DJ Halli Riots Case| ಡಿಜೆ ಹಳ್ಳಿ ಗಲಭೆ ಪ್ರಕರಣ; ಪ್ರಮುಖ ಆರೋಪಿ ಸೈಯದ್​ ಅಬ್ಬಾಸ್​ ಬಂಧನ!

ಕೆ.ಜಿ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ್ದ ಸೈಯದ್ ಅಬ್ಬಾಸ್ ವಿರುದ್ಧ 2020 ರ ಆಗಸ್ಟ್ 11 ರಂದು ನಡೆದಿದ್ದ ಗಲಭೆ ಕೇಸ್ ಪ್ರಕರಣ ಸಂಬಂಧ ಆಗಸ್ಟ್ 12 2020 ರಂದು FIR ದಾಖಲಾಗಿತ್ತು. ಎಫ್​ಐಆರ್​ ದಾಖಲು ಬಳಿಕ ಪ್ರಕರಣವನ್ನು ಎನ್​ಐಎಗೆ ವರ್ಗಾವಣೆ ಮಾಡಲಾಗಿತ್ತು.

ಡಿಜೆ ಹಳ್ಳಿ ಗಲಭೆಯಲ್ಲಿ ಬೆಂಕಿಗೆ ಆಹುತಿಯಾದ ವಾಹನಗಳು.

ಡಿಜೆ ಹಳ್ಳಿ ಗಲಭೆಯಲ್ಲಿ ಬೆಂಕಿಗೆ ಆಹುತಿಯಾದ ವಾಹನಗಳು.

 • Share this:
  ಬೆಂಗಳೂರು (ಜುಲೈ 01); ಇಡೀ ರಾಜ್ಯದ ಗಮನ ಸೆಳೆದಿದ್ದ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಿಡಿಗೇಡಿಗಳು ಕಾಂಗ್ರೆಸ್​ ನಾಯಕ ಅಖಂಡ ಶ್ರೀನಿವಾಸ್ ಮನೆ, ಕಚೇರಿ, ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಇಡೀ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಪೊಲೀಸ್​ ಸಿಬ್ಬಂದಿಗಳ ಬೈಕ್​ಗಳು ಸಹ ಬೆಂಕಿಗೆ ಆಹುತಿಯಾಗಿದ್ದವು. ಆಗಸ್ಟ್​ 11ರ ಈ ಘಟನೆಗೆ ರಾಜ್ಯ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆಯೂ ಸಹ ಚುರುಕಾಗಿ ನಡೆಯುತ್ತಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಸೈಯದ್ ಅಬ್ಬಾದ ಅಬ್ಬಾಸ್​ ಪ್ರಕರಣದ ನಂತರ ನಾಪತ್ತೆಯಾಗಿದ್ದ. ಆದರೆ, ಪೊಲೀಸರು ಇದೀಗ ಸೈಯದ್​ ಅಬ್ಬಾಸ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಗೋವಿಂದಪುರದ ನಿವಾಸಿ ಸೈಯದ್ ಅಬ್ಬಾಸ್ ಬಂಧನವಾಗಿದ್ದು, ಪ್ರಕರಣದ ತನಿಖೆಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಕೆ.ಜಿ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ್ದ ಸೈಯದ್ ಅಬ್ಬಾಸ್ ವಿರುದ್ಧ 2020 ರ ಆಗಸ್ಟ್ 11 ರಂದು ನಡೆದಿದ್ದ ಗಲಭೆ ಕೇಸ್ ಪ್ರಕರಣ ಸಂಬಂಧ ಆಗಸ್ಟ್ 12 2020 ರಂದು FIR ದಾಖಲಾಗಿತ್ತು. ಎಫ್​ಐಆರ್​ ದಾಖಲು ಬಳಿಕ ಪ್ರಕರಣವನ್ನು ಎನ್​ಐಎಗೆ ವರ್ಗಾವಣೆ ಮಾಡಲಾಗಿತ್ತು.

  ಇದನ್ನೂ ಓದಿ: Narendra Modi| ಕೊರೋನಾ 3ನೇ ಅಲೆಯನ್ನು ತಡೆಯುವಲ್ಲಿ ಮಾದರಿಯಾಗಿ ಕೆಲಸ ಮಾಡಿ; ಕೇಂದ್ರ ಸಚಿವರಿಗೆ ಮೋದಿ ಕಿವಿಮಾತು

  ಸೈಯದ್ ಅಬ್ಬಾಸ್ ಗಲಭೆ ವೇಳೆ ಹಲವು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ಬಳಿಕ ಠಾಣೆಗೆ ಬೆಂಕಿ ಇಟ್ಟಿದ್ದು ಸಹ‌ ಇದೇ ಸೈಯದ್ ಅಬ್ಬಾಸ್ ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಈಗಾಗಲೇ ಪ್ರಕರಣ ಸಂಬಂಧ 138 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಹೀಗಾಗಿ ಪ್ರಸ್ತುತ ಎನ್​ಐಎ ಸ್ಪೇಷಲ್ ಕೋರ್ಟ್ ಮುಂದೆ ಆರೋಪಿಯನ್ನು ಹಾಜರು ಪಡಿಸಿರುವ ಪೊಲೀಸರು ಆತನನ್ನು 6 ದಿನಗಳ ಕಾಲ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: