರುವ ಡಿಕೆಶಿ, ಸುದ್ದಿಗೋಷ್ಠಿ ನಡೆಸಿ, ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ (Chief Minister of Karnataka) ಆಯ್ಕೆ ವಿಚಾರ ಇದೀಗ ದೆಹಲಿಗೆ (Delhi) ತಲುಪಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (Congress Legislative Party meeting) ನೂತನ ಶಾಸಕರ (MLA) ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರದ ಕಾಂಗ್ರೆಸ್ ವೀಕ್ಷಕರು ಇದೀಗ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಇಬ್ಬರಿಗೂ ಹೈಕಮಾಂಡ್ ಬುಲಾವ್ ಕೊಟ್ಟಿದೆ. ಇದೀಗ ದೆಹಲಿಗೆ ಹೊರಟು ನಿಂತಿರುವ ಡಿಕೆ ಶಿವಕುಮಾರ್, ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಸಿಎಂ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ. ಗೆದ್ದ ಎಲ್ಲಾ ಶಾಸಕರು ನಮ್ಮವರೇ, ನನ್ನ ಬಳಿ ಯಾರೂ ಇಲ್ಲ’ ಅಂತ ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಹೇಳಿದ್ದಾರೆ.


ದೆಹಲಿಗೆ ತೆರಳುವ ಮುನ್ನ ಡಿಕೆಶಿ ಸುದ್ದಿಗೋಷ್ಠಿ!


ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ದೆಹಲಿಗೆ ಹೋಗ್ತಿದ್ದಾರೆ. ಅತ್ತ ಸಿದ್ದು ದೆಹಲಿಗೆ ತೆರಳುತ್ತಿದ್ದಂತೆ ಡಿಕೆ ಶಿವಕುಮಾರ್ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದರು. ನನ್ನ ಗುರುಗಳನ್ನ ಭೇಟಿ ಮಾಡಿ ದೆಹಲಿಗೆ ಹೋಗಬೇಕು. ನನಗೆ ಯಾರ ನಂಬರ್‌ ಬಗ್ಗೆ ಮಾತನಾಡೋ ಶಕ್ತಿ ಇಲ್ಲ ನಾನು ಪಕ್ಷದ ಅಧ್ಯಕ್ಷ. 135 ಸ್ಥಾನ ಪಡೆದ ಶಾಸಕರು ನಮ್ಮ ಜೊತೆ ಇದ್ದಾರೆ ಎಂದರು.


ನನ್ನ ಬಳಿ ಇನ್ನಷ್ಟು ಅಸ್ತ್ರಗಳು ಇದ್ದವು!


ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ನಾವು ಜಯಗಳಿಸಿದ್ದೇವೆ. ಇಡೀ ದೇಶಕ್ಕೆ ರಾಜ್ಯ ಕಾಂಗ್ರೆಸ್‌ ಮಾದರಿಯಾಗಿದೆ. ನನ್ನ ಬತ್ತಳಿಕೆಯಲ್ಲಿ ಇನ್ನೂ ಅಸ್ತ್ರಗಳಿದ್ದವು. ಆದ್ರೆ ಅದನ್ನು ಪ್ರಯೋಗ ಮಾಡುವಷ್ಟು ಸಮಯ ಸಿಗಲಿಲ್ಲ. ಒಂದು ವೇಳೆ ಆ ಅಸ್ತ್ರಗಳನ್ನ ಬಳಸಿದ್ರೆ ಮತ್ತಷ್ಟು ಸ್ಥಾನ ಪಡೆಯಬಹುದಿತ್ತು ಎಂದರು.


ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!


ನಾನು ಒಬ್ಬನೇ ನಿಂತು ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೇನೆ


ನಾನು ಒಬ್ಬನೇ ನಿಂತು ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೇನೆ. ನಾವು ಸೋತಿದ್ದಾಗ ನಮ್ಮನ್ನ ಬಿಟ್ಟು ಎಲ್ರೂ ಪಕ್ಷ ಬಿಟ್ಟು ಹೋದ್ರು. ಆದ್ರೂ ಕೂಡ ಒಬ್ಬನೇ ನಿಂತು ಸಮರ್ಥವಾಗಿ ಪಕ್ಷ ಕಟ್ಟಿದ್ದೇನೆ ಅಂತ ಪರೋಕ್ಷವಾಗಿ ನನಗೇ ಸಿಎಂ ಸ್ಥಾನ ನೀಡಬೇಕು ಅಂತ ಡಿಕೆ ಶಿವಕುಮಾರ್ ಬೇಡಿಕೆ ಇಟ್ಟರು.


ಡಿಕೆ ಶಿವಕುಮಾರ್ ಬಣದ ವಾದ ಏನು?


ಇನ್ನು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ವೀಕ್ಷಕರು ಒಂದು ವಾಕ್ಯದಲ್ಲಿ ತಮ್ಮ ನಾಯಕ ಏಕೆ ಸಿಎಂ ಆಗಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ದಶಕಗಳ ಬಳಿಕ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಪಕ್ಷದ ಪರ ನಿಂತಿದೆ, ಒಕ್ಕಲಿಗ ಮತಬ್ಯಾಂಕ್ ನಿರ್ವಹಣೆ ಹಿನ್ನೆಲೆಯಲ್ಲಿ ಅವಕಾಶ ಕೊಡಬೇಕು. KPCC ಅಧ್ಯಕ್ಷರೇ ಸಿಎಂ ಆಗುವ ಸಂಪ್ರದಾಯ ಇರೋದನ್ನೂ ಪರಿಗಣಿಸಬೇಕು. ಡಿಕೆ ಪಕ್ಷ ನಿಷ್ಠೆ, ಸಂಘಟನೆ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ಸಿಗೇ ಗೊತ್ತಿದೆ. ಸಿದ್ದರಾಮಯ್ಯ ಈಗಾಗಲೇ ಸಿಎಂ ಆಗಿದ್ದಾರೆ. ಲಿಂಗಾಯತ ವಿರೋಧಿ ಆರೋಪವಿದೆ ಅಂತ ಹೇಳಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?


ಸಿದ್ದರಾಮಯ್ಯ ಬಣದ ವಾದ ಏನು?


ಇನ್ನು ಸಿದ್ದರಾಮಯ್ಯ ಬಣದವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಬ್ಯಾಂಕ್ ನಿರ್ವಹಣೆ ಮಾಡಬೇಕು. ಡಿಕೆ ಶಿವಕುಮಾರ್ ಬರೀ ಹಳೇ ಮೈಸೂರಿಗಷ್ಟೇ ಸೀಮಿತವಾದ ನಾಯಕ. ಉತ್ತರ ಕರ್ನಾಟಕದ ಮತಕ್ಷೇತ್ರಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮಾನ್ಯತೆ ಕೊಡಬೇಕು ಎಂದಿದ್ದಾರೆ ಎನ್ನಲಾಗಿದೆ.

top videos
  First published: