HOME » NEWS » State » DK SHIVAKUMAR BJP NOT BEHIND THE CBI RAID ON DK SHIVAKUMAR SAYS MINISTER KS ESHWARAPPA SCT

DK Shivakumar: ಡಿಕೆ ಶಿವಕುಮಾರ್​ ತನಿಖೆ ಎದುರಿಸಿ, ಸೀತೆಯಂತೆ ಹೊರಗೆ ಬರಲಿ; ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ

KS Eshwarappa: ಈ ಹಿಂದೆ ಯಡಿಯೂರಪ್ಪನವರ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಏನೆಂದು ಹೇಳಿಕೆ ಕೊಟ್ಟಿದ್ದರು? ಉಪ್ಪು ತಿಂದೋನು ನೀರು ಕುಡಿಯಲೇಬೇಕು ಅಂತ ಹೇಳಿದ್ದರು. ಈಗ ಕಾಂಗ್ರೆಸ್​ಗೊಂದು ಬೇರೆ ಕಾನೂನು ಇದೆಯಾ? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.

news18-kannada
Updated:October 5, 2020, 1:03 PM IST
DK Shivakumar: ಡಿಕೆ ಶಿವಕುಮಾರ್​ ತನಿಖೆ ಎದುರಿಸಿ, ಸೀತೆಯಂತೆ ಹೊರಗೆ ಬರಲಿ; ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ
ಸಚಿವ ಕೆ.ಎಸ್‌. ಈಶ್ವರಪ್ಪ.
  • Share this:
ಬೆಂಗಳೂರು (ಅ.5): ಡಿಕೆ ಶಿವಕುಮಾರ್ ಮೇಲೆ ಈ ಹಿಂದೆ ಕೂಡ ದಾಳಿ ಆಗಿದೆ. ಇದು ಹೊಸತೇನಲ್ಲ. ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು. ಹೀಗಾಗಿ ತನಿಖೆ ಸಹ ಆಗುತ್ತಿದೆ. ಇವತ್ತಿನ ಸಿಬಿಐ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಡಿಕೆ ಶಿವಕುಮಾರ್ ತನಿಖೆಗೆ ಒಳಗಾಗಿ, ಸೀತೆಯಂತೆ ಹೊರಗೆ ಬರಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದ ಸಿಬಿಐ ದಾಳಿ ನಡೆಸಲಾಗಿದೆ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯವಾಯಿತು. ಈ ಹಿಂದೆ ಯಡಿಯೂರಪ್ಪನವರ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಏನೆಂದು ಹೇಳಿಕೆ ಕೊಟ್ಟಿದ್ದರು? ಉಪ್ಪು ತಿಂದೋನು ನೀರು ಕುಡಿಯಲೇಬೇಕು ಅಂತ ಹೇಳಿದ್ದರು. ಹಾಗಾದರೆ, ಈಗ ಡಿಕೆ ಶಿವಕುಮಾರ್ ಕೂಡ ನೀರು ಕುಡಿಯಲೇಬೇಕಲ್ಲವೇ? ಕಾಂಗ್ರೆಸ್​ಗೊಂದು ಬೇರೆ ಕಾನೂನು ಇದೆಯಾ? ಡಿಕೆಶಿ ತನಿಖೆಗೆ ಒಳಗಾಗಲಿ. ಅವರು ತಪ್ಪು ಮಾಡದಿದ್ದರೆ ಸೀತೆಯಂತೆ ಹೊರಗೆ ಬರಲಿ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕಾನೂನು ಹೋರಾಟದಲ್ಲಿ ಗೆಳೆಯ ಡಿಕೆ ಶಿವಕುಮಾರ್ ಗೆದ್ದು ಬರಲಿ; ಸಚಿವ ರಮೇಶ್ ಜಾರಕಿಹೊಳಿ ಹಾರೈಕೆ!

ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಿಂದ ಹಣ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಕೂಡ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಮನೆ ಮೇಲೆ ಮಾತ್ರವಲ್ಲದೆ ಅವರಿಗೆ ಸೇರಿರುವ ಒಟ್ಟು 14 ಕಡೆ ಸಿಬಿಐ ದಾಳಿ ನಡೆಸಲಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಕರ್ನಾಟಕದ 9 ಕಡೆ, ದೆಹಲಿಯ 4 ಕಡೆ ಹಾಗೂ ಮುಂಬೈನ 1 ಕಡೆ ಇಂದು ದಾಳಿ ನಡೆದಿದೆ.
Youtube Video

ಸೋಲಾರ್ ಪ್ಲಾಂಟ್​ಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಸೋಲಾರ್ ಪ್ಲಾಂಟ್​ಗಳಿಗೆ ಅನುಮತಿ ನೀಡಿದ್ದರು. ಅನುಮತಿ ನೀಡಲು ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು. ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಗದ್ದಿನಕೇರಿಯಲ್ಲಿ 1950 ಎಕರೆಯಲ್ಲಿ ನಿರ್ಮಾಣವಾಗಿರುವ ದೇಶದ ಅತಿ ದೊಡ್ಡ ಪ್ಲಾಂಟ್​ಗೆ ಅನುಮತಿ ನೀಡುವ ವೇಳೆ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
Published by: Sushma Chakre
First published: October 5, 2020, 1:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories