DK Shivakumar-BY Vijayendra: ವೇದಿಕೆ ಮೇಲೆ ಡಿಕೆಶಿ-ಬಿ.ವೈ.ವಿಜಯೇಂದ್ರ ಗುಪ್ತ್ ಗುಪ್ತ್ ಮಾತುಕತೆ!

ವೇದಿಕೆಯಲ್ಲಿ ಡಿಕೆಶಿ ಜೊತೆ ಗಹನ  ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಡಿಕೆ ಶಿವಕುಮಾರ್ KPCC  ಅಧ್ಯಕ್ಷರಿರಬಹುದು ನನ್ನ ಮಿತ್ರರೂ ಕೂಡ. ಹಾಗಾಗಿ ರಾಜಕೀಯ ಪ್ರೇರಿತ ಸಂಗತಿಗಳನ್ನ ನಾವು  ಚರ್ಚಿಸಿಲ್ಲ, ಸಹಜವಾಗಿ ವೈಯಕ್ತಿಕ ವಿಚಾರಗಳನ್ನ ಮಾತ್ರ ಮಾತನಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು.

ವೇದಿಕೆ ಮೇಲೆ ಡಿಕೆಶಿ-ವಿಜಯೇಂದ್ರ ಮಾತುಕತೆ

ವೇದಿಕೆ ಮೇಲೆ ಡಿಕೆಶಿ-ವಿಜಯೇಂದ್ರ ಮಾತುಕತೆ

  • Share this:
ಚಿತ್ರದುರ್ಗ:  ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ಅನುಭವ ಮಂಟಪದಲ್ಲಿ ನಡೆದ ಯುವ ಮೇಳದಲ್ಲಿ  KPCC ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಹಾಗೂ  BJP ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) , ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಗುಪ್ತ ಮಾತುಕತೆ ನಡೆಸಿದ್ದಾರೆ, ಯುವ ಮೇಳದ ವೇದಿಕೆಯಲ್ಲಿ ಡಿಕೆಶಿ- ವಿಜಯೇಂದ್ರ ಗಹನವಾದ ಚರ್ಚೆ, ಕಾಂಗ್ರೆಸ್​- ಬಿಜೆಪಿ ರಾಜಕೀಯ ಬೆಳವಣಿಗೆಗಳ ಮಧ್ಯೆ ಕುತೂಹಲ ಮೂಡುವಂತೆ ಮಾಡಿತು. ಪ್ರಸ್ತುತ IT ರೇಡ್, ಡಿಕೆಶಿ ಲಂಚದ ಗಿರಾಕಿ ಎಂಬ ಹೇಳಿಕೆಗಳು ಚರ್ಚೆಗೆ ಗ್ರಾಸವಾದ ಬಳಿಕ ಇವರಿಬ್ಬರ ಆಪ್ತ ಮಾತುಕತೆಗೆ ಯುವ ಮೇಳದ ವೇದಿಕೆಯಲ್ಲಿದ್ದ ಮಠಾದೀಶರು, ಕಾಂಗ್ರೇಸ್ ಬಿಜೆಪಿ ಮುಖಂಡರು ಸಾಕ್ಷಿಯಾದ್ರು.

ಡಿಕೆ ಶಿವಕುಮಾರ್​ ನನ್ನ ಸ್ನೇಹಿತರು 

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂಬ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ,  ಆ ಹೇಳಿಕೆಗೆ ಯಾವುದೇ ಅರ್ಥವಿಲ್ಲ. HD ಕುಮಾರಸ್ವಾಮಿಯವರ  ಹೇಳಿಕೆ ರಾಜಕೀಯ‌ ಪ್ರೇರಿತ, ಅದಕ್ಕೆ ಯಾರೂ ಕೂಡಾ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು. ಬಳಿಕ ವೇದಿಕೆಯಲ್ಲಿ ಡಿಕೆಶಿ ಜೊತೆ ಗಹನ  ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಡಿಕೆ ಶಿವಕುಮಾರ್ KPCC  ಅಧ್ಯಕ್ಷರಿರಬಹುದು ನನ್ನ ಮಿತ್ರರೂ ಕೂಡ. ಹಾಗಾಗಿ ರಾಜಕೀಯ ಪ್ರೇರಿತ ಸಂಗತಿಗಳನ್ನ ನಾವು  ಚರ್ಚಿಸಿಲ್ಲ, ಸಹಜವಾಗಿ ವೈಯಕ್ತಿಕ ವಿಚಾರಗಳನ್ನ ಮಾತ್ರ ಮಾತನಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು.

ಕಾಂಗ್ರೆಸ್​​ದು ತಿರುಕನ ಕನಸು 

ಇನ್ನೂ ಮಾಜಿ ಸಿಎಂ ಬಿಎಸ್ವೈ ರನ್ನ ಮತ್ತೆ ಜೈಲಿಗೆ ಕಳಿಸೋ ಹುನ್ನಾರವೆಂಬ ಕಾಂಗ್ರೆಸ್​​ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮೊನ್ನೆ ನಡೆದ ಗುತ್ತಿಗೆದಾರರ ಮೇಲಿನ ಐಟಿ ದಾಳಿಗೂ ಮಾಜಿ ಸಿಎಂ ಬಿಎಸ್ ವೈ ರಿಗೂ ಯಾವುದೇ ಸಂಬಂಧವಿಲ್ಲ ಎಂದರು. ಉಪ  ಚುನಾವಣೆಗಳಲ್ಲಿ ಕಾಂಗ್ರೆಸ್​​ಗೆ ಗೆಲುವು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಬಸವರಾಜ್   ಬೊಮ್ಮಾಯಿ ಸಿಎಂ ಆದ ಬಳಿಕ ರಾಜ್ಯ ಸುತ್ತಿ ಅಭಿವೃದ್ಧಿ ಕೆಲಸ ತೊಡಗಿಸಿಕೊಂಡಿದ್ದಾರೆ. ಅವರ ಕಾರ್ಯವೈಖರಿಯನ್ನ ರಾಜ್ಯದ ಜನತೆ ನೋಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ‌ ಗೆಲುವು ಸಾಧಿಸುತ್ತೇವೆ ಎಂಬಂತೆ ತಿರುಕನ ಕನಸು ಕಾಣುತ್ತಿದೆ. ಇತ್ತೀಚೆಗೆ  ನಡೆದ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ, ಮತದಾರರು ಬಿಜೆಪಿ ಪರವಾಗಿ ತೀರ್ಪು ಕೊಟ್ಟಿದ್ದಾರೆ ಎಂದರು. 

ಕಾಂಗ್ರೆಸ್​ ಅಸ್ತಿತ್ವ ಕಳೆದುಕೊಂಡಿದೆ

ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ, ಕಾಂಗ್ರೆಸ್​​  ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಅವಶೇಷದ ರೂಪದಲ್ಲಿ ಉಳಿದಿದೆ. ಕಾಂಗ್ರೆಸ್ನವರು ಏನೇ ಬೊಬ್ಬೆ ಹೊಡೆದರೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ರಾಜ್ಯ ದೇಶದಲ್ಲಿರುವ ಬಿಜೆಪಿ ಸರ್ಕಾರದ ಪರವಾಗಿ ಮತದಾರರು ಮತ್ತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾನಲ್ಲ, NEXT ಅವರೆಲ್ಲಾ ಬೆತ್ತಲಾಗುತ್ತಾರೆ ನೋಡ್ತೀರಿ: ವೈರಲ್ ಫೋಟೋ ಬಗ್ಗೆ Yatnal ಸ್ಫೋಟಕ ಹೇಳಿಕೆ

ಇನ್ನೂ  ಡಿಕೆಶಿ ಲಂಚದ ಗಿರಾಕಿ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿ ಮಟ್ಟ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ, ಕಾಂಗ್ರೆಸ್ ಪಕ್ಷವನ್ನ  ಮುಗಿಸಲು ಯಾವ  ವಿರೋಧ ಪಕ್ಷಗಳು ಬೇಡ, ಕಾಂಗ್ರೆಸ್​​ ಪಕ್ಷದಲ್ಲಿರುವ ಮುಖಂಡರೇ ಸಾಕು, ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಒಡೆದು ಹೋಳಾಗುತ್ತಿದೆ, ಕರ್ನಾಟಕದಲ್ಲೂ ಕಾಂಗ್ರೆಸ್ ಹೊಡೆದು ಮೂರು ಮನೆ ಆಗಲಿದೆ ಎಂದಿದ್ದು, ವಿಜಯ ದಶಮಿ ಬಳಿಕ ಹಾನಗಲ್, ಸಿಂದಗಿ ಕ್ಷೇತ್ರದಲ್ಲಿ ಪ್ರವಾಸ  ಮಾಡುತ್ತೇನೆ, ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ರವರು ನೀಡಿರುವ ಜವ್ದಾರಿಯನ್ನ ನಿಭಾಯಿಸುತ್ತೇನೆ ಎಂದಿದ್ದಾರೆ.
Published by:Kavya V
First published: