ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ನಿಶ್ಚಿತ: ಡಿಕೆಶಿ ವಿಶ್ವಾಸ

ಶ್ರೀರಾಮುಲುಗೆ ಕುಸ್ತಿ ಆಡಲು ಬರೊಲ್ಲ. ಅದಕ್ಕೆ ದೇವೇಂದ್ರಪ್ಪ ಅವರನ್ನು ಕಳುಹಿಸಿದ್ದಾರೆಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

G Hareeshkumar | news18
Updated:April 8, 2019, 5:48 PM IST
ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ನಿಶ್ಚಿತ: ಡಿಕೆಶಿ ವಿಶ್ವಾಸ
ಸಚಿವ ಡಿ ಕೆ ಶಿವಕುಮಾರ್
  • News18
  • Last Updated: April 8, 2019, 5:48 PM IST
  • Share this:
ಬಳ್ಳಾರಿ(ಏ.08) : ರಾಮಮಂದಿರ ಕಟ್ಟಲು‌ ರಥಯಾತ್ರೆ ಮಾಡಲು ಮುಂದಾದವರಿಗೆಲ್ಲ ರೆಸ್ಟ್ ಕೊಟ್ಟಿದ್ದಾರೆ. ಮುಂದೆ ಯಡಿಯೂರಪ್ಪಗೂ ರೆಸ್ಟ್ ಕೊಡ್ತಾರೆ. ಪಾಪ ಬಿಎಸ್​ವೈ ಮುಖ್ಯಮಂತ್ರಿಯಾಗ್ತಾನೆ ಎಂದು ಕನಸು ಕಾಣ್ತಿದಾರೆ. ನಾವು ನುಡಿದಂತೆ ನಡೆಯುತ್ತಿದ್ದು, ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬಳ್ಳಾರಿಯಲ್ಲಿ ಮಾತನಾಡಿದ ಸಚಿವರು, ಮಂಗಳೂರಿನಲ್ಲಿ ನಮ್ಮಅಭ್ಯರ್ಥಿ ಕೇಸರಿ‌ ಶಾಲು ಯಾಕೆ ಹಾಕಬಾರದು? ರಾಹುಲ್‌ ಗಾಂಧಿ ನಮಗೆ ದೀಕ್ಷೆ‌ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜ, ನಮ್ಮ ಧರ್ಮಕ್ಕೆ ಗೌರವ ಕೊಡಬೇಕು. ಬಿಜೆಪಿಯವರು ಎಲ್ಲಾ ಸಮುದಾಯಗಳನ್ನ ಒಳಗೊಳ್ಳದೆ ನಾವೆಲ್ಲಾ ಹಿಂದೂ ನಾವೆಲ್ಲಾ ಮುಂದು ಎನ್ನುತ್ತಾರೆ ಎಂದು ಟೀಕಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಈ ವಿಚಾರದಲ್ಲಿ ತಾನು ಈಗಾಗಲೇ ಕ್ಷಮಾಪಣೆ ಕೇಳಿದ್ದೇನೆ. ಮತ್ತೆ ಆ ತಂಟೆಗೆ ನಾವು ಹೋಗುವುದಿಲ್ಲ ಎಂದು ವಾಗ್ದಾನ ನೀಡಿದರು.

ರಾಮಮಂದಿರ ಮಾಡಲು ಮುಂದಾದವರು ಇದೀಗ ಏನಾಗಿದ್ದಾರೆ? ದೆಹಲಿಯಲ್ಲಿ ಆ ನಾಯಕರು ಇದೀಗ ರೆಸ್ಟ್ ನಲ್ಲಿದ್ದಾರೆ. ಯಡಿಯೂರಪ್ಪ ಸಹ ರೆಸ್ಟ್ ತಗೋತಾರೆ. ಜೈಲಿನಲ್ಲಿರುವ ಕಂಪ್ಲಿ ಶಾಸಕ ಗಣೇಶ್ ಅವರನ್ನ ನಿನ್ನೆ ಭೇಟಿ ಮಾಡಿದೆ. ಅವರು ನೋವಿನಲ್ಲಿದ್ದಾರೆ. ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಮಾಡಿದ ತಪ್ಪನ್ನು ತಿದ್ದುವುದು ಜಿಲ್ಲಾ ಸಚಿವನಾಗಿ ನನ್ನ ಕೆಲಸವಾಗಿದೆ ಎಂದರು.

ಬಿಜೆಪಿ ಶಾಸಕ ಈಶ್ವರಪ್ಪ ಅವರು ಸಿಎಂ ಬಗ್ಗೆ 'ನೆಗೆದುಬೀಳ್ತಾರೆ' ಎಂದು ಹೇಳ್ತಾರೆ ಅವರಿಗೆ ನಿಜಕ್ಕೂ ಸಂಸ್ಕೃತಿ ಇದೆಯಾ? ಎಂದು ಡಿಕೆಶಿ ಪ್ರಶ್ನಿಸಿದರು.

ತಾನು ಉಗ್ರಪ್ಪ ಪಂಚಾಯ್ತಿ ಮಾಡಲಿ ಎಂದು ಹೇಳಿಲ್ಲ. ಪಂಚಾಯ್ತಿ ಕೆಲಸವನ್ನ ಪಿಟಿ ಪರಮೇಶ್ವರ್ ನಾಯಕ್ ಮಾಡಲಿ. ಉಗ್ರಪ್ಪ ಸದನದಲ್ಲಿ ಮಾತನಾಡಲಿ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಶಾಸಕ ನಾಗೇಂದ್ರ ಸಹೋದರ ಪ್ರಸಾದ್ ಮುಂದಿನ ನಡೆಯೇನು? 'ಕಮಲ'ದಲ್ಲೂ ಕಾಣುತ್ತಿಲ್ಲ, 'ಕೈ'ಗೂ ಸಿಗುತ್ತಿಲ್ಲಶಾಸಕ ಶ್ರೀರಾಮುಲುಗೆ ಕುಸ್ತಿ ಆಡಲು ಬರೊಲ್ಲ. ಅದಕ್ಕೆ ದೇವೇಂದ್ರಪ್ಪ ಅವರನ್ನು ಕಳುಹಿಸಿದ್ದಾರೆಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ

ನಿನ್ನೆ ರಾತ್ರಿ ಕಂಪ್ಲಿ ಶಾಸಕ ಗಣೇಶ್ ಭೇಟಿ ಮಾಡಲು ಜೈಲಿಗೆ ಹೋಗಿದ್ದೆ. ಅಧಿಕೃತವಾಗಿ ಭೇಟಿ ಮಾಡಿದ್ದೇನೆ. ಆ ಘಟನೆ ಆಗಬಾರದಿತ್ತು. ಪಾಪ ಜೈಲಿನಲ್ಲಿದ್ದಾನೆ. ಮಾನವೀಯತೆಯ ದೃಷ್ಟಿಯಿಂದ ಭೇಟಿ ಮಾಡಿದ್ದೇನೆ. ಸೌಹಾರ್ದತೆಯಿಂದ ನಡೆದುಕೊಂಡು‌ ಹೋಗ್ತೇವೆ. ನಾಗೇಂದ್ರ, ಭೀಮಾನಾಯ್ಕ ಎಲ್ಲರೂ ನಮ್ಮ ಜೊತೆಗಿದ್ದಾರೆ ಎಂದು ಡಿಕೆಶಿ ತಿಳಿಸಿದರು.

ವರದಿ: ಶರಣು ಹಂಪಿ

First published:April 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ