ಸದನದಲ್ಲಿ ಡಿಕೆಶಿ- ಸೋಮಣ್ಣ ಚರ್ಚೆ; ಶ್ರೀರಾಮುಲು ಕೈಕುಲುಕಿದ ಜಲಸಂಪನ್ಮೂಲ ಸಚಿವ

ಸಚಿವ ಡಿಕೆಶಿ ವಿಪಕ್ಷ ಗ್ಯಾಲರಿಗೆ ಬಂದು ಪ್ರತ್ಯೇಕವಾಗಿ ಕುಳಿತು ಸೋಮಣ್ಣ ಜೊತೆ ಚರ್ಚಿಸಿದರು. ಡಿಕೆಶಿ ಸೋಮಣ್ಣ ಬಳಿ ಬರುವಾಗ ಶ್ರೀರಾಮುಲುಗೆ ಹಸ್ತಲಾಘವ ಮಾಡಿ ನಗೆ ಬೀರಿದರು.

Latha CG | news18india
Updated:December 14, 2018, 4:54 PM IST
ಸದನದಲ್ಲಿ ಡಿಕೆಶಿ- ಸೋಮಣ್ಣ ಚರ್ಚೆ; ಶ್ರೀರಾಮುಲು ಕೈಕುಲುಕಿದ ಜಲಸಂಪನ್ಮೂಲ ಸಚಿವ
ಡಿಕೆಶಿ, ಶ್ರೀರಾಮುಲು
Latha CG | news18india
Updated: December 14, 2018, 4:54 PM IST
ಬೆಳಗಾವಿ,(ಡಿ.14): ಸುವರ್ಣಸೌಧದಲ್ಲಿ ನಡೆಯುತ್ತಿರುವ 5 ನೇ ದಿನದ ಚಳಿಗಾಲದ ಅಧಿವೇಶನದಲ್ಲಿ ಇಂದು ಸಹ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ವಿಪಕ್ಷ ನಾಯಕರು ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಸದನದಲ್ಲಿ ಹಾಜರಾಗಿದ್ದರು.  ಈ ಸಂದರ್ಭದಲ್ಲಿ ಸಚಿವ ಡಿಕೆಶಿ ಮತ್ತು ಬಿಜೆಪಿ ಶಾಸಕ ಸೋಮಣ್ಣ ಮಾತುಕತೆ ನಡೆಸಿದರು. ಇದೇ ವೇಳೆ ಬಿಜೆಪಿ ಶಾಸಕ ಶ್ರೀರಾಮುಲುಗೆ ಕೈಕುಲುಕಿ ನಗೆ ಬೀರಿದರು.

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ವಿಷಯವಾಗಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ಉತ್ತರ ನೀಡುತ್ತಿದ್ದರು. ಇದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್​ ಹಾಗೂ ಬಿಜೆಪಿ ಶಾಸಕ ಸೋಮಣ್ಣ ದೀರ್ಘ ಚರ್ಚೆಗೆ ಇಳಿದಿದ್ದರು.

ಇದನ್ನೂ ಓದಿ: ಮಾರಮ್ಮ ದೇಗುಲದ ಪ್ರಸಾದ ಸೇವಿಸಿ ಮೂವರು ಸಾವು; 40 ಕ್ಕೂ ಹೆಚ್ಚು ಜನ ಅಸ್ವಸ್ಥ

ಸಚಿವ ಡಿಕೆಶಿ ವಿಪಕ್ಷ ಗ್ಯಾಲರಿಗೆ ಬಂದು ಪ್ರತ್ಯೇಕವಾಗಿ ಕುಳಿತು ಸೋಮಣ್ಣ ಜೊತೆ ಚರ್ಚಿಸಿದರು. ಡಿಕೆಶಿ ಸೋಮಣ್ಣ ಬಳಿ ಬರುವಾಗ ಶ್ರೀರಾಮುಲು ಕೈ ಕುಲುಕಿ ನಗೆ ಬೀರಿದರು. ನಂತರ ಸದನದಲ್ಲಿ ಸೋಮಣ್ಣ ಜೊತೆ ಕುಳಿತು ಮಾತುಕತೆ ನಡೆಸಿದರು.

ಕಳೆದ ಬಳ್ಳಾರಿ ಲೋಕಸಭೆ ಉಪ ಚುನಾವಣೆ ವೇಳೆ ಶಾಸಕ ಶ್ರೀರಾಮುಲು ಸಚಿವ ಡಿಕೆಶಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಡಿಕೆಶಿ ಶ್ರೀರಾಮುಲು ಅವರನ್ನು ಅಣ್ಣ ಅಣ್ಣ ಎಂದು ಕರೆಯುತ್ತಿದ್ದರು. ಇದೀಗ ಶ್ರೀರಾಮುಲು ಕಂಡು ಅವರಿಗೆ ಹಸ್ತಲಾಘವ ಮಾಡಿದರು. ಪ್ರತಿಯಾಗಿ ಶ್ರೀರಾಮುಲು ಕೂಡ ಡಿಕೆಶಿ ನೋಡಿ ನಕ್ಕರು.
First published:December 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626