ಇಡಿ ಕಂಟಕದಿಂದ ಪಾರಾದ ಬೆನ್ನಲ್ಲೇ ಡಿಕೆಶಿಗೆ ಎದುರಾಗಿದೆ ಸಿಬಿಐ ಆತಂಕ; ಯಾವಾಗ ಬೇಕಾದರೂ ಆಗಬಹುದು ದಾಳಿ!

ಇಂದು ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದರೂ, ಅಕ್ರಮ ಆಸ್ತಿ, ಸೋಲಾರ್ ಟೆಂಡರ್ ದುರ್ಬಳಕೆ ಪ್ರಕರಣ ಸಂಬಂಧ ಯಾವಾಗ ಬೇಕಾದರೂ ಸಿಬಿಐ ಡಿಕೆಶಿ ನಿವಾಸ, ಕಚೇರಿ, ಆಪ್ತರ ಮೇಲೆ ದಾಳಿ ನಡೆಸಬಹುದು. ಡಿಕೆಶಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

HR Ramesh | news18-kannada
Updated:October 23, 2019, 3:19 PM IST
ಇಡಿ ಕಂಟಕದಿಂದ ಪಾರಾದ ಬೆನ್ನಲ್ಲೇ ಡಿಕೆಶಿಗೆ ಎದುರಾಗಿದೆ ಸಿಬಿಐ ಆತಂಕ; ಯಾವಾಗ ಬೇಕಾದರೂ ಆಗಬಹುದು ದಾಳಿ!
ಡಿ.ಕೆ.ಶಿವಕುಮಾರ್
  • Share this:
ಬೆಂಗಳೂರು:ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಕಳೆದ 48 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇಂದು ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಡಿ ಕಂಟಕದಿಂದ ಪಾರಾದ ಬೆನ್ನಲ್ಲೇ ಡಿಕೆಶಿ ಅವರಿಗೆ ಸಿಬಿಐ ಆತಂಕ ಎದುರಾಗಿದೆ.

ಡಿಕೆಶಿ ಅಕ್ರಮ ಆಸ್ತಿ, ಸೋಲಾರ್ ಟೆಂಡರ್ ದುರ್ಬಳಕೆ ವಿಚಾರದಲ್ಲಿ ಸಿಬಿಐ ತನಿಖೆಗೆ  ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಬೆನ್ನೆಲ್ಲೇ ಸಿಬಿಐ ಈ ಪ್ರಕರಣಗಳ ಸಂಬಂಧ ಪ್ರಾಥಮಿಕ ತನಿಖೆ ಆರಂಭಿಸಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಿಬಿಐ ಅಧಿಕಾರಿಗಳು ದೆಹಲಿಯ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿದ್ದರು.

ಇಂದು ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದರೂ, ಅಕ್ರಮ ಆಸ್ತಿ, ಸೋಲಾರ್ ಟೆಂಡರ್ ದುರ್ಬಳಕೆ ಪ್ರಕರಣ ಸಂಬಂಧ ಯಾವಾಗ ಬೇಕಾದರೂ ಸಿಬಿಐ ಡಿಕೆಶಿ ನಿವಾಸ, ಕಚೇರಿ, ಆಪ್ತರ ಮೇಲೆ ದಾಳಿ ನಡೆಸಬಹುದು. ಡಿಕೆಶಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನು ಓದಿ:DK Shivakumar: ದೆಹಲಿ ನ್ಯಾಯಾಲಯದಿಂದ ಡಿಕೆ ಶಿವಕುಮಾರ್​ಗೆ ಜಾಮೀನು ಮಂಜೂರು

First published: October 23, 2019, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading