ಕನಕಪುರ ಬಂಡೆಗೆ ಸೆಡ್ಡು ಹೊಡೆದ ಯೂಥ್ ಕಾಂಗ್ರೆಸ್ ಅಧ್ಯಕ್ಷ; ಡಿಕೆ ಶಿವಕುಮಾರ್ ಕೆಂಗಣ್ಣು

ಪ್ರದೇಶ ಕಾಂಗ್ರೆಸ್ನ ಮುಂಚೂಣಿ ಘಟಕಗಳು ಕೆಪಿಸಿಸಿಯ ಗಮನಕ್ಕೆ ತಾರದೆಯೇ ಯಾವುದೇ ನೇಮಕಾತಿ ಮಾಡಬಾರದು ಎಂದು ಈ ಮುಂಚೆಯೇ ಸೂಚಿಸಲಾಗಿತ್ತು. ಆದರೂ ಕೂಡ ಬಾದರ್ಲಿ ತಮಗೆ ಬೇಕಾದ ಪದಾಧಿಕಾರಿಗಳನ್ನ ನೇಮಿಸಿಕೊಂಡಿದ್ದರು. ಇದು ಡಿಕೆಶಿ ಕೋಪವನ್ನು ಇಮ್ಮಡಿಗೊಳಿಸಿದೆ.

news18-kannada
Updated:July 3, 2020, 6:57 PM IST
ಕನಕಪುರ ಬಂಡೆಗೆ ಸೆಡ್ಡು ಹೊಡೆದ ಯೂಥ್ ಕಾಂಗ್ರೆಸ್ ಅಧ್ಯಕ್ಷ; ಡಿಕೆ ಶಿವಕುಮಾರ್ ಕೆಂಗಣ್ಣು
ಡಿಕೆ ಶಿವಕುಮಾರ್ ಮತ್ತು ಬಸನಗೌಡ ಬಾದರ್ಲಿ
  • Share this:
ಬೆಂಗಳೂರು(ಜುಲೈ 03): ನಿನ್ನೆ ಕೆಪಿಸಿಸಿ ಪಟ್ಟಕ್ಕೇರಿದ ಡಿಕೆ ಶಿವಕುಮಾರ್ ಅವರು ಯುವ ಕಾಂಗ್ರೆಸ್ ಮುಖ್ಯಸ್ಥ ಬಸನಗೌಡ ಬಾದರ್ಲಿ ಮೇಲೆ ಕೋಪಗೊಂಡಿದ್ದಾರೆ. ತಮ್ಮ ಗಮನಕ್ಕೆ ತಾರದೆ ಯುವ ಕಾಂಗ್ರೆಸ್ ಉಸ್ತುವಾರಿಗಳನ್ನ ನೇಮಕವಾಗಿದ್ದು ಡಿಕೆಶಿ ಕೋಪಕ್ಕೆ ಕಾರಣವೆನ್ನಲಾಗಿದೆ.

ಪ್ರದೇಶ ಯೂಥ್ ಕಾಂಗ್ರೆಸ್​ನ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಮೇಲೆ ಡಿಕೆಶಿ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲವೆಂದು ಸಭೆಯಲ್ಲೇ ಆಕ್ರೋಶಪಟ್ಟಿದ್ದರು. ಈಗ ಕೆಪಿಸಿಸಿಯ ಗಮನಕ್ಕೆ ತಾರದೆಯೇ ಬಾದರ್ಲಿ ಅವರು ನಿನ್ನೆ ತಮಗೆ ಬೇಕಾದವರನ್ನ ಯುವ ಕಾಂಗ್ರೆಸ್​ಗೆ ನೇಮಕಾತಿ ಮಾಡಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಈ ಮುಂಚೆಯೇ ಯಾವುದೇ ನೇಮಕಾತಿ ಮಾಡಬಾರದು ಎಂದು ಯುವ ಕಾಂಗ್ರೆಸ್ ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದರು. ಆದರೂ ಕೂಡ ಬಾದರ್ಲಿ ಅವರು ಕೆಪಿಸಿಸಿ ಅಧ್ಯಕ್ಷರನ್ನೇ ಬೈಪಾಸ್ ಮಾಡಿ ಪದಾಧಿಕಾರಿಗಳ ನೇಮಕಾತಿ ಮಾಡಿದ್ದಾರೆ. ಇದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಅಸಮಾಧಾನವನ್ನ ಹೆಚ್ಚಿಸಿದೆ.

ಇದನ್ನೂ ಓದಿ: SSLC ಪರೀಕ್ಷೆಗೆ ನಾಡಹಬ್ಬದ ಸಂಭ್ರಮ; ಆಗಸ್ಟ್ ಮೊದಲ ವಾರ ಫಲಿತಾಂಶ: ಸಚಿವ ಸುರೇಶ್ ಕುಮಾರ್

Karnataka Youth Congress
ಕರ್ನಾಟಕ ಯುವ ಕಾಂಗ್ರೆಸ್​ಗೆ ಆದ ನೇಮಕಾತಿಗಳು


ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಈ ಬೆಳವಣಿಗೆಯಿಂದ ಮುಜುಗರಕ್ಕೊಳಗಾಗಿದ್ದಾರೆ. ಯೂಥ್ ಕಾಂಗ್ರೆಸ್​ನಲ್ಲಿ ಇತ್ತೀಚೆಗೆ ಆಗಿರುವ ಎಲ್ಲಾ ನೇಮಕಾತಿಗಳಿಗೆ ತಡೆ ನೀಡಿದ್ದಾರೆ.
Published by: Vijayasarthy SN
First published: July 3, 2020, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading