ಚಿಕ್ಕಮಗಳೂರು: ನನ್ನ ಚುನಾವಣಾ ಪ್ರಚಾರ ಶೃಂಗೇರಿ (Sringeri) ಕ್ಷೇತ್ರದಿಂದ ಆರಂಭವಾಗಿದ್ದು, ಬೆಳಗ್ಗೆ ಮಂಜುನಾಥ ಸ್ವಾಮಿ ಈಗ ಶಾರದಾಂಬೆ ದರ್ಶನ ಮಾಡಿ ಪ್ರಾರ್ಥಿಸಿದ್ದೇನೆ. ಯಾವ, ಯಾಗ ಪೂಜೆ ಮಾಡಬೇಕೆಂಬುದು ಭಕ್ತ (Devote) ಹಾಗೂ ತಾಯಿಗೆ (Mother) ಬಿಟ್ಟ ವಿಚಾರ. ಅದು ಬೇರೆ ಯಾರಿಗೂ ಸಂಬಂಧಿಸಿದ್ದಲ್ಲ . ಇಲ್ಲಿ ಯಾವುದೇ ಕಲ್ಮಶವೂ ಇಲ್ಲ, ರಾಜಕಾರಣವೂ ಇಲ್ಲ. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಇದೇ ವೇಳೆ ನಾನು ಕನಕಪುರದಲ್ಲಿ (Kanakapura) ಅಭ್ಯರ್ಥಿಯೇ ಅಲ್ಲ, ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ ಉಳಿದಿದ್ದೆಲ್ಲ ಅವರೇ ಮಾಡಿಕೊಳ್ಳುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶೃಂಗೇರಿಯಲ್ಲಿ ಚಂಡಿಕಾ ಯಾಗದ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಶೃಂಗೇರಿಯಲ್ಲಿ ರಾಜೀವ್ ಗಾಂಧಿ ಕೂಡ ದೊಡ್ಡ ಹೋಮ-ಯಾಗ ನಡೆಸಿದ ಇತಿಹಾಸವಿದೆ. ಇಂದಿರಾ ಗಾಂಧಿ ಕಾಲದಿಂದಲೂ ಇಲ್ಲಿ ನಡೆದಿರುವುದು ಗೊತ್ತಿದೆ. ನಮಗೂ ಈ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ. ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪ್ರತಿ ಮನೆಯಲ್ಲೂ ಡಿಕೆ ಶಿವಕುಮಾರ್ ಇದ್ದಾನೆ ಅವರೇ ಅಭ್ಯರ್ಥಿಗಳು. ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ . ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ ಉಳಿದಿದ್ದೆಲ್ಲ, ಅವರೇ ಮಾಡಿಕೊಳ್ಳುತ್ತಾರೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವಂತೆ ವಿಘ್ನೇಶ್ವರನ ಬಳಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು, ಚುನಾವಣೆ ಕಾವೇರಿರುವ ಹೊತ್ತಲ್ಲೇ ಡಿಕೆ ಶಿವಕುಮಾರ್ ಕುಟುಂಬಕ್ಕೂ ಚುನಾವಣಾ ಬಿಸಿ ತಟ್ಟಿದೆ. ಡಿಕೆ ಶಿವಕುಮಾರ್ ಕುಟುಂಬ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದಿದ್ದರು. ಈ ವೇಳೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದ್ದರು.
ಇದು ಖಾಸಗಿ ಹೆಲಿಕಾಪ್ಟರ್, ತಪಾಸಣೆ ಮಾಡಲು ಅವಕಾಶವಿಲ್ಲ ಎಂದು ಪೈಲಟ್ ರಾಮ್‌ದಾಸ್ ಹೇಳಿದ್ದರು. ಆಗ ಚುನಾವಣಾ ಅಧಿಕಾರಿ ಹಾಗೂ ಪೈಲಟ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಮತ್ತು ಡಿಕೆ ಶಿವಕುಮಾರ್ ಅವರ ಕಾರನ್ನೂ ಕೂಡಾ ತಪಾಸಣೆ ಮಾಡಿದ್ದಾರೆ.
ಇದನ್ನೂ ಓದಿ: Karnataka Election 2023: ಸೋಮಣ್ಣ ವರುಣಾದಲ್ಲಿ ಸ್ಪರ್ಧಿಸಿದ್ದೇಕೆ? ಸೀಕ್ರೆಟ್ ರಿವೀಲ್ ಮಾಡಿದ ಸಿದ್ದರಾಮಯ್ಯ!
ಧರ್ಮಸ್ಥಳ ಭೇಟಿ ಕುರಿತಂತೆ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಮಾತನಾಡಿಸಿ ಆಶೀರ್ವಾದ ಪಡೆದೆ. ಧಾರ್ಮಿಕ, ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಹೆಸರಾಗಿರುವ ಈ ಕ್ಷೇತ್ರ ಕರ್ನಾಟಕದ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ