Aishwarya-Amartya Wedding: ಮಗಳು ಐಶ್ವರ್ಯ ಮದುವೆಗೆ ಕನಕಪುರದ 2.5 ಲಕ್ಷ ಜನರಿಗೆ ಬಟ್ಟೆ, ಸ್ವೀಟ್ ಬಾಕ್ಸ್​ ಹಂಚಿದ ಡಿಕೆ ಶಿವಕುಮಾರ್!

Aishwarya-Amartya Wedding: ಮಗಳು ಐಶ್ವರ್ಯ ಮದುವೆಗೆ ಡಿಕೆ ಶಿವಕುಮಾರ್ ಬೆಂಬಲಿಗರು ಕನಕಪುರದ ಪುರುಷ ಮತದಾರರಿಗೆ ರೇಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್ ಹಾಗೂ ಮಹಿಳಾ ಮತದಾರರಿಗೆ ಬನಾರಸ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಸ್ವೀಟ್ ಬಾಕ್ಸ್ ವಿತರಣೆ ಮಾಡಿಸಿದ್ದಾರೆ.

ಡಿಕೆ ಶಿವಕುಮಾರ್ ಮಗಳು ಐಶ್ವರ್ಯ- ಅಮರ್ಥ್ಯ ಮದುವೆ

ಡಿಕೆ ಶಿವಕುಮಾರ್ ಮಗಳು ಐಶ್ವರ್ಯ- ಅಮರ್ಥ್ಯ ಮದುವೆ

  • Share this:
ಬೆಂಗಳೂರು (ಫೆ.14): ಪ್ರೇಮಿಗಳ ದಿನವಾದ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿಯಾಗಿ ಮಗಳ ಮದುವೆ ಮಾಡಿರುವ ಡಿ.ಕೆ ಶಿವಕುಮಾರ್ ಕೊರೋನಾ ಹಿನ್ನೆಲೆಯಲ್ಲಿ 800 ಅತಿ ಗಣ್ಯರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಿದ್ದರು. ಡಿ.ಕೆ ಶಿವಕುಮಾರ್ ಅವರ ತವರು ಕ್ಷೇತ್ರವಾದ ಕನಕಪುರದ ಜನರಿಗೆ ತಮ್ಮ ಮಗಳ ಮದುವೆಯ ಉಡುಗೊರೆ ನೀಡಿದ್ದಾರೆ. ತಮ್ಮ ಊರುಗಳಿಂದಲೇ ಮದುವೆಗೆ ಹಾರೈಸುವಂತೆ ಸ್ವೀಟ್ ಬಾಕ್ಸ್​ಗಳನ್ನು ಕೂಡ ಹಂಚಿದ್ದಾರೆ. ಅಂದಹಾಗೆ, ಕೋಟ್ಯಂತರ ರೂ. ಖರ್ಚು ಮಾಡಿ ಅದ್ದೂರಿಯಾಗಿ ಮಗಳ ಮದುವೆಯ ಸಿದ್ಧತೆ ಮಾಡಿರುವ ಡಿಕೆ ಶಿವಕುಮಾರ್ ಕನಕಪುರದ ಜನರಿಗೆ ಉಡುಗೊರೆ ನೀಡಲು ಖರ್ಚು ಮಾಡಿದ ಹಣವೆಷ್ಟು ಎಂದು ಗೊತ್ತಾದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಟ್ಟೆ ಹಾಗೂ ಸ್ವೀಟ್ ಬಾಕ್ಸ್​ಗಳನ್ನು ಹಂಚಿರುವ ಡಿಕೆ ಶಿವಕುಮಾರ್ ತಮ್ಮ ಮಗಳ ಮದುವೆಗೆ ಆಶೀರ್ವಾದ ಮಾಡುವಂತೆ ಕೋರಿದ್ದಾರೆ. ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಮಗ ಅಮರ್ಥ್ಯ ಹೆಗ್ಡೆ ಹಾಗೂ ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಮದುವೆ ಇಂದು ನೆರವೇರಿದೆ. ಹೀಗಾಗಿ, ಕುಟುಂಬಸ್ಥರಿಗೆ ಮಾತ್ರವಲ್ಲದೆ ತಮ್ಮ ಕ್ಷೇತ್ರದ ಎಲ್ಲ ಮತದಾರರಿಗೂ ಡಿಕೆಶಿ ಬಟ್ಟೆ ಹಂಚಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದ ಸುಮಾರು ಎರಡೂವರೆ ಲಕ್ಷ ಜನರಿಗೆ ಡಿಕೆ ಶಿವಕುಮಾರ್ ಉಡುಗೊರೆ ನೀಡಿದ್ದಾರೆ. ಕನಕಪುರದ ಡಿಕೆಶಿ ಬೆಂಬಲಿಗರು ಕನಕಪುರದ ಪುರುಷ ಮತದಾರರಿಗೆ ರೇಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್ ಹಾಗೂ ಮಹಿಳಾ ಮತದಾರರಿಗೆ ಬನಾರಸ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕನಕಪುರ ಕ್ಷೇತ್ರದ ಪ್ರತಿ ಗ್ರಾಮದ ಜನರಿಗೂ ಉಡುಗೊರೆ ಹಂಚಿಕೆ ಮಾಡಲಾಗಿದೆ.ಇಲ್ಲಿನ 2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆ ತಲುಪಿದೆ. 1 ಸೀರೆಗೆ 3,500 ರೂ.ನಿಂದ 5,000 ರೂ. ಎಂದು ಅಂದಾಜಿಸಲಾಗಿದೆ. ಪ್ಯಾಂಟ್, ಶರ್ಟ್​ಗೆ 3,000ದಿಂದ 4,500 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಿರಿಯರಿಗೆ ಪಂಚೆ, ಶರ್ಟ್ ಕೂಡ ಕೊಡಲಾಗಿದೆ. ಪ್ರತಿ ಗ್ರಾಮಕ್ಕೂ ಹೋಗಿ ಡಿ‌ಕೆಶಿ ಬೆಂಬಲಿಗರು ಉಡುಗೊರೆ ಹಂಚಿದ್ದಾರೆ. ಇದಕ್ಕಾಗಿ ಒಟ್ಟಾರೆ 50 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Aishwarya-Amartya Marriage: ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ-ಅಮರ್ಥ್ಯ ಅದ್ದೂರಿ ಮದುವೆ ಹೇಗಿತ್ತು ಗೊತ್ತಾ?

ಕೊರೋನಾ ಇಲ್ಲದಿದ್ದರೆ ಕನಕಪುರದಲ್ಲಿಯೇ ಅದ್ದೂರಿಯಾಗಿ ಮಗಳ ಮದುವೆ ಮಾಡಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದರು. ಆದರೆ, ಕೊರೋನಾ ಇರುವ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮದುವೆ ಮಾಡಲಾಗಿದೆ. ಹೀಗಾಗಿ, ಸ್ವಕ್ಷೇತ್ರ ಕನಕಪುರ ಜನರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಮಗಳ ಮದುವೆಗೆ ಕೋಟ್ಯಾಂತರ ರೂ. ಖರ್ಚು ಮಾಡಿ ಉಡುಗೊರೆ ನೀಡಿರುವ ಡಿಕೆಶಿ ನಿನ್ನೆ ರಾತ್ರಿಯಿಂದಲೇ ಕನಕಪುರ ಕ್ಷೇತ್ರದ ಜನರಿಗೆ ಸ್ವೀಟ್ ಬಾಕ್ಸ್ ವಿತರಣೆ ಮಾಡಿಸಿದ್ದಾರೆ.ಕನಕಪುರ ಕ್ಷೇತ್ರದ ಪ್ರತಿ ಮನೆಗೂ ಬಗೆಬಗೆಯ ಸಿಹಿ ತಿನಿಸುಗಳ ಬಾಕ್ಸ್ ವಿತರಣೆ ಮಾಡಲಾಗಿದೆ. ಮತದಾರರ ಆರ್ಶೀವಾದ ಸದಾ ನನ್ನ ಮಗಳ ಮೇಲಿರಲಿ ಎಂದು ಡಿಕೆಶಿ ಕೋರಿದ್ದಾರೆ. ದುಬಾರಿ ಬೆಲೆಯ ಸ್ವೀಟ್ ಬಾಕ್ಸ್​ಗಳನ್ನು ನೀಡಲಾಗಿದ್ದು, ಮಗಳ ಮದುವೆ ದಿನದಂದೇ ಜನರಿಗೆ ಸ್ವೀಟ್ ಕೊಡಬೇಕೆಂದು ಡಿಕೆಶಿ ಸೂಚನೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ, ಕಳೆದ ರಾತ್ರಿಯಿಂದಲೇ ಕ್ಷೇತ್ರದ ಜನರಿಗೆ ಸ್ವೀಟ್ ಬಾಕ್ಸ್ ವಿತರಣೆ ಮಾಡಲಾಗಿದೆ.

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಬಳಿಕ ಅಮರ್ಥ್ಯ ಮತ್ತು ಐಶ್ವರ್ಯಾಳ ಮದುವೆ ವಿಷಯ ಮುನ್ನೆಲೆಗೆ ಬಂದಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಡಿಕೆ ಶಿವಕುಮಾರ್ ಕುಟುಂಬಸ್ಥರು ಎಸ್ಎಂ ಕೃಷ್ಣ ಅವರ ಮನೆಗೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಬಳಿಕ ಲಾಕ್​ಡೌನ್ ಸಮಯದಲ್ಲಿ ಅವರಿಬ್ಬರ ನಿಶ್ಚಿತಾರ್ಥವೂ ನೆರವೇರಿತ್ತು. ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಇಂದು ಅದ್ದೂರಿಯ ಮದುವೆ ನಡೆದಿದೆ.

(ವರದಿ: ಎ.ಟಿ. ವೆಂಕಟೇಶ್)
Published by:Sushma Chakre
First published: