DK Shivakumar: ತ್ಯಾಗಕ್ಕೆ ಮತ್ತೊಂದು ಹೆಸರು ಸೋನಿಯಾ ಗಾಂಧಿ, ಜುಲೈ 21ರಂದು ರಾಜಭವನಕ್ಕೆ ಮುತ್ತಿಗೆ; ಡಿಕೆಶಿ

ಆಗಸ್ಟ್‌ 15 ರಂದು ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ನಡಿಗೆ (Walk For Freedom) ಕಾರ್ಯಕ್ರಮ  ಆಯೋಜನೆ ಮಾಡಲಾಗುತ್ತದೆ. ಅಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ 1 ಲಕ್ಷ ಅಧಿಕ ಜನರೊಂದಿಗೆ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಲಾಗುತ್ತದೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಇಂದು ಬೆಳಗ್ಗೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Former Minister Priyank Kharge) ಸಹ ಉಪಸ್ಥಿತರಿದ್ದರು. ನಿನ್ನೆ ಸಂಜೆ ಎಲ್ಲರು ಸೇರಿ ತುರ್ತು ಸಭೆ ಮಾಡಿದ್ದೇವೆ. ಈ ಸಭೆಯನ್ನು ರಣದೀಪ್ ಸುರ್ಜೆವಾಲಾ ನಡೆಸಿದರು. ದೇಶದಲ್ಲಿ ಸಂಸ್ಥೆಗಳನ್ನು ಬಳಸಿ ಕಾಂಗ್ರೆಸ್ ನಾಯಕರ (Congress Leaders) ಮೇಲೆ ದಾಳಿ ಆಗ್ತಿದೆ. ವಿಚಾರಣೆಯ ನೆಪದಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಕರೆಸಿ ಅವರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗ್ತಿದೆ. ಸುಳ್ಳು ಕೇಸ್ ದಾಖಲಿಸುವ ಮೂಲಕ ನಮ್ಮನ್ನು ಹೆದರಿಸಲಾಗುತ್ತಿದೆ. ಇದೇ 21ಕ್ಕೆ ಸಂಸತ್ ಅಧಿವೇಶನ ನಡೆಯುತ್ತಿದೆ. ಕಾಂಗ್ರೆಸ್ ಅಧಿನಾಯಕಿ ಆಗಿರುವ ಸೋನಿಯಾ ಗಾಂಧಿಯವರು (Sonia Gandhi) ಭಾಗವಹಿಸೋಕೆ ಸಿದ್ಧರಿದ್ದಾರೆ. ಅಧಿವೇಶನ ಇದ್ದರೂ ಅವರನ್ನು ವಿಚಾರಣೆಗೆ ಕರೆಯುವ ಮೂಲಕ ಕಿರುಕುಳ ನೀಡಲಾಗ್ತಿದೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯವರನ್ನು 51 ಗಂಟೆ ವಿಚಾರಣೆ ನಡೆಸಿ, ಕಿರುಕುಳ ಕೊಟ್ಟಿದ್ದಾರೆ. ನಮ್ಮ ನಾಯಕರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಜುಲೈ 21ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ರಾಜಭವನಕ್ಕೆ ಮುತ್ತಿಗೆ

ಬೆಂಗಳೂರಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಪೊಲೀಸರು ನಮ್ಮನ್ನು ಬಂಧಿಸಿದರೂ ಪರವಾಗಿಲ್ಲ. ಫ್ರೀಡಂ ಪಾರ್ಕ್ ನಿಂದ ಪ್ರತಿಭಟನೆ ಸಾಗಿ ರಾಜ ಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.

ಇದನ್ನೂ ಓದಿ:  Zameer: ಜಮೀರ್ ಅಹ್ಮದ್‌ಗೆ ಎಸಿಬಿ ಸಂಕಷ್ಟ, 10 ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಜುಲೈ 22ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

ಜುಲೈ 22ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ನಾಯಕರು ಭಾಗವಹಿಸ್ತಾರೆ. ನಾನು, ಸಿದ್ದರಾಮಯ್ಯ, ಎಂಬಿ ಪಾಟೀಲ್ ಒಂದೊಂದು ಜಿಲ್ಲೆಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ಇದರ ಮೂಲಕ ಸೋನಿಯಾ ಗಾಂಧಿ ಅವರಿಗೆ ಧೈರ್ಯ ತುಂಬಬೇಕು. ಯಾವುದಕ್ಕೂ ಭಯ ಪಡದೆ, ಪ್ರತಿಭಟನೆ ಯಶಸ್ವಿ ಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಆಗಸ್ಟ್ 15ರಂದು ಸ್ವಾತಂತ್ರ ನಡಿಗೆ

ಆಗಸ್ಟ್‌ 15 ರಂದು ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ನಡಿಗೆ (Walk For Freedom) ಕಾರ್ಯಕ್ರಮ  ಆಯೋಜನೆ ಮಾಡಲಾಗುತ್ತದೆ. ಅಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ 1 ಲಕ್ಷ ಅಧಿಕ ಜನರೊಂದಿಗೆ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಲಾಗುತ್ತದೆ. ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇಲ್ಲಿ ಯಾವುದೇ ಭಾಷಣ ಇರಲ್ಲ. ರಾಷ್ಟ್ರಧ್ವಜ ಹಿಡಿದು ಜಾಥಾ ನಡೆಸಲಾಗುತ್ತದೆ. ಇದು ರಾಜಕೀಯ ಕಾರ್ಯಕ್ರಮ ಅಲ್ಲ.

ನ್ಯಾಶನಲ್ ಹೆರಾಲ್ಡ್ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಗಾಂಧಿ ಕುಟುಂಬಕ್ಕೆ ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದೆ. ಅಂದಿನ ಆಸ್ತಿಯ ಮೌಲ್ಯ ಸಹಜವಾಗಿಯೇ ಏರಿಕೆಯಾಗಿರುತ್ತದೆ. ಗಾಂಧಿ ಕುಟುಂಬ ದೇಶಕ್ಕಾಗಿ ಜೈಲುವಾಸ ಆನುಭವಿಸಿದ್ದಾರೆ.

ತ್ಯಾಗಕ್ಕೆ ನಿಜವಾದ ಹೆಸರು ಸೋನಿಯಾ ಗಾಂಧಿ

ತಮಗೆ ಪ್ರಧಾನ ಮಂತ್ರಿ ಆಗುವ ಅವಕಾಶಗಳಿದ್ರೂ ಓರ್ವ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಗಳನ್ನಾಗಿ ಮಾಡಿದರು. ತ್ಯಾಗಕ್ಕೆ ನಿಜವಾದ ಹೆಸರು ಸೋನಿಯಾ ಗಾಂಧಿ. ಪಕ್ಷ ಉಳಿಸಮ್ಮ ಅಂತಾ ಕಾಲು ಕೈ ಹಿಡಿದು ಕರೆದುಕೊಂಡು ಬಂದಿದ್ದೇವೆ ಎಂದರು.

ಬಿಜೆಪಿಗೆ ಆಂತರಿಕವಾಗಿ ಹಲವು ಸಮಸ್ಯೆಗಳನ್ನು ಹೊಂದಿದೆ. ಇವಾಗ ಒರಿಜಿನಲ್ ಬಿಜೆಪಿ ಇಲ್ಲ. ಅವರ ಮೇಲೆ ಕರೆಪ್ಸನ್ ವಿಷಯ ಜೋರಾಗಿದೆ. ವಿಶ್ವನಾಥ್ ಹಾಗೂ ಯತ್ನಾಳ್ ಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಯತ್ನಾಳ್ ಗರ್ಭದ ಗುಡಿಯಲ್ಲಿ ಭಾರಿ ಮಾಹಿತಿ ಇದೆಯಲ್ಲಾ..? ಅವನಿಗೆ ಯಾಕೆ ಇವ್ರು ನೋಟಿಸ್ ಕೊಟ್ಟಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  Dr CN Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ Dr ಮಂಜುನಾಥ್ ಮುಂದುವರೆಯಲಿ; ಸರ್ಕಾರಕ್ಕೆ ವೈದ್ಯರ ಪತ್ರ

ಬಿಜೆಪಿಗೆ ತಿರುಗೇಟು

ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಏನು ಕುಂಬಳಕಾಯಿಯ ಒಡೆದು ಹೋಗೋಕೆ. ಸಿದ್ದರಾಮಯ್ಯ ಅಚರನ್ನು ಅವರು ಅವಾಗವಾಗ ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
Published by:Mahmadrafik K
First published: