ತೀವ್ರ ಬೆನ್ನು ನೋವಿನಿಂದ ಆಸ್ಪತ್ರೆ ಸೇರಿರುವ ಡಿ.ಕೆ. ಶಿವಕುಮಾರ್​; ಇಂದು ಸಂಜೆ ಡಿಸ್ಚಾರ್ಜ್ ಸಾಧ್ಯತೆ

DK Shivakumar Health Condition: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಡಿ.ಕೆ. ಶಿವಕುಮಾರ್ ಅವರ ಎರಡೂ ಕಾಲುಗಳು ಊದಿಕೊಂಡಿವೆ. ಕಾಲುಗಳ ಊತ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ, ಅವರು ಇಂದು ಕೂಡ ಆಸ್ಪತ್ರೆಯಲ್ಲಿ ಇರಲಿದ್ದಾರೆ.

news18-kannada
Updated:November 13, 2019, 7:57 AM IST
ತೀವ್ರ ಬೆನ್ನು ನೋವಿನಿಂದ ಆಸ್ಪತ್ರೆ ಸೇರಿರುವ ಡಿ.ಕೆ. ಶಿವಕುಮಾರ್​; ಇಂದು ಸಂಜೆ ಡಿಸ್ಚಾರ್ಜ್ ಸಾಧ್ಯತೆ
ಡಿಕೆ ಶಿವಕುಮಾರ್​
  • Share this:
 ಬೆಂಗಳೂರು (ನ. 13): ಬೆನ್ನುನೋವಿನಿಂದ ಸೋಮವಾರ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಕೂಡ ಚಿಕಿತ್ಸೆ ಮುಂದುವರೆದಿದೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೇನಾಮಿ ಹಣ ಹೊಂದಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗ ಡಿಕೆ ಶಿವಕುಮಾರ್​ಗೆ ಎದೆನೋವು ಕಾಣಿಸಿಕೊಂಡಿತ್ತು. ಬಂಧನಕ್ಕೊಳಗಾದ ನಂತರ ಬಹುಪಾಲು ದಿನಗಳು ಅವರು ಆಸ್ಪತ್ರೆಯಲ್ಲೇ ಕಳೆದಿದ್ದರು. ಜೈಲಿನಿಂದ ಹೊರಬಂದ ನಂತರವೂ ಮಾನಸಿಕ ಒತ್ತಡ, ತಿರುಗಾಟ, ಟೆನ್ಷನ್ ಹೆಚ್ಚಾಗಿತ್ತು. ಕೆಲವು ದಿನಗಳಿಂದ ತಿರುಗಾಟ ಜಾಸ್ತಿ ಆಗಿದ್ದರಿಂದ ಸೋಮವಾರ ರಾತ್ರಿ ಇದ್ದಕ್ಕಿದ್ದಂತೆ ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಸುಪ್ರೀಂಕೋರ್ಟ್​​ನಲ್ಲಿ ಇಂದು 17 ಅನರ್ಹ ಶಾಸಕರ ಭವಿಷ್ಯ ನಿರ್ಧಾರ; ನಡೆಯುತ್ತಾ ಉಪಚುನಾವಣೆ?

ಸೋಮವಾರ ಮಧ್ಯರಾತ್ರಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆಶಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಡಿ.ಕೆ. ಶಿವಕುಮಾರ್ ಅವರ ಎರಡೂ ಕಾಲುಗಳು ಊದಿಕೊಂಡಿವೆ. ಕಾಲುಗಳ ಊತ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ, ಅವರು ಇಂದು ಕೂಡ ಆಸ್ಪತ್ರೆಯಲ್ಲಿ ಇರಲಿದ್ದಾರೆ. ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಅತಿಯಾದ ರಕ್ತದೊತ್ತಡ ಸಮಸ್ಯೆಯಿಂದಲೂ ಬಳಲುತ್ತಿದ್ದ ಅವರ ಬಿಪಿ ಈಗ ನಿಯಂತ್ರಣಕ್ಕೆ ಬಂದಿದೆ. ಬೆನ್ನು ನೋವಿನ ಸಮಸ್ಯೆ ಕಡಿಮೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಎಂಟಿಬಿ ನಾಗರಾಜ್ ಎದೆಯಲ್ಲಿ ಹಣ, ಅಧಿಕಾರ ಬಿಟ್ಟರೆ ಬೇರಾವುದಕ್ಕೂ ಜಾಗವಿಲ್ಲ; ಕೃಷ್ಣ ಭೈರೇಗೌಡ ತಿರುಗೇಟು

ಅಕ್ಟೋಬರ್​ ಕೊನೆಯ ವಾರದಲ್ಲಿ ಡಿಕೆಶಿ ಜೈಲಿನಿಂದ ಹೊರ ಬಂದಿದ್ದರು. ನಂತರ ಆಸ್ಪತ್ರೆಗೆ ತೆರಳಿ ಬಿಪಿ,‌ ಶುಗರ್ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಆಸ್ಪತ್ರೆಯಲ್ಲೇ ಇರಬೇಕು ಎಂದು ವೈದ್ಯರು ಹೇಳಿದ್ದರು. ಆದರೆ, ಕನಕಪುರಕ್ಕೆ ಹೋಗುವ ಸಲುವಾಗಿ ಡಿಕೆಶಿ ಡಿಸ್ಚಾರ್ಜ್ ಆಗಿದ್ದರು. ಈಗ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ಭೇಟಿಗೆ ಯಾರೂ ಬರಬೇಡಿ:ಡಿಕೆ ಶಿವಕುಮಾರ್ ಅವರ ಭೇಟಿಗೆ ಯಾರು ಬರದಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಡಿಕೆಶಿಗೆ ಕಡ್ಡಾಯ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಕುಟುಂಬಸ್ಥರು ಈ ಮನವಿ ಮಾಡಿದ್ದಾರೆ.

 

(ವರದಿ: ಗಂಗಾಧರ್)

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ