• Home
  • »
  • News
  • »
  • state
  • »
  • PSI Recruitment Scam: ರಾಜ್ಯದ ಕಡು ಭ್ರಷ್ಟ ರಾಜಕಾರಣಿ ಅಶ್ವತ್ಥ್​ ನಾರಾಯಣ್​; ಡಿಕೆ ಶಿವಕುಮಾರ್​

PSI Recruitment Scam: ರಾಜ್ಯದ ಕಡು ಭ್ರಷ್ಟ ರಾಜಕಾರಣಿ ಅಶ್ವತ್ಥ್​ ನಾರಾಯಣ್​; ಡಿಕೆ ಶಿವಕುಮಾರ್​

ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು.

ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಕೆಪಿಎಸ್ಸಿ ಯಲ್ಲೂ ಅಕ್ರಮ ಆಗಿದೆ. ಇದರ ಬಗ್ಗೆ ಬೊಮ್ಮಾಯಿಯವರು ಪ್ರಕರಣ  ದಾಖಲಿಸಿಲ್ಲ. ಈ ಬಗ್ಗೆ ಮಾಹಿತಿ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಯಾಕೆ ಸುಮ್ಮನಿದ್ದಾರೆ.

  • Share this:

    ರಾಮನಗರ (ಮೇ. 4):  ರಾಜ್ಯ ರಾಜಕಾರಣದಲ್ಲಿ ಅತ್ಯಂತ ಕಡು ಭ್ರಷ್ಟ ರಾಜಕಾರಣಿ ಸಚಿವ ಅಶ್ವತ್ಥ್​ ನಾರಾಯಣ್ (Ashwath Narayan)​ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ಹರಿಹಾಯ್ದಿದ್ದಾರೆ. ಕನಕಪುರದ ದೊಡ್ಡಾಲಹಳ್ಳಿ ಗ್ರಾಮದಲ್ಲಿ  ಮಾತನಾಡಿದ ಅವರು, ಸಚಿವ ಅಶ್ವತ್ಥ್​ ನಾರಾಯಣ ರಾಜ್ಯದ ಭ್ರಷ್ಟ ರಾಜಕಾರಣಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಬ್ರಾಹ್ಮಣನ ರೀತಿ ಶುದ್ಧ ರಾಜಕಾರಣಿ ಎಂದು ಹೇಳಿಕೊಂಡು ತಿರುಗುತ್ತಾರೆ. ಆದರೆ, ಸಂಸ್ಕೃತಿ ಇರುವವರು ಯಾರು ಹೀಗೆ ಮಾಡುವುದಿಲ್ಲ ಎಂದು ಟೀಕಿಸಿದರು.


    ಇದೇ ವೇಳೆ ಪಿಎಸ್​ಐ ಹಗರಣದಲ್ಲಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ನನ್ನ ವಿರುದ್ಧ ಎಲ್ಲವನ್ನು ಬಿಚ್ಚುತ್ತೇನೆ ಎಂದಿದ್ದಾರೆ. ಬಿಚ್ಚಿಡಲಿ ಯಾರು ಬೇಡ ಅಂತಾರೆ. ನನಗೆ ಏನು ಬೇಕಾದರೂ ಮಾಡಲಿ, ಅವರನ್ನು ಎದುರಿಸಲು ಸಿದ್ಧರಾಗಿದ್ದೇವೆ. ಶಿಕ್ಷೆ ಕೊಟ್ಟರು ಅನುಭವಿಸಲು ಸಿದ್ಧರಿದ್ದೇವೆ. ಸತ್ಯವನ್ನು ನಾವು ಜನರ ಮುಂದೆ ಇಟ್ಟಿದ್ದೇವೆ ಅಷ್ಟೇ ಎಂದರು.


    ಭ್ರಷ್ಟಚಾರದ ಬಗ್ಗೆ ಮೌನ ಏಕೆ


    ಭ್ರಷ್ಟ್ರಚಾರದ ಕುರಿತು ಬಿಜೆಪಿಯ ಕೆಲವರು ನಮ್ಮ ಜೊತೆ ಮಾತನಾಡಿದ್ದಾರೆ. ಅದನ್ನೆಲ್ಲ ಹೇಳಲು ಆಗಲ್ಲ. ಸಾಮಾನ್ಯವಾಗಿ ಹತ್ತಿರ ಇರುವವರೇ ಮಾಹಿತಿ ಕೊಡುವುದು. ಇದೊಂದೇ ಇಲಾಖೆ ಅಲ್ಲ, ಶಿಕ್ಷಣ ಇಲಾಖೆ, ಕೆಪಿಎಸ್ಸಿ ಯಲ್ಲೂ ಅಕ್ರಮ ಆಗಿದೆ. ಇದರ ಬಗ್ಗೆ ಬೊಮ್ಮಾಯಿಯವರು ಪ್ರಕರಣ  ದಾಖಲಿಸಿಲ್ಲ. ಎಸಿಬಿಗೆ ದೂರು ನೀಡಿ ಎಫ್ಐಆರ್​​ ದಾಖಲು ​ಮಾಡಬೇಕಿತ್ತು. ಪ್ರಕರಣ ಕುರಿತು ವಿಚಾರಣೆ ಮಾಡಬೇಕಿತ್ತು, ಯಾಕೆ ಮಾಡಿಲ್ಲ. ಕೆಪಿಎಸ್ಸಿ ಯಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಯಾಕೆ ಸುಮ್ಮನಿದ್ದಾರೆ. ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.


    ಇದನ್ನು ಓದಿ: Yash Joining Politics: ಗೋವಾ ಸಿಎಂ ಜೊತೆ ರಾಕಿ ಭಾಯ್, ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್?


    ರಾಮನಗರದ ಮೂರು ನಾಲ್ಕು ಮಂದಿ ಒಳಗೆ ಇದ್ದಾರೆ


    ಇನ್ನು ಜೆಡಿಎಸ್​ ನಾಯಕ ಕುಮಾರಸ್ವಾಮಿ ಆರೋಪ ವಿಚಾರ ಕುರಿತು ಮಾತನಾಡಿದ ಅವರು, ನನಗೆ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ರವರು ಪ್ರಮುಖ ಸ್ಥಾನದಲ್ಲಿದ್ದರು, ಅಧಿಕಾರಿಗಳು ಪರಿಚಯ ಇದ್ದರು ತಿಳಿಸಿರಬಹುದು. ಆದರೆ ನಡೆದ ಹಗರಣ ಯಾರು ಮುಚ್ಚಿಹಾಕಲು ಸಾಧ್ಯಾವಾ? ಸರ್ಕಾರದ ಪ್ರಭಾವದಿಂದ ಇದನ್ನ ಮುಚ್ವಿಹಾಕಬಹುದು. ನಮ್ಮ ಜಿಲ್ಲೆಯವರೇ ಮೂರ್ನಾಲು ಜನ ಮೊದಲನೇ ರ್ಯಾಂಕ್ ಪಡೆದಿದ್ದಾರೆ. ನಮ್ಮ ಪೈಕಿಯವರೇ ಅದರಲ್ಲಿ ಇದ್ದಾರೆ, ಈಗ ಅವರು ಒಳಗಡೆ ಇದ್ದಾರೆ. ನೌಕರಿ ಆಸೆಗೆ ಸಾಲ ಮಾಡಿ ಹಣ ನೀಡಿ ಸಿಕ್ಕಿಹಾಕಿಕೊಂಡಿರಬಹುದು.


    ಇದನ್ನು ಓದಿ: ಹನುಮ ಜನ್ಮಭೂಮಿ ಅಂಜನಾದ್ರಿಗೆ ಬರ್ತಾರಾ ಯೋಗಿ ಆದಿತ್ಯನಾಥ್? ಹೆಚ್ಚಿದ ಕುತೂಹಲ


    ಅಂಗಡಿ ಓಪನ್​ ಇದ್ರೆ ಎಲ್ಲರೂ ಬರುತ್ತಾರೆ


    ಅಂಗಡಿ ಓಪನ್ ಇದ್ದರೆ ವ್ಯಾಪಾರಕ್ಕೆ ಬರುತ್ತಾರೆ. ಇಲ್ಲ ಎಂದರೆ ಯಾರು ಬರುತ್ತಾರೆ. ನೋಟೀಸ್ ಕೊಟ್ಟು ಪ್ರಭಾವಿ ಮಂತ್ರಿ ಹೇಳಿದರು ಅಂತಾ ವಾಪಸ್ ಕಳುಹಿಸಿದ್ದಾರೆ. ಮೊದಲನೇ ರ್ಯಾಂಕ್ ನವರನ್ನ ಒಳಗಡೆ ಹಾಕಿದ್ದೀರಿ, ನಾಲ್ಕನೇ ರ್ಯಾಂಕ್ ನವರನ್ನ ಬಿಟ್ಟಿದ್ದೀರಿ ಯಾವ ರೀತಿ, ಹೇಗೆ ತನಿಖೆ ಮಾಡುತ್ತಿದ್ದೀರಾ  ಎಂದು ಪ್ರಶ್ನಿಸಿದರು.


    ಪ್ರಕರಣ ಸಂಬಂದ ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಎಲ್ಲಾ ಕಾಲದಲ್ಲೂ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಎನ್ನುವುದು ಈಗ ಹೊರಗೆ ಬರುತ್ತಿದೆ. ನನಗೆ ಒಂದು ಸಣ್ಣ ಸಾಕ್ಷ್ಯ ಸಿಕ್ಕಿದ ತಕ್ಷಣ ಕೇವಲ‌ ಎರಡು ಗಂಟೆಯಲ್ಲಿ ಸಿಎಂ ಒಪ್ಪಿಗೆ ಪಡೆದು ತನಿಖೆ ಆರಂಭಿಸಿದೆ.  ಸಿಒಡಿ ವಿಶೇಷ ತಂಡ ರಚನೆ ಮಾಡಿ, ತುರ್ತಾಗಿ ತನಿಖೆ ಮಾಡುವಂತೆ ಆದೇಶಿಸಿದೆ ಎಂದ ಅವರು, ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ನಾಲ್ಕು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್​ ಆಗಿದ್ದನ್ನು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

    Published by:Seema R
    First published: