HOME » NEWS » State » DJ HALLI VIOLENCE ACCUSED SAMPATH RAJ SHOULD SURRENDER SAYS HOME MINISTER BASAVARAJ BOMMAI IN BANGALORE SCT

ಮಾಜಿ ಮೇಯರ್ ಸಂಪತ್ ರಾಜ್ ಸ್ವತಃ ಬಂದು ಶರಣಾಗಬೇಕು; ಗೃಹ ಸಚಿವ ಬಸವರಾಜ ಬೊಮ್ಮಾಯಿ

ಮಾಜಿ ಮೇಯರ್ ಸಂಪತ್ ರಾಜ್ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳು ಇವೆ. ಹೀಗಾಗಿ, ಲುಕೌಟ್ ನೋಟೀಸ್ ನೀಡಲಾಗಿದೆ. ಸಂಪತ್ ರಾಜ್ ಜವಾಬ್ದಾರಿಯುತ ನಾಗರೀಕನಾಗಿ ಬಂದು ಶರಣಾಗಬೇಕು. ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

news18-kannada
Updated:November 12, 2020, 11:54 AM IST
ಮಾಜಿ ಮೇಯರ್ ಸಂಪತ್ ರಾಜ್ ಸ್ವತಃ ಬಂದು ಶರಣಾಗಬೇಕು; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ​​ ಬೊಮ್ಮಾಯಿ
  • Share this:
ಬೆಂಗಳೂರು (ನ. 12): ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನಾನು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪೊಲೀಸರೇ ಬಂಧಿಸುತ್ತಾರೆ. ಸಂಪತ್ ರಾಜ್ ಜವಾಬ್ದಾರಿಯುತ ನಾಗರೀಕನಾಗಿ ಬಂದು ಶರಣಾಗಬೇಕು. ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ, ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ಲುಕೌಟ್ ನೋಟೀಸ್ ಹೊರಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳು ಇವೆ. ಹೀಗಾಗಿ, ಲುಕೌಟ್ ನೋಟೀಸ್ ನೀಡಲಾಗಿದೆ. ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಾ ಇದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣ ಇರುವುದರಿಂದ ಹೆಚ್ಚಾಗಿ ಮಾತನಾಡೋದಿಲ್ಲ. ಡಿಜೆ ಹಳ್ಳಿ ಗಲಭೆ ವೇಳೆ ಠಾಣೆ ಸೇರಿದಂತೆ ಪೊಲೀಸರ ವಾಹನ ನಾಶವಾಯಿತು. ಜೊತೆಗೆ ಪೊಲೀಸ್ ಸಿಬ್ಬಂದಿಯ ಸ್ವಂತ ಬೈಕ್​ಗಳು ಸಹ ಭಸ್ಮವಾಯಿತು. ಆದರೆ, ಪೊಲೀಸ್ ಸಿಬ್ಬಂದಿಗೆ ಬೈಕ್ ಇಲ್ಲವಾದ್ದರಿಂದ ಕಮಿಷನರ್ ಟಿವಿಎಸ್ ಕಂಪನಿ ಜೊತೆ ಮಾತನಾಡಿದರು. ಅವರು ಒಪ್ಪಿಕೊಂಡು 25 ಬೈಕ್​ಗಳನ್ನು ಕೊಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Bangalore Fire Accident: ಬೆಂಗಳೂರು ಕೆಮಿಕಲ್ ಫ್ಯಾಕ್ಟರಿ ಗೋಡೌನ್ ಬೆಂಕಿ ಅವಘಡ; ಮಾಲೀಕ ಸಜ್ಜನ್​ ರಾಜ್ ಬಂಧನ

ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಹೆಚ್ಚಾಗಿದೆ. ಪೊಲೀಸ್ ಇಲಾಖೆಯಲ್ಲಿ ಸೈಬರ್ ಎಕ್ಸ್​ಪರ್ಟ್​ಗಳು ಬೇಕಾಗಿದ್ದಾರೆ. ಬೆಂಗಳೂರಿನಲ್ಲಿ ಸೆನ್ ಪೊಲೀಸ್ ಠಾಣೆಗಳನ್ನು ಓಪನ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮೂರು ಪೊಲೀಸ್ ಠಾಣೆಗೆ ಹೊಸದಾಗಿ ಎಸಿಪಿ ನೇಮಕ ಮಾಡಲಾಗುತ್ತದೆ. ಈಗ ಹೊಸದಾಗಿ ಗೋವಿಂದಪುರ ಠಾಣೆ ಪ್ರಾರಂಭವಾಗಲಿದ್ದು, ಡಿಜೆ ಹಳ್ಳಿ , ಕೆಜಿ ಹಳ್ಳಿ ಠಾಣೆ ಮೂರು ಸ್ಟೇಷನ್​ಗೆ ಹೊಸ ಎಸಿಪಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
Youtube Video

ಡಿಸೆಂಬರ್ ನಿಂದ ಪೊಲೀಸ್ ಸ್ಟೇಷನ್ ಕೆಲಸ ನಡೆಯಲಿದೆ. ಪ್ರಮುಖವಾಗಿ ಡ್ರಗ್ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ. ಅದು ಕೂಡ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಕ್ರೈಂ ಕಡಿವಾಣ ಹಾಕುವುದು ಮುಖ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published by: Sushma Chakre
First published: November 12, 2020, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories