ನಾಗಮಂಗಲದಲ್ಲೊಂದು ಅಚ್ಚರಿ; ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಪೇಚಿಗೆ ಸಿಕ್ಕವರು

ಸಕ್ಕರೆನಾಡು ಮಂಡ್ಯದಲ್ಲಿ ಮೇಲಿಂದ ಮೇಲೆ ಪವಾಡಗಳನ್ನು ಮಾಡುತ್ತಿರುವ ಬಸಪ್ಪಗಳು ದೇವರ ಸ್ವರೂಪಿ ಎನಿಸಿವೆ. ಕಾಕತಾಳೀಯವೋ, ಸತ್ಯವೋ ಒಟ್ಟಿನಲ್ಲಿ ಇಂತಹ ದೇವರ ಬಸಪ್ಪಗಳನ್ನು ಪರೀಕ್ಷೆ ಮಾಡಲು ಹೋಗಿ ಕೊನೆಗೆ ಆ ಬಸಪ್ಪನ ಕಾಲ ಹಿಡಿಯಬೇಕಾಗಿ‌ ಬಂದ ಘಟನೆಯಂತೂ ಇಲ್ಲಿನ ಜನರ ಭಕ್ತಿ ಪರಾಕಷ್ಠೆಯನ್ನ ಇನ್ನಷ್ಟು ಹೆಚ್ಚಿಸಿದೆ.

ನಾಗಮಂಗಲದ ಜುಟ್ಟನಹಳ್ಳಿಯಲ್ಲಿ ಜಯಪುರದ ಬಸಪ್ಪನ ಪವಾಡ

ನಾಗಮಂಗಲದ ಜುಟ್ಟನಹಳ್ಳಿಯಲ್ಲಿ ಜಯಪುರದ ಬಸಪ್ಪನ ಪವಾಡ

  • News18
  • Last Updated :
  • Share this:
ಮಂಡ್ಯ(ಜ. 23): ಸಕ್ಕರೆ ನಾಡು ಮಂಡ್ಯದಲ್ಲಿ ದೇವರ ಬಸಪ್ಪಗಳು ಸಾಕಷ್ಟು ಪವಾಡಗಳ‌ನ್ನು ಮಾಡಿರುವ ಉದಾಹರಣೆಗಳಿವೆ. ಜಿಲ್ಲೆಯ ಭಕ್ತ ಜನರಲ್ಲಿ ಬಸಪ್ಪವನ್ನು ಇಲ್ಲಿನ‌ ದೇವರ ಪ್ರತಿರೂಪ ಅಂತಲೇ ನಂಬಿದ್ದಾರೆ. ಇಂತಹ ದೇವರ ಬಸಪ್ಪವೊಂದನ್ನು ಪರೀಕ್ಷೆ ಮಾಡಲು ಹೋಗಿದ್ದ ಇಬ್ಬರು ನಾಸ್ತಿಕರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಗ್ರಾಮಕ್ಕೆ ಪಾದ ಪೂಜೆಗೆ ಬಂದಿದ್ದ ಜಯಪುರದ ಬಸಪ್ಪನ ಕೋಪದ ಕೆಂಗಣ್ಣಿಗೆ ಗುರಿಯಾಗಿ ಕೊನೆಗೆ ತಪ್ಪಾಯ್ತು ಅಂತಾ ಬಸಪ್ಪನ ಪಾದಕ್ಕೇ ಶರಣುಬಿದ್ದಿದ್ದಾರೆ. ಇಂಥದ್ದೊಂದು ಘಟನೆ ನಡೆದಿರುವುದು ನಾಗಮಂಗಲ ತಾಲೂಕಿನ ಜುಟ್ಟಹನಹಳ್ಳಿ ಗ್ರಾಮದಲ್ಲಿ.

ಜುಟ್ಟನಹಳ್ಳಿ ಗ್ರಾಮದ ರಮೇಶ್ ಎಂಬುವರ ಮನೆಯಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ರಾಮನಗರ ಜಿಲ್ಲೆ ಜಯಪುರದ ಚಾಮುಂಡೇಶ್ವರಿ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಗಿತ್ತು. ಈ ವೇಳೆ ಬಸಪ್ಪನ ಪವಾಡ ನಂಬದ ಕೆಲವು ಜನರು ಬಸಪ್ಪನ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಪೊಲೀಸ್ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಉದ್ದೇಶಪೂರ್ವಕವಾಗಿ ಪರೀಕ್ಷಸಲೆಂದೇ ಮನಸ್ಸಿನಲ್ಲಿ ಬೇರೇನೋ ಎಣಿಸಿಕೊಂಡು ಬಸಪ್ಪನ ಪಾದ ಕೇಳಿದ್ಧಾರೆ. ಇದ್ರಿಂದ ಕೆರಳಿದ ಬಸಪ್ಪ ಆತನನ್ನು ಬೀದಿಯಲ್ಲಿ ಕೊಂಬಿನಿಂದ ತಿವಿದು ಅಟ್ಟಾಡಿಸುತ್ತದೆ. ಕೊನೆಗೆ ಆತ ತಪ್ಪಾಯ್ತು ಅಂತಾ ಬಸಪ್ಪನ‌ ಕಾಲಿಗೆ ಬಿದ್ದ ಕ್ಷಮೆಯಾಚಿಸಿರುತ್ತಾರೆ.

ಇದನ್ನೂ ಓದಿ: ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ

ಇನ್ನು ಅದೇ ಊರಿನ ಮನೆಯೊಂದರಲ್ಲಿ ಪಾದಪೂಜೆ  ಮಾಡಿಸಿಕೊಂಡ ಬಸಪ್ಪನನ್ನು  ಮದ್ಯ ವ್ಯಸನಿ ವ್ಯಕ್ತಿಯೋರ್ವ ಪರೀಕ್ಷೆ ಮಾಡಲು ಮುಂದಾಗುತ್ತಾನೆ. ಈ ವೇಳೆ ಕೂಡ ಕೋಪಗೊಂಡ ಬಸಪ್ಪ ಆತನನ್ನು ಮನೆಯೊಳಗೆ ಕೊಂಬಿನಿಂದ ತಿವಿದು ಕೆಳಕ್ಕೆ ಬೀಳಿಸುತ್ತದೆ. ‌ಅಲ್ಲದೇ ಆತ ಬಸಪ್ಪನ ಪಾದ ಕೇಳಲು ಮುಂದಾದಾಗ ಆತನ ಅಂಗೈ ಮೇಲೆ ಗಂಟೆಗಟ್ಟಲೇ ನಿಲ್ಲುತ್ತದೆ. ಆತ ಬಸಪ್ಪನ ಪಾದದ ಭಾರದಿಂದ ಕಣ್ಣೀರಾಕಿ ತನ್ನದು ತಪ್ಪಾಯ್ತು ಇನ್ಮುಂದೆ ಈ ರೀತಿ ಮಾಡಲ್ಲ‌. ಯಾವುತ್ತೂ ಮದ್ಯ ಸೇವಿಸಲ್ಲ. ಕ್ಷಮಿಸುವಂತೆ ಮನವಿ ಮಾಡಿದ ಬಳಿಕ ಬಸಪ್ಪ ತನ್ನ ಪಾದ ವಾಪಸ್ಸು ತೆಗೆದುಕೊಳ್ಳುತ್ತದೆ. ‌ಕಡೆಗೆ ಬಸಪ್ಪನಿಗೆ ಪೂಜೆ ಸಲ್ಲಿಸಿದ ಆ ವ್ಯಕ್ತಿ ಕ್ಷಮೆಯಾಚಿಸಿ ಇನ್ಮುಂದೆ ಇಂತಹ ಯಾವುದೇ ಕೆಲಸ ಮಾಡೋದಿಲ್ಲ ಎಂದು ಬಸಪ್ಪನ ಮುಂದೆ ಪ್ರಮಾಣ ಮಾಡುತ್ತಾನೆ.

ಇದಾದ ಬಳಿಕ ಬಸವ ಆ ಊರಿಗೆ ಕರೆಸಿದ್ದ ರಮೇಶ್ ಎಂಬುವರ ಮನೆಯ ಸಮಸ್ಯೆ ಬಗೆಹರಿಸಲು ಮುಂದಾಯ್ತು. ಆ ಮನೆಯವರಿಗೆ ಯಾರೋ ಮಾಡಿಸಿ ಇಟ್ಟಿದ್ದ ಮಾಟದ ವಸ್ತುವನ್ನು ಪತ್ತೆ ಹಚ್ಚಿ ತೋರಿಸಿಕೊಡುವ ಮೂಲಕ ಆ‌ ಮನೆಯ ಸಮಸ್ಯೆ ಬಗೆಹರಿಸಿತು.

ಊರಿನಲ್ಲಿ ತೋರಿದ ಜಯಪುರ ಬಸಪ್ಪನ‌ ಪವಾಡಕ್ಕೆ ಗ್ರಾಮಸ್ಥರು ಅಚ್ಚರಿಗೊಂಡು ಕೊಂಡಾಡುತ್ತಿದ್ದಾರೆ. ಸಕ್ಕರೆನಾಡು ಮಂಡ್ಯದಲ್ಲಿ ಮೇಲಿಂದ ಮೇಲೆ ಪವಾಡಗಳನ್ನು ಮಾಡುತ್ತಿರುವ ಬಸಪ್ಪಗಳು ದೇವರ ಸ್ವರೂಪಿ ಎನಿಸಿವೆ. ಕಾಕತಾಳೀಯವೋ, ಸತ್ಯವೋ ಒಟ್ಟಿನಲ್ಲಿ ಇಂತಹ ದೇವರ ಬಸಪ್ಪಗಳನ್ನು ಪರೀಕ್ಷೆ ಮಾಡಲು ಹೋಗಿ ಕೊನೆಗೆ ಆ ಬಸಪ್ಪನ ಕಾಲ ಹಿಡಿಯಬೇಕಾಗಿ‌ ಬಂದ ಘಟನೆಯಂತೂ ಇಲ್ಲಿನ ಜನರ ಭಕ್ತಿ ಪರಾಕಷ್ಠೆಯನ್ನ ಇನ್ನಷ್ಟು ಹೆಚ್ಚಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: