DJ Halli Violence: ‘ಫೇಸ್​​ಬುಕ್​​ ಪೋಸ್ಟ್​ ಹಾಕಿದ್ದು ನಾನೇ‘ - ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ನವೀನ್​

Bangalore Riots: ಗಲಭೆ ಪ್ರಮುಖವಾಗಿ ಕಾರಣವಾದ ಆರೋಪಿ ನವೀನ್​​​​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೂರ್ವ ವಿಭಾಗದ ವಿಶೇಷ ತಂಡದಿಂದ ನಡೆದ ವಿಚಾರಣೆ ವೇಳೆ ನವೀನ್​​ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ.

news18-kannada
Updated:August 14, 2020, 10:16 AM IST
DJ Halli Violence: ‘ಫೇಸ್​​ಬುಕ್​​ ಪೋಸ್ಟ್​ ಹಾಕಿದ್ದು ನಾನೇ‘ - ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ನವೀನ್​
ಬೆಂಗಳೂರಿನ ಪೊಲೀಸರು
  • Share this:
ಬೆಂಗಳೂರು(ಆ.14): ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಒಂದು ಕೋಮಿನ ಜನರು ರೊಚ್ಚಿಗೆದ್ದು ಮಂಗಳವಾರ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಾಗಿವೆ.

ಅಂಖಡರ ಮನೆಯನ್ನ ಸುಟ್ಟುಹಾಕಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲಾಗಿದೆ. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದುವರೆಗೂ 200ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು, ಗಲಭೆ ಪ್ರಮುಖವಾಗಿ ಕಾರಣವಾದ ಆರೋಪಿ ನವೀನ್​​​​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೂರ್ವ ವಿಭಾಗದ ವಿಶೇಷ ತಂಡದಿಂದ ನಡೆದ ವಿಚಾರಣೆ ವೇಳೆ ನವೀನ್​​ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ.

ವಿವಾದಾತ್ಮಕ ಫೋಸ್ಟ್​​ ಹಾಕಿದ್ದು ನಾನೇ. ಈ ಪೋಸ್ಟ್​​ನಿಂದ ಹೀಗೆ ಗಲಭೆ ಆಗುತ್ತೇ ಎಂದು ಕೊಂಡಿರಲಿಲ್ಲ ಎಂದು ನವೀನ್​​​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಗಿ ತಿಳಿದು ಬಂದಿದೆ. ಹಾಗೆಯೇ ತಾನೇ ಖುದ್ದು ಈ ಪೋಸ್ಟ್​​ ಡಿಲೀಟ್​ ಮಾಡಿರುವುದಾಗಿ ನವೀನ್​​ ಹೇಳಿದ್ದಾನೆ.

ಇನ್ನು, ನವೀನ್​ ಮೊಬೈಲ್​ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಲ್ಯಾಪ್​​ಟ್ಯಾಪ್​​​ನಲ್ಲಿ ನವೀನ್​ ಪಾಸ್ವಾರ್ಡ್​ ಮೂಲಕ ಫೇಸ್​​ಬುಕ್​​​​ ಆಕ್ಸಿಸ್​​ ಮಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ನವೀನ್​​ನನ್ನು ಹೆಚ್ಚುವರಿ ವಿಚಾರಣೆ ಮಾಡಲಾಗುತ್ತಿದೆ.

ಇನ್ನೊಂದೆಡೆ ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಬೆಂಗಳೂರು ಪೊಲೀಸರು ಖಲೀಂ ಪಾಷಾರನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: 74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ

ಇನ್ನು, ಸಿಸಿಬಿ ಮತ್ತು ಡಿ.ಜೆ ಹಳ್ಳಿ ಪೊಲೀಸರು ರಾತ್ರಿ ಕಾರ್ಯಚರಣೆ ನಡೆಸಿದ್ದರು. ಡಿ.ಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನ ಹುಡುಕಿ ಹುಡುಕಿ ಅರೆಸ್ಟ್ ಮಾಡಿದ್ದಾರೆ. ಇದುವರೆಗೂ 200ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ.
Published by: Ganesh Nachikethu
First published: August 14, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading