ಆರ್​ಆರ್​ ನಗರ ಅಭ್ಯರ್ಥಿ ಕುಸುಮಾರಿಗೆ ಡಿಕೆ ರವಿ ಸಂಘಟನೆಯಿಂದ ಬೆಂಬಲ

ಡಿಕೆ ರವಿ ಸಂಘಟನೆ ರಾಜ್ಯಾಧ್ಯಕ್ಷ್ಯ ಮುರಳೀಗೌಡ, ಕುಸುಮಾ ಅವರನ್ನು ಗೆಲ್ಲಿಸಲು ಶ್ರಮಿಸಲು ನಾವು  ಪ್ರಚಾರ ಮಾಡುತ್ತೇವೆ ಎಂದಿದ್ದಾರೆ

ಆರ್​ ಆರ್​​ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

ಆರ್​ ಆರ್​​ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

  • Share this:
ಕೋಲಾರ (ಅ.11): ಜಿಲ್ಲೆಯ ಜನರ ಮನಗೆದ್ದಿದ್ದ ದಕ್ಷ ಜಿಲ್ಲಾಧಿಕಾರಿ ದಿ. ಡಿಕೆ ರವಿ ಅವರ ಹೆಂಡತಿ ಕುಸುಮಾ ಆರ್​ ಆರ್​ನಗರ ಉಪಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಅವರು ಚುನಾವಣೆಗೆ ನಿಂತಿರುವುದು ಡಿಕೆ ರವಿ ಬೆಂಬಲಿಗರಲ್ಲಿ ಹರ್ಷ ಮೂಡಿದೆ. ಅವರಿಗೆ ಡಿಕೆ ರವಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದ್ದು, ಬೇಕಾದಲ್ಲಿ ಅವರ ಚುನಾವಣಾ ಪ್ರಚಾರಕ್ಕೆ ಹೋಗಲು ಸಿದ್ದ ಎಂದು ಸದಸ್ಯರು ತಿಳಿಸಿದ್ದಾರೆ.  ಆರು ವರ್ಷಗಳ ಹಿಂದೆ ಇಲ್ಲಿನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ  ದಿವಂಗತ ಡಿಕೆ.ರವಿ ಪ್ರತಿಯೊಬ್ಬರ ಮನೆ, ಮನಗಳ ಗೆದ್ದಿದ್ದರು. ಅವರ ಜನಪರ ಆಡಳಿತ, ಬಡವರ ಬಗ್ಗೆ ಇದ್ದ ಕಾಳಜಿ ಅಧಿಕಾರಿಯನ್ನು ಸಾಮಾನ್ಯ ಜನರ ಹತ್ತಿರಕ್ಕೆ ತರುವಂತೆ ಮಾಡಿತ್ತು. ಡಿಕೆ.ರವಿ, ಪತ್ನಿ ಕುಸುಮ ಅವರ ಜೊತೆಗೂಡಿ, ಕೋಲಾರದ ಗಾಂಧಿನಗರದ ದಲಿತ ಮಹಿಳೆ ಮುನಿಯಮ್ಮ ಅವರ ಗುಡಿಸಲು ಮನೆಗೆ ತೆರಳಿ ಊಟವನ್ನು ಸವಿದಿದ್ದರು. ಸ್ಥಳದಲ್ಲಿಯೇ ಮುನಿಯಮ್ಮ ಅವರಿಗೆ ಸರ್ಕಾರದ ಯೋಜನೆಗಳನ್ನು ಮಂಜೂರು ಮಾಡಿಸಿದ್ದರು.

ಕುಸುಮಾ, ಬೆಂಗಳೂರಿನ ಆರ್‌ಆರ್ ನಗರ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಮುನಿಯಮ್ಮ ಹರ್ಷ ವ್ಯಕ್ತಪಡಿಸಿದ್ದು, ಅವರು ಚುನಾವಣೆಯಲ್ಲಿ ಗೆದ್ದುಬರುವಂತೆ ಶುಭ ಹಾರೈಸಿದ್ದಾರೆ.

ಇದನ್ನು ಓದಿ: Big Breaking: ಖಾತೆ ಬದಲಾವಣೆ: ಶ್ರೀ ರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸಚಿವ ಸುಧಾಕರ್​ ಹೆಗಲಿಗೆ

ಜಿಲ್ಲೆಯ ಡಿಕೆ.ರವಿ ಅಭಿಮಾನಿಗಳ ಸಂಘಟನೆ, ಕುಸುಮ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ನಿರ್ಧರಿಸಿದೆ.  ಈ ಕುರಿತು ಮಾತನಾಡಿರುವ ಡಿಕೆ ರವಿ ಸಂಘಟನೆ ರಾಜ್ಯಾಧ್ಯಕ್ಷ್ಯ ಮುರಳೀಗೌಡ, ಕುಸುಮಾ ಅವರನ್ನು ಗೆಲ್ಲಿಸಲು ಶ್ರಮಿಸಲು ನಾವು  ಪ್ರಚಾರ ಮಾಡುತ್ತೇವೆ ಎಂದಿದ್ದಾರೆ.

ಅಕ್ಟೋಬರ್ 14 ರಂದು ಇಲ್ಲಿ ಕುರುಡುಮಲೆ ದೇಗುಲಕ್ಕೆ ಕುಸಮಾ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಯಸಿದಲ್ಲಿ ಶಕ್ತಿ ಮೀರಿ ಗೆಲ್ಲಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.  ಇನ್ನು ಡಿಕೆ ರವಿ ತಾಯಿ ಗೌರಮ್ಮ, ಈಗಾಗಲೇ ಸೊಸೆ ಕುಸುಮಾ ವಿರುದ್ದ ಕೆಂಡಕಾರಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುರಳಿಗೌಡ, ಯಾರದ್ದೊ ಕಾಣದ ಕೈಗಳ ಪ್ರಭಾವದಿಂದ ಹಾಗೆ ಮಾತನಾಡಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
Published by:Seema R
First published: