ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ (Senior Politician), ಮಾಜಿ ಸಿಎಂ (Ex CM), ಹಾಲಿ ವಿಪಕ್ಷ ನಾಯಕ (Opposition Party Leader) ಸಿದ್ದರಾಮಯ್ಯ (Siddaramaiah) ಅವರ 75ನೇ ವರ್ಷದ ಹುಟ್ಟುಹಬ್ಬ (Birthday) ಅದ್ಧೂರಿಯಾಗಿ ಮುಗಿದಿದೆ. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲ ಸೇರಿ ನ ಭೂತೋ ನ ಭವಿಷ್ಯತಿ ಎನ್ನುವಂತೆ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddramotsava) ಹೆಸರಲ್ಲಿ ಹುಟ್ಟುಹಬ್ಬ ನಡೆದಿದ್ದು, ಇದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ವೇದಿಕೆ ಅಂತಾನೇ ವಿಶ್ಲೇಷಿಸಲಾಗಿದೆ. ಈ ಸಿದ್ದರಾಮೋತ್ಸವದ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ (BJP), ತನ್ನ ಪಕ್ಷದ ಹಿರಿಯ ನಾಯಕರೊಬ್ಬರ ಹುಟ್ಟುಹಬ್ಬದ ನೆಪದಲ್ಲಿ ಬೃಹತ್ ರ್ಯಾಲಿ (Rally) ನಡೆಸಲು ಚಿಂತನೆ ನಡೆಸಿದೆ. ಈ ನಡುವೆ ಸಿದ್ದರಾಮೋತ್ಸವದ ಯಶಸ್ಸು ಕಾಂಗ್ರೆಸ್‌ನಲ್ಲೇ ತಲ್ಲಣ ಮೂಡಿಸಿದೆ. ಕಾಂಗ್ರೆಸ್ (Congress) ಸಿಎಂ ರೇಸ್ನಲ್ಲಿ ಇರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆದು, ತಾವೊಂದು ಬೃಹತ್ ರ್ಯಾಲಿ ನಡೆಸಲು ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.
ಬೃಹತ್ ರ್ಯಾಲಿ ನಡೆಸಲು ಡಿಕೆಶಿ ಪ್ಲಾನ್?
ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆದು ಶಕ್ತಿ ಪ್ರದರ್ಶನ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೃಹತ್ ರ್ಯಾಲಿ ನಡೆಸಲು ಡಿಕೆ ಶಿವಕುಮಾರ್ ಯೋಜನೆ ರೂಪಿಸುತ್ತಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಲ್ಲಿ ಶಕ್ತಿ ಪ್ರದರ್ಶನ
ಹೌದು, ಡಿಕೆ ಶಿವಕುಮಾರ್ ಸ್ವಾತಂತ್ರ್ಯ ಅಮೃತ ಮಹೋತ್ಸವ ಹೆಸರಲ್ಲಿ ಬೆಂಗಳೂರಲ್ಲಿ ಬೃಹತ್ ರ್ಯಾಲಿ ನಡೆಸಲು ತೀರ್ಮಾನಿಸಿದ್ದಾರಂತೆ. ಸುಮಾರು 1 ಲಕ್ಷ ಜನರನ್ನಾದರೂ ಸೇರಿಸಿ ಶಕ್ತಿ ಪ್ರದರ್ಶನ ಮಾಡೋದಕ್ಕೆ ಸಿದ್ಧತೆ ನಡೆಸಿದ್ದಾರಂತೆ.
ಇದನ್ನೂ ಓದಿ: Siddaramotsava: ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು! ಸಿದ್ದು ಮೇಲೆ ಸಿಡುಕು ಯಾರಿಗೆ?
ಬಿಬಿಎಂಪಿ ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಟಾಸ್ಕ್
ಮುಂಬರುವ ಬಿಬಿಎಂಪಿ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಟಾಸ್ಕ್ ಕೊಟ್ಟಿದ್ದಾರಂತೆ. ಆಗಸ್ಟ್ 15ರಂದು ಅಮೃತ ಮಹೋತ್ಸವ ಹೆಸರಲ್ಲಿ ರ್ಯಾಲಿ ನಡೆಯಲಿದ್ದು, ಅದಕ್ಕಾಗಿ ಹೆಚ್ಚಿನ ಜನರನ್ನು ಸೇರಿಸಿ ಅಂತ ಬಿಬಿಎಂಪಿ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಟಾಸ್ಕ್ ಕೊಟ್ಟಿದ್ದಾರಂತೆ ಅಂತ ಹೇಳಲಾಗುತ್ತಿದೆ.
ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು!
ಸಿದ್ದರಾಮೋತ್ಸವ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ. ಸಿದ್ದರಾಮೋತ್ಸವ ಸಮಿತಿ ವಿರುದ್ಧ ದೂರು ನೀಡಲಾಗಿದೆ. ಸಿದ್ದರಾಮೋತ್ಸವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿದ್ದಾರೆ ಅಂತ ಟಿವಿ9 ವರದಿ ಮಾಡಿದೆ.
ಇದನ್ನೂ ಓದಿ: Belagavi Politics: ಸಿದ್ದರಾಮೋತ್ಸವ ಬೆನ್ನಲ್ಲೇ ಲಿಂಗಾಯತ ನಾಯಕನ ಬರ್ತ್ ಡೇಗೆ ಬಿಜೆಪಿ ಪ್ಲಾನ್; ರಾಜ್ಯಪಾಲ ಆಗ್ತಾರಾ ಆ ಮುಖಂಡ?
ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸದ್ದಕ್ಕೆ ಆಕ್ಷೇಪ
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮವು ರಾಜ್ಯದ ಜನರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಸಿದ್ದರಾಮಯ್ಯ ಇಂದು ರಾಜಕೀಯ ಗೆಲವು ಸಾಧಿಸಿರುವುದು ಕಾಂಗ್ರೆಸ್‌ನಿಂದ. ಅನ್ಯ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ಕೆಲ ದಿನಗಳಲ್ಲೇ ವಿಪಕ್ಷ ನಾಯಕರಾದರು. ಬಳಿಕ ಸತತ 5 ವರ್ಷಗಳ ವರೆಗೆ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅದಾದ ಬಳಿಕ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವ ಜೊತೆಗೆ ಇದೀಗ ವಿಪಕ್ಷ ನಾಯಕರಾಗಿದ್ದಾರೆ. ಹೀಗಿರುವಾಗ ಪಕ್ಷದ ಚಿಹ್ನೆಯನ್ನು ಸಿದ್ದರಾಮೋತ್ಸವದಿಂದ ದೂರ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಇದರಲ್ಲಿದ್ದರೂ ಪಕ್ಷದ ಚಿಹ್ನೆ ಬಳಸಲು ಅವರಿಗೆ ಮುಜುಗರವಾಯಿತೆ? ಚಿಹ್ನೆ ಬಳಸದೇ ಇರುವುದು ಪಕ್ಷಕ್ಕೆ ಡ್ಯಾಮೇಜ್ ಮಾಡಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ