ಕನಕಪುರದಲ್ಲಿ ಡಿಕೆಶಿ ಆಪ್ತ ತಹಶೀಲ್ದಾರ್ ವರ್ಗಾವಣೆ; ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ

ಏಸು ಪ್ರತಿಮೆ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆ ರಾಮನಗರ ಜಿಲ್ಲೆಯಲ್ಲಿ ಕ್ಲೀನಿಂಗ್ ಮಾಡಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ ಸೂಚನೆ ನೀಡಿದ್ದ ಬೆನ್ನಲ್ಲೇ ರಾತ್ರೋರಾತ್ರಿ ಡಿಕೆಶಿ ಆಪ್ತರಾದ ಕನಕಪುರ ತಹಶೀಲ್ದಾರ್ ಆನಂದಯ್ಯ​​ ಅವರನ್ನು ವರ್ಗಾವಣೆ ಮಾಡಲಾಗಿದೆ.

news18-kannada
Updated:December 31, 2019, 1:26 PM IST
ಕನಕಪುರದಲ್ಲಿ ಡಿಕೆಶಿ ಆಪ್ತ ತಹಶೀಲ್ದಾರ್ ವರ್ಗಾವಣೆ; ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ
ಕನಕಪುರಕ್ಕೆ ನೂತನ ತಹಶೀಲ್ದಾರ್ ನೇಮಕ ಪತ್ರ
  • Share this:
ರಾಮನಗರ (ಡಿ. 31): ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಶಂಕುಸ್ಥಾಪನೆ ಮಾಡುವ ಮೂಲಕ ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವೇಳೆ ಕನಕಪುರದಲ್ಲಿ ಕ್ಲೀನಿಂಗ್ ಶುರು ಮಾಡುವುದಾಗಿ ಡಿಸಿಎಂ ಸೂಚನೆ ನೀಡಿದ್ದರು. ಅದರಂತೆ ಡಿಕೆಶಿಗೆ ಆಪ್ತರಾಗಿದ್ದ ಕನಕಪುರದ ತಹಶೀಲ್ದಾರ್ ಆನಂದಯ್ಯ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ಸೋಮವಾರ ರಾತ್ರಿ ಆದೇಶ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಏಸು ಪ್ರತಿಮೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ರಾಮನಗರ ಜಿಲ್ಲೆಯ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ವಿಚಾರವಾಗಿ ಕನಕಪುರ ತಹಶೀಲ್ದಾರ್ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಾಜಿ ಸಚಿವ ಡಿಕೆಶಿಗೆ ಆಪ್ತರಾಗಿದ್ದ ತಹಶೀಲ್ದಾರ್ ಆನಂದಯ್ಯ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ವರ್ಷಾ ಅವರನ್ನು ನೇಮಕ ಮಾಡಲಾಗಿದೆ. ವರ್ಷಾ ಈ ಮೊದಲು ಯಳಂದೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ನೂತನ ತಹಶೀಲ್ದಾರ್ ವರ್ಷಾ ನೇಮಕಾತಿ ಆದೇಶ


ಅನೇಕ ವರ್ಷಗಳಿಂದ ಕನಕಪುರದಲ್ಲೇ ಅಧಿಕಾರಿಯಾಗಿದ್ದ ಆನಂದಯ್ಯ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್​ಗೆ ಆಪ್ತರಾಗಿದ್ದರು. ಏಸು ಪ್ರತಿಮೆ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆ ರಾಮನಗರ ಜಿಲ್ಲೆಯಲ್ಲಿ ಕ್ಲೀನಿಂಗ್ ಮಾಡಲಾಗುವುದು ಎಂದು ಸೂಚನೆ ನೀಡಿದ್ದ ಡಿಸಿಎಂ ಅಶ್ವತ್ಥನಾರಾಯಣ ಡಿಕೆಶಿ ಆಪ್ತರನ್ನು ಎತ್ತಂಗಡಿ ಮಾಡಿಸತೊಡಗಿದ್ದಾರೆ. ಹೀಗಾಗಿಯೇ ರಾತ್ರೋರಾತ್ರಿ ಕನಕಪುರ ತಹಶೀಲ್ದಾರ್​​ ಅವರನ್ನು ವರ್ಗಾವಣೆ ಮಾಡಲಾಗಿದೆ.

ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತ:

ಕನಕಪುರದ ಕಪಾಲ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಡಿ. 28ರಂದು ಕನಕಪುರ ತಹಶೀಲ್ದಾರ್ ಆನಂದಯ್ಯ, ರಾಮನಗರ ಎಸಿ ದಾಕ್ಷಾಯಿಣಿ ಸ್ಥಳಕ್ಕೆ ಭೇಟಿ ನೀಡಿದ್ದರು. ಅಂದಿನಿಂದ ಬೆಟ್ಟದಲ್ಲಿ ಕೆಲಸಗಾರರು ಯಾರೂ ಇಲ್ಲ. ಸದ್ಯ ಕಪಾಲ ಬೆಟ್ಟ ಸಾತನೂರು ಪೊಲೀಸ್ ಭದ್ರತೆಯಲ್ಲಿದೆ.

ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆ: ನಗರಾದ್ಯಂತ ಖಾಕಿ ಸರ್ಪಗಾವಲು; ಅಸಭ್ಯ ವರ್ತನೆ ವಿರುದ್ಧ ಕಠಿಣ ಕ್ರಮಕಪಾಲಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರಾಗಿದ್ದ 10 ಎಕರೆ ಜಾಗದಲ್ಲಿ ಒಂದು ಧರ್ಮದ ದೇವರ ಪ್ರತಿಮೆ ನಿರ್ಮಾಣ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಸ್​ಮಸ್ ವೇಳೆ ಅದರ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಡಿಕೆಶಿ, ನಾನು ಶಿವಗಿರಿ ಬೆಟ್ಟವನ್ನೂ ಅಭಿವೃದ್ಧಿ ಮಾಡಿದ್ದೇನೆ, ರಾಮನ ಪ್ರತಿಮೆಯನ್ನೂ ನಿರ್ಮಿಸಿದ್ದೇನೆ, ಹಲವಾರು ದೇವಸ್ಥಾನಗಳನ್ನೂ ಅಭಿವೃದ್ಧಿ ಮಾಡಿದ್ದೇನೆ. ಏಸು ಪ್ರತಿಮೆ ವಿಚಾರದಲ್ಲಿ ವಿನಾಕಾರಣ ರಾಜಕೀಯ ಮಾಡಬೇಡಿ ಎಂದು ಹೇಳಿದ್ದರು.

(ವರದಿ: ಎ.ಟಿ. ವೆಂಕಟೇಶ್)
Published by: Sushma Chakre
First published: December 31, 2019, 8:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading