HOME » NEWS » State » DK SHIVAKUMAR CRITICIZES STATE BJP MPS FOR NOT BRINGING FLOOD RELIEF PACKAGE FROM CENTRE HK

ನೆರೆ ಪರಿಹಾರ ತರುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ಶಾಸಕ ರಾಮಲಿಂಗಾರೆಡ್ಡಿ ಯವರು ನನ್ನಷ್ಟೇ ಹಿರಿಯ ನಾಯಕರು. ಅವರಿಗೆ ಎಲ್ಲಾ ಅರ್ಹತೆಗಳು ಇವೆ. ಹೈಕಮಾಂಡ್ ಗಮನಕ್ಕೆ ಈ ವಿಚಾರಗಳನ್ನ ತಂದು ಅವರ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ನಾನು ಮಾಡುತ್ತೇನೆ

news18-kannada
Updated:September 18, 2020, 4:31 PM IST
ನೆರೆ ಪರಿಹಾರ ತರುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​
  • Share this:
ಬೆಂಗಳೂರು(ಸೆಪ್ಟೆಂಬರ್ 18): ಕೇಂದ್ರದಿಂದ ನೆರೆ ಪರಿಹಾರ ಬಾರದೆ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ‌ಗೆದ್ದು ಹೋಗಿದ್ದಾರೆ. ಇವರು ಪ್ರಧಾನಿಗಳ ಮುಂದೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಸಂಸದರು ಮುಖ್ಯಮಂತ್ರಿಗೆ ಬೆಂಬಲವನ್ನು ಕೊಡಬೇಕು. ಅದನ್ನೂ ಅವರು ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಟೀಕಿಸಿದರು. ಜಿಎಸ್​ಟಿ, ರಾಜ್ಯದ ನೆರೆ ಪರಿಹಾರದ ಬಗ್ಗೆ ಯಾರು ಮಾತನಾಡುತ್ತಿಲ್ಲ. ರಾಜ್ಯಕ್ಕೆ ‌ದ್ರೋಹ ಮಾಡುತ್ತಿರುವುದು ರಾಜ್ಯದ ಸಂಸದರುಗಳೇ. ಸಿಎಂ ದೆಹಲಿಗೆ ಬರುತ್ತಾರೆ, ಹೋಗುತ್ತಾರೆ, ಅವರನ್ನ ಕಾಯಬೇಕಿಲ್ಲ. ರಾಜ್ಯದ ಪ್ರಾಜೆಕ್ಟ್​ಗಳ ಬಗ್ಗೆ ಸಂಸದರುಗಳೇ ಪ್ರಧಾನಿಗಳ ಜೊತೆ  ಮಾತನಾಡಿ ತರಬಹುದು. ಹಿಂದೆಯೂ ಅವರು ಮಾತನಾಡಿಲ್ಲ. ಈಗ ಕುರ್ಚಿಯ ಭಯದಿಂದ ಅವರು ಮಾತನಾಡುತ್ತಿಲ್ಲ. ಮತದಾರರು ಮತ ನೀಡಿ ಅವರನ್ನ ಕಳಿಸಿಕೊಟ್ಟಿದ್ದಾರೆ. ಈ ಬಗ್ಗೆ ರಾಜ್ಯದ ಜನರೇ ಪ್ರಶ್ನೆ ಮಾಡಬೇಕು ಎಂದರು.

ಇದೇ ಸೆಪ್ಟೆಂಬರ್​ 21 ರಂದು  ಮುಂಗಾರು ಅಧಿವೇಶನ ಆರಂಭವಾಗುತ್ತದೆ. ಯಾವ ವಿಚಾರ ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಿಎಲ್ ಪಿ ‌ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇರೋದು ಏಳೆಂಟು ದಿನ ಕಲಾಪ ಇರುವುದು ಅವರು ತಂದಿರುವ ಬಿಲ್ ನೋಡಿದ್ರೆ ಗಾಬರಿಯಾಗುತ್ತೆ. ಡಿಜೆ ಹಳ್ಳಿ ಪ್ರಕರಣ, ಕೊರೋನಾ, ಮೆಡಿಕಲ್ ಕಿಟ್ ಹಗರಣ ಆಡಳಿತ ನಡೆಸಲು ವಿಫಲವಾದ ಸರ್ಕಾರ ಇದೆಲ್ಲದರ ಬಗ್ಗೆ ಸದನಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಸಮನ್ವಯಯ ಕೊರತೆ ಕಾಣುತ್ತದೆ. ಯಾವ ಇಲಾಖೆಯಲ್ಲಿ ಯಾರೋ ಆಡಳಿತ ನಡೆಸುತ್ತಾರೆ. ಕೊರೋನಾ ಇದ್ದಾಗಲೇ ಹಲವರನ್ನ ಚೇಂಜ್ ಮಾಡಿದರು. ಕೆಲವರು ಅಧಿಕಾರಿಗಳನ್ನೂ ಬದಲಾಯಿಸಿದರು. ಕೊರೋನಾ ವಿಚಾರದಲ್ಲಿ ಮಾಧ್ಯಮದವರು ಎಲ್ಲಾ ವಿಚಾರಗಳನ್ನು ಜನರಿಗೆ ತೋರಿಸಿದ್ದೀರಿ. ಬಿಐಇಸಿಯನ್ನ ಮುಚ್ಚಿದ್ದಾರೆ. ಇದೆಲ್ಲವೂ ಸರ್ಕಾರದ ವೈಫಲ್ಯವೇ ಅಲ್ಲವೇ ಎಂದು ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್​ ವಾಗ್ದಾಳಿ ನಡೆಸಿದರು.

ರಾಮಲಿಂಗಾರೆಡ್ಡಿ ಅಸಮಾಧಾನ ವಿಚಾರ ಶಾಸಕ ರಾಮಲಿಂಗಾರೆಡ್ಡಿ ಯವರು ನನ್ನಷ್ಟೇ ಹಿರಿಯ ನಾಯಕರು. ಅವರಿಗೆ ಎಲ್ಲಾ ಅರ್ಹತೆಗಳು ಇವೆ. ಹೈಕಮಾಂಡ್ ಗಮನಕ್ಕೆ ಈ ವಿಚಾರಗಳನ್ನ ತಂದು ಅವರ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.

ಸಿಸಿಬಿ ಅಧಿಕಾರಿಗಳಿಂದ ಆರ್​ ಯುವರಾಜ್ ಗೆ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ. ಅನುಮಾನ ಇರುವವರಿಗೆ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಮಾಡಬಹುದು. ಆದರೆ, ಪೊಲೀಸರು ಏಕಾಏಕಿ ಯಾರಿಗೋ ಸುಮ್ಮೆ ನೋಟಿಸ್ ಕೊಡಲ್ಲ. ಏನೋ ಒಂದು ಮಾಹಿತಿ ಇರುತ್ತೆ, ಅದಕ್ಕೆ ಕೊಟ್ಟಿರುತ್ತಾರೆ.ಯಾರು ತಪ್ಪು ಮಾಡಿರುತ್ತಾರೋ ಅವರ ವಿರುದ್ದ ಕ್ರಮ ತಗೊಳ್ಳಲ್ಲಿ ಎಂದರು ತಿಳಿಸಿದರು.

ಇದನ್ನೂ ಓದಿ : ಕೊರೋನಾ ಭೀತಿಯಲ್ಲೂ ವೈದ್ಯರು ಮುಷ್ಕರಕ್ಕೆ ಮುಂದಾಗಿರುವುದು ಮಾನವೀಯತೆಯಲ್ಲ : ಡಾ.ಕೆ.ಸುಧಾಕರ್

ಡ್ರಗ್ಸ್ ‌ಕೇಸ್ ಬಗ್ಗೆ ಈಗ ಮಾತನಾಡಲ್ಲ. ಸಚಿವರು ವಿಭಿನ್ನವಾದ ಮಾತನಾಡುತ್ತಾರೆ. ಪೊಲೀಸರು ತನಿಖೆ ಮಾಡುತ್ತಾರೋ,ಇವರೇ ಮಾಡುತ್ತಾರೋ ಗೊತ್ತಿಲ್ಲ. ಗೃಹ ಸಚಿವರು ಸ್ಟೇಟ್​ಮೆಂಟ್ ಕೊಡುವುದನ್ನ ನೋಡಿದ್ದೇನೆ. ಆದರೆ, ಇಲ್ಲಿ ಬೇರೆಯವರೇ ಹೇಳಿಕೆ ಕೊಡುತ್ತಾರೆ ಎಂದರು.

ಡ್ರಗ್ಸ್ ಕೇಸ್ ವಿಚಾರದಲ್ಲಿ ಜಮೀರ್ ಅಹ್ಮದ್‌ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,  ಕೊಲಂಬೋಗೆ ಬೇರೆ ಕಡೆ ಹೋಗೋದು ಅವರ ಜೀವನ. ಯಾರು ಬೇಕಾದರೂ ಹೋಗಬಹುದು ಸಚಿವ ಸಿ.ಟಿ.ರವಿ ಹಿರಿಯರು ತನಿಖಾ ಅಧಿಕಾರಿ ಅವರೇ ಒತ್ತಡದ ಬಗ್ಗೆ ಮಾಹಿತಿ ಕೊಡಬಹುದಲ್ಲಾ ಎಂದು ಹೇಳಿದರು.
Published by: G Hareeshkumar
First published: September 18, 2020, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories