makara sankranti: ಸಂಕ್ರಾಂತಿ ಪ್ರಯುಕ್ತ ಗೋ ಪೂಜೆ ನೆರವೇರಿಸಿದ ಡಿಕೆಶಿ ದಂಪತಿ

ಪತ್ನಿ ಉಷಾ ಜೊತೆ ಡಿಕೆ ಶಿವಕುಮಾರ್​

ಪತ್ನಿ ಉಷಾ ಜೊತೆ ಡಿಕೆ ಶಿವಕುಮಾರ್​

ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಗೋ ಹತ್ಯೆ ಕಾಯ್ದೆ ವಿರುದ್ಧ ಕಾಂಗ್ರೆಸ್​ ನಾಯಕರು ಟೀಕೆ ನಡೆಸುತ್ತಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷರು ಗೋ ಪೂಜೆ ಮಾಡಿರುವುದು ಗಮನ ಸೆಳೆದಿದೆ. 

  • Share this:

ಬೆಂಗಳೂರು (ಜ. 14) : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಅವರ ಧರ್ಮಪತ್ನಿ ಉಷಾ ಶಿವಕುಮಾರ್ ಅವರು ಇಂದು  ಸದಾಶಿವನಗರದ ತಮ್ಮ ನಿವಾಸದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗುರುವಾರ ಗೋಪೂಜೆ ನೆರವೇರಿಸಿದರು.ಪ್ರ ತಿವರ್ಷ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದ ಡಿಕೆಶಿ ಈ ಬಾರಿ ಕೊಗೋನಾ ನಿಯಮಾವಳಿ ಜಾರಿಯಲ್ಲಿರುವ ಹಿನ್ನೆಲೆ ಕುಟುಂಬ ಸದಸ್ಯರ ಜೊತೆಗೆ ಅತ್ಯಂತ ಸರಳವಾಗಿ ಹಬ್ಬವನ್ನು ಆಚರಿಸಿದರು. ಪ್ರತಿವರ್ಷ ತಮ್ಮ ಸದಾಶಿವನಗರ ನಿವಾಸದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾ ಬಂದಿರುವ ಅವರು ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ಸಂಕ್ರಾಂತಿ ಆಚರಣೆ ಮಾಡಿದ್ದಾರೆ.


ಸಂಕ್ರಾಂತಿಯಲ್ಲಿ ಸಾಮಾನ್ಯವಾಗಿ ಎತ್ತುಗಳ ಪೂಜೆ ಮಾಡಲಾಗುತ್ತದೆ. ಇದೇ ಹಿನ್ನಲೆ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಸಿಂಗರಿ ಕೆಪಿಸಿಸಿ ಅಧ್ಯಕ್ಷರು ಪೂಜೆ ಸಲ್ಲಿಸಿದರು.  ಉಷಾ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನವನ್ನು  ಮೂಲಕ ಪೂಜೆ ಮಾಡಿದರು. ಡಿಕೆಶಿ ಸಂಪೂರ್ಣ ಪೂಜಾ ವಿಧಿವಿಧಾನ ನೆರವೇರುವ ಸಂದರ್ಭವೂ ಜೊತೆಯಲ್ಲಿ ಪಾಲ್ಗೊಂಡರು.


ಇದನ್ನು ಓದಿ: ಬಿಜೆಪಿ ಎಂಬುದು ಬ್ಲಾಕ್​ಮೇಲ್​ ಜನತಾ ಪಾರ್ಟಿ: ಡಿಕೆ ಶಿವಕುಮಾರ್​


ಸಾಮಾನ್ಯವಾಗಿ ನಿವಾಸದಲ್ಲಿ ನಿತ್ಯ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗುತ್ತಿದ್ದ ಶಿವಕುಮಾರ್ ಇಂದು ಅಂತಹ ಯಾವುದೇ ಪ್ರೀತಿಯ ಸಭೆ ಅಥವಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ. ಮಧ್ಯಾಹ್ನ ಹಬ್ಬದೂಟವನ್ನು ಪೂರೈಸಿ ನಂತರ ಕೆಪಿಸಿಸಿ ಕಚೇರಿಗೆ ಆಗಮಿಸಿದ ಡಿಕೆಶಿ ಸುದ್ದಿಗೋಷ್ಠಿ ನಡೆಸಿದರು.


ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಗೋ ಹತ್ಯೆ ಕಾಯ್ದೆ ವಿರುದ್ಧ ಕಾಂಗ್ರೆಸ್​ ನಾಯಕರು ಟೀಕೆ ನಡೆಸುತ್ತಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷರು ಗೋ ಪೂಜೆ ಮಾಡಿರುವುದು ಗಮನ ಸೆಳೆದಿದೆ.

top videos
    First published: