Karnataka Politics: ಡಿಕೆಶಿ-HDK ದೋಸ್ತಿ, ಡಿಕೆಗಾಗಿ ಕಾದು ಕುಳಿತ ಕುಮಾರಣ್ಣ; ನೀವೇ ನನ್ನ ಬ್ರದರ್ ಎಂದ್ರು ಡಿಕೆ ಶಿವಕುಮಾರ್

ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ ಡಿ.ಕೆ ಶಿವಕುಮಾರ್​, ಹೆಚ್‌.ಡಿ.ಕುಮಾರಸ್ವಾಮಿ ನನ್ನ ಸಹೋದರ ಎಂದ್ರು. ನನ್ನ ಸೋದರರಾದ ಹೆಚ್‌.ಡಿ.ಕುಮಾರಸ್ವಾಮಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನನ್ನನ್ನು ಕುಮಾರಸ್ವಾಮಿ ಇಬ್ಬರನ್ನೂ ನೀವೆಲ್ಲಾ ರಾಮನಗರದ ಜನರಿಗಿಂತಲೂ ಹೆಚ್ಚು ಅಭಿಮಾನ ತೋರಿ ಬರಮಾಡಿಕೊಂಡಿದ್ದೀರಿ ಎಂದ್ರು.

ಡಿಕೆ ಶಿವಕುಮಾರ್​, ಕುಮಾರಸ್ವಾಮಿ

ಡಿಕೆ ಶಿವಕುಮಾರ್​, ಕುಮಾರಸ್ವಾಮಿ

  • Share this:
ಮೈಸೂರು (ಜು.19): ಹೆಚ್.ಡಿ ಕೋಟೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ (Kempe Gowda Jayanti ) ಕಾರ್ಯಕ್ರಮದಲ್ಲಿ ಜೆಡಿಎಸ್​ ವರಿಷ್ಠ, ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಅವರು ಡಿ.ಕೆ ಶಿವಕುಮಾರ್​ಗಾಗಿ ಕಾದು ಕುಳಿತ್ತಿದ್ದರು. ಡಿ.ಕೆ ಶಿವಕುಮಾರ್ (D.K Shivakumar)​ ಬರುವವರೆಗೂ ಕಾರ್ಯಕ್ರಮ ಶುರು ಮಾಡೋದು ಬೇಡ ಎಂದ್ರು. ಒಂದೇ ವೇದಿಕೆಯಲ್ಲಿ ಹೆಚ್.ಡಿ.ಕೆ ಹಾಗೂ ಡಿ.ಕೆ.ಶಿವಕುಮಾರ್ ಕಾಣಿಸಿಕೊಂಡಿದ್ದು ತೀವ್ರ ಕೂತುಹಲ ಕೆರಳಿಸಿದೆ. ಕುಮಾರಸ್ವಾಮಿ ಇದ್ದ ಜಾಗಕ್ಕೆ ತೆರಳಿ ಡಿಕೆಶಿ ಹಸ್ತಲಾಘವ ಮಾಡಿದ್ರು. ಜನರಿಗೆ ತಲೆ ಬಾಗಿ ನಮಸ್ಕರಿಸಿದ ಡಿಕೆ.ಶಿವಕುಮಾರ್. ಎರಡು ಕೈಗಳನ್ನು ನೆಲಕ್ಕೆ ಮುಟ್ಟು ಶಿರಬಾಗಿ ನಮಸ್ಕರಿಸಿದ್ರು. ಡಿಕಿಶಿ ಕೈ ಹಿಡಿದು ಹೆಚ್.ಡಿ ಕುಮಾರಸ್ವಾಮಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

 ಹೆಚ್‌.ಡಿ.ಕುಮಾರಸ್ವಾಮಿ ನನ್ನ ಸಹೋದರ

ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ ಡಿ.ಕೆ ಶಿವಕುಮಾರ್​, ಹೆಚ್‌.ಡಿ.ಕುಮಾರಸ್ವಾಮಿ ನನ್ನ ಸಹೋದರ ಎಂದ್ರು. ನನ್ನ ಸೋದರರಾದ ಹೆಚ್‌.ಡಿ.ಕುಮಾರಸ್ವಾಮಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನನ್ನನ್ನು ಕುಮಾರಸ್ವಾಮಿ ಇಬ್ಬರನ್ನೂ ನೀವೆಲ್ಲಾ ರಾಮನಗರದ ಜನರಿಗಿಂತಲೂ ಹೆಚ್ಚು ಅಭಿಮಾನ ತೋರಿ ಬರಮಾಡಿಕೊಂಡಿದ್ದೀರಿ. ಇದಕ್ಕಾಗಿ ನಿಮಗೆ ಸಾಷ್ಟಾಂಗ ನಮಸ್ಕಾರ ಎಂದ ಡಿಕೆಶಿ,  ಭಾಷಣದಲ್ಲಿ ಬಸವಣ್ಣನ ವಚನ, ಡಿವಿಜಿ ಕಗ್ಗ ಪಠಿಸಿದ್ರು.

ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಲೂಟಿ

ಇದೇ ವೇಳೆ ಮಾತಾಡಿದ ಕುಮಾರಸ್ವಾಮಿ, ಬೆಂಗಳೂರಿನಲ್ಲಿನ ಭೂದಾಹಿಗಳ ಪರಿಣಾಮ ಕೆರೆಗಳು ನಾಪತ್ತೆಯಾಗಿವೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ನಮ್ಮ ಸರಕಾರದ ಖಜಾನೆ ಸದಾ ತುಂಬಿ ತುಳುಕಲು ಬೆಂಗಳೂರು ಕಾರಣ. ಇದೀಗ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಇನ್ನೊಂದು ಕಡೆ ರಾಜ್ಯದ ಅಭಿವೃದ್ಧಿ ಹೆಸರಲ್ಲೂ ದೊಡ್ಡ ಲೂಟಿ ನಡೆದಿದೆ. ಕೆಂಪೇಗೌಡರ ಹೆಸರು ಉಳಿಸ ಬೇಕಾದರೆ ಬೆಂಗಳೂರಿನಿಂದ ಬರುತ್ತಿರುವ ಆದಾಯವನ್ನು ಸರಿಯಾಗಿ ಬಳಸಬೇಕು ಎಂದ್ರು.

ಸಮಾಜದ ಕಾರ್ಯಕ್ರಮದಲ್ಲಿ ನಡೆಯಿತು ಸಮಾಜ ಸೆಳೆಯುವ ಕಾರ್ಯ!

ಹೆಚ್‌ಡಿ.ಕೋಟೆಯಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಡಿ.ಕೆ ಶಿವಕುಮಾರ್ 50 ಲಕ್ಷ ಹಣ ಘೋಷಣೆ ಮಾಡಿದ್ದಾರೆ.  ನೀವು 10 ಲಕ್ಷ ಹಣ ಕೇಳಿದ್ರಿ ಆದ್ರೆ ಬರಲಿಲ್ಲ. ಈಗ ನಾನು ಕೊಡ್ತಿನೋ ಬೇರೆಯವರ ಕೈಯಲ್ಲಿ ಕೊಡ್ತಿನೊ. ಭವನಕ್ಕೆ‌50 ಲಕ್ಷ ಹಣ ಬರುತ್ತೆ. ಎಲ್ಲರೂ ಒಗ್ಗಟ್ಟಾಗಿ, ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಮುಂದೆ ನಡೆಯೋಣ. ನೀವೆಲ್ಲರೂ ಮಠದ ಜೊತೆ ಇರಿ. ನಾನು ಇಡಿ ಸಂಕಷ್ಟಕ್ಕೆ ಸಿಲುಕಿ ತೊಂದರೆಯಲ್ಲಿದ್ದಾಗ ನನ್ನ ಬೆಂಬಲಕ್ಕೆ ನಿಂತ ಹೆಚ್‌.ಡಿ.ಕೋಟೆ ಜನರಿಗೆ ಧನ್ಯವಾದ ಎಂದ್ರು. ಇನ್ನು ಬುದ್ದ ಬಸವ ಮನೆ‌ಬಿಟ್ಟ ಘಳಿಗೆಯಲ್ಲಿ ನಾನು ಮತ್ತು ಹೆಚ್ಡಿಕೆ ಬಂದಿದ್ದೇವೆ ಎಂದ್ರು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಬಿಜೆಪಿ ಇತಿಹಾಸ ಬದಲಿಸಲು ಮುಂದಾಗಿದೆ

ಪಠ್ಯಪುಸ್ತಕದ ಬಗ್ಗೆ ಪ್ರಸ್ತಾಪ ಮಾಡಿದ ಡಿಕೆಶಿ, ಕೆಂಪೇಗೌಡರು,  ಕುವೆಂಪು ನಾರಾಯಣಗುರು, ಸಿದ್ದಗಂಗಾ ಶ್ರೀ ಸೇರಿದಂತೆ ಹಲವರ ಇತಿಹಾಸ ಬದಲಾಯಿಸಲು ಹೊರಟಿದ್ದಾರೆ. ನಾನು ದೇವೇಗೌಡರು ಇದಕ್ಕೆ ಅವಕಾಶ ಕೊಡಲ್ಲ ಅಂತಾ ಹೇಳಿದ್ದೇವೆ. ಕೆಂಪೇಗೌಡ ಒಕ್ಕಲಿಗರಿಗೆ ಮಾತ್ರ ಬೆಂಗಳೂರು ಕಟ್ಟಲಿಲ್ಲ, ಎಲ್ಲಾ ಸಮುದಾಯದವರಿಗೂ ಸ್ಥಾನವಿದೆ. ಅಟಲ್ ಬಿಹಾರ್ ವಾಜಪೇಯಿ ಕೆಂಪೇಗೌಡರ ಬಗ್ಗೆ ಹೇಳಿದ್ದ ಮಾತನ್ನು ನೆನೆಸಿಕೊಂಡ ಡಿಕೆಶಿ,  ಎಲ್ಲರೂ ಮಠ ಸಮಾಜದ ಜೊತೆ ಇರಿ. ಹುಟ್ಟಬೇಕಾದರೆ ಯಾರು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಮನೆ ಮಠ ಧರ್ಮವನ್ನು ಉಳಿಸಿಕೊಂಡು ಹೋಗಿ ಎಂದು ಡಿಕೆಶಿ ಕರೆ ಕೊಟ್ರು. ಇಡಿ ಅವರು ಬಂಧಿಸಿ ಕಿರುಕುಳ ನೀಡಿದಾಗ ಹೆಚ್ ಡಿ ಕೋಟೆ ಜನ ನೀಡಿದ ಬೆಂಬಲ ಪ್ರೀತಿ ಮರೆಯಲ್ಲ ಎಂದು ಇದೇ ವೇಳೆ ಹೇಳಿದ್ರು.
Published by:Pavana HS
First published: