ಶ್ರೀರಾಮುಲು-ರೆಡ್ಡಿ ಪಾಳೆಯಕ್ಕೆ ಸೆಡ್ಡು ಹೊಡೆಯುವ ಏಕೈಕ ನಾಯಕ ಡಿಕೆಶಿ; ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಕೆ!

ಜತೆಗೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​​ ಜಾಣ ನಡೆ ಇಟ್ಟಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದಿದೆ. ಜಿಲ್ಲೆಯ ಶಾಸಕರನ್ನ ಒಟ್ಟುಗೂಡಿಸಿ ಚುನಾವಣೆ ತಂತ್ರ ಹೆಣಿಯುವುದು ಡಿಕೆಶಿಗೆ ಅಭ್ಯಾಸ. ಇದೇ ಕಾರಣಕ್ಕೆ ಮತ್ತೆ ಡಿಕೆಶಿಯನ್ನೇ ಕಾಂಗ್ರೆಸ್ ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಸಿದ್ದಾರೆ ಎನ್ನಲಾಗಿದೆ.

Ganesh Nachikethu | news18
Updated:March 28, 2019, 11:01 PM IST
ಶ್ರೀರಾಮುಲು-ರೆಡ್ಡಿ ಪಾಳೆಯಕ್ಕೆ ಸೆಡ್ಡು ಹೊಡೆಯುವ ಏಕೈಕ ನಾಯಕ ಡಿಕೆಶಿ; ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಕೆ!
ಶ್ರೀರಾಮುಲು - ಡಿಕೆ ಶಿವಕುಮಾರ್​​
  • News18
  • Last Updated: March 28, 2019, 11:01 PM IST
  • Share this:
ಶರಣು ಹಂಪಿ,

ಬಳ್ಳಾರಿ(ಮಾ.09): ಅದೇನೋ ಗೊತ್ತಿಲ್ಲ ಮೈತ್ರಿ ಸರ್ಕಾರದ ಕಟ್ಟಾಳು ಸಚಿವ ಡಿ.ಕೆ ಶಿವಕುಮಾರ್​​ ಅವರಿಗೆ ಬಳ್ಳಾರಿ ಕಂಡರೇ ತುಸು ಹೆಚ್ಚೇ ಪ್ರೀತಿ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಅವರಿಗೆ ಉಸ್ತುವಾರಿ ನೀಡದೇ, ಡಿಕೆಶಿಯನ್ನೇ ಉಸ್ತುವಾರಿಯನ್ನಾಗಿ ಮತ್ತೆ ಮುಂದುವರಿಸಿದ್ದಾರೆ. ಇಲ್ಲಿನ ಸ್ಥಳೀಯ ಸಚಿವರಿಗೆ ಬೇರೆ ಜಿಲ್ಲೆಗಳನ್ನು ನಿಯೋಜನೆ ಮಾಡಿದ್ದಾರೆ. ಕಾಂಗ್ರೆಸ್​​​ ಟ್ರಬಲ್​​ ಶೂಟರ್​​​ ಡಿಕೆಶಿಯನ್ನೇ ಉಸ್ತುವಾರಿಯಾಗಿ ಮುಂದುವರೆಸಲು ಕಾರಣ ಇಲ್ಲಿದೆ ನೋಡಿ...

ಈಗಾಗಲೇ ಜೆಡಿಎಸ್​​-ಕಾಂಗ್ರೆಸ್​​ ಮೈತ್ರಿ ಸರ್ಕಾರ ಬೆಳಗಾವಿ ಸೇರಿದಂತೆ ಕೊಪ್ಪಳ, ಗದಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಿಸಿ ಅಧಿಸೂಚನೆ ಹೊರಡಿಸಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೇ ಬಳ್ಳಾರಿಯ ಇಬ್ಬರು ಸಚಿವರಲ್ಲಿ ಒಬ್ಬರಿಗೂ ಬಳ್ಳಾರಿ ಉಸ್ತುವಾರಿ ನೀಡದೇ ಹೊರ ಜಿಲ್ಲೆಗಳಿಗೆ ನೇಮಿಸಿರುವುದು; ಹಾಗೆಯೇ ಸಚಿವ ಈ ತುಕಾರಾಂ ಅವರಿಗೆ ಕೊಪ್ಪಳ ಮತ್ತು ಪಿ. ಟಿ ಪರಮೇಶ್ವರ್ ನಾಯಕ್ ಅವರಿಗೆ ಗದಗ ಉಸ್ತುವಾರಿ ವಹಿಸಿರುವುದು.

ಕಳೆದ ಲೋಕಸಭೆ ಉಪಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಸ್ಥಳೀಯರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತೇವೆಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಈ ಬೆನ್ನಲ್ಲೇ ಉಸ್ತುವಾರಿಗಳಾಗಲು ಉತ್ಸುಕರಾಗಿದ್ದ ಈ ತುಕಾರಂ ಮತ್ತು ಪರಮೇಶ್ವರ್ ನಾಯಕ್ ಸಾಕಷ್ಟು ಲಾಬಿ ನಡೆಸಿದ್ದರು. ಸದ್ಯ ಇಬ್ಬರನ್ನು ಹೊರತುಪಡಿಸಿ ಡಿಕೆಶಿಯನ್ನೇ ಬಳ್ಳಾರಿ ಉಸ್ತುವಾರಿಯನ್ನಾಗಿ ಮುಂದುವರೆಸಿದ್ದು, ಮತ್ತೆ ರಾಗಾ ಬದಲಿಸಿದ್ದಾರೆ.

ಇನ್ನು ಡಿ.ಕೆ ಶಿವಕುಮಾರ್ ಅವರನ್ನೇ ಬಳ್ಳಾರಿಯಲ್ಲಿ ಮುಂದುವರೆಸುವುದಕ್ಕೆ ಒಂದು ಕಾರಣವಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾವು ಗೆಲ್ಲಲೇಬೇಕು. ಹೀಗಾಗಿ ಬಳ್ಳಾರಿಯ ರೆಡ್ಡಿ ಬ್ರದರ್ಸ್​​​ ಹಾಗೂ ಶ್ರೀರಾಮುಲು ಎದುರು ನಿಲ್ಲುವ ತಾಕತ್ ಡಿಕೆಶಿ ಅವರಿಗಿದ್ದು, ​ಟ್ರಬಲ್​​ ಶೂಟರ್​​ನನ್ನೇ ಮುಂದುವರಿಸಬೇಕೆಂಬುದು ಕಾಂಗ್ರೆಸ್​​ ಲೆಕ್ಕಚಾರ.

ಇದನ್ನೂ ಓದಿ: ಶ್ರೀರಾಮುಲು V/s ಡಿಕೆಶಿ: ಬಳ್ಳಾರಿ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಕಂಪ್ಲೀಟ್​​​ ಡೀಟೇಲ್ಸ್​​..

ಕಳೆದ ಎರಡು ಚುನಾವಣೆಗಳಲ್ಲಿ ಗೆಲ್ಲಲು ಡಿಕೆಶಿ ತಂತ್ರವೇ ಕಾರಣವಾಗಿತ್ತು. ​​​​2015ರ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆ; 2018ರ ವಿಧಾನಸಭೆ ಚುನಾವಣೆ; ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್​​ ಕಟ್ಟಾಳು ಡಿಕೆಶಿ ಪಾತ್ರ ದೊಡ್ಡದಾಗಿತ್ತು. ಹಾಗಾಗಿಯೇ ಈ ಬಾರಿಯೂ ಲೋಕಸಭೆ ಚುನಾವಣೆ ಗೆಲ್ಲುವ ಸಲುವಾಗಿ ಡಿಕೆಶಿ ಅವರನ್ನೇ ಜಿಲ್ಲಾ ಉಸ್ತುವಾರಿಯಾಗಿ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ಸಿಗರು.ಇನ್ನು ಈ ಬಗ್ಗೆ ಬಳ್ಳಾರಿ ಕಾಂಗ್ರೆಸ್​​ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್ ಪ್ರತಿಕ್ರಿಯಿಸಿದ್ದು, ಈ ತುಕಾರಂ ಅವರಿಗೆ ಜಿಲ್ಲೆಯ ಜವಾಬ್ದಾರಿ ತೆಗೆದುಕೊಳ್ಳುವಷ್ಟು ಅನುಭವವಿಲ್ಲ. ಅವರನ್ನು ಜಿಲ್ಲಾ ಉಸ್ತುವಾರಿ ಮಾಡಿದ್ದಲ್ಲಿ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆಯಿತ್ತು. ಪಿ.ಟಿ ಪರಮೇಶ್ವರ್​​ ನಾಯಕ್​​ಗೆ ಸಚಿವ ಸ್ಥಾನ ನೀಡಿದಾಗಲೇ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಅಸಮಾಧಾನ ಹೊರ ಹಾಕಿದರು. ಈಗ ಇಬ್ಬರ ಪೈಕಿ ಒಬ್ಬರನ್ನು ಉಸ್ತುವಾರಿಯನ್ನಾಗಿಸಿದರೂ ಕಾಂಗ್ರೆಸ್​ನಲ್ಲಿ ಆಂತರಿಕ ಅಸಮಾಧಾನ ಹುಟ್ಟಿಕೊಳ್ಳಲಿದೆ ಎಂದರು.

ಇದನ್ನೂ ಓದಿ: ಡಿಕೆಶಿ ಕೈಯಿಂದ ಬಳ್ಳಾರಿ ಉಸ್ತುವಾರಿ ಕಿತ್ತುಕೊಳ್ಳಲು ಮೂವರ ಪೈಪೋಟಿ; ಯಾರಿಗೆ ಸಿಗುತ್ತೆ ಗಣಿನಾಡ ಜವಾಬ್ದಾರಿ?

ಜತೆಗೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​​ ಜಾಣ ನಡೆ ಇಟ್ಟಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದಿದೆ. ಜಿಲ್ಲೆಯ ಶಾಸಕರನ್ನ ಒಟ್ಟುಗೂಡಿಸಿ ಚುನಾವಣೆ ತಂತ್ರ ಹೆಣಿಯುವುದು ಡಿಕೆಶಿಗೆ ಅಭ್ಯಾಸ. ಇದೇ ಕಾರಣಕ್ಕೆ ಮತ್ತೆ ಡಿಕೆಶಿಯನ್ನೇ ಕಾಂಗ್ರೆಸ್ ಬಳ್ಳಾರಿ ಉಸ್ತುವಾರಿಯಾಗಿ ಮುಂದುವರಿಸಿದ್ದಾರೆ ಎನ್ನಲಾಗಿದೆ.
------------
First published: March 9, 2019, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading