ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಸರಿಯಲ್ಲ- ಪ್ರಿಯಾಂಕ ಖರ್ಗೆ

news18
Updated:July 18, 2018, 8:55 PM IST
ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಸರಿಯಲ್ಲ- ಪ್ರಿಯಾಂಕ ಖರ್ಗೆ
news18
Updated: July 18, 2018, 8:55 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಜುಲೈ .18) : ಕೆಲವೊಬ್ಬರಿಗೆ ಬಜೆಟ್ ತೃಪ್ತಿದಾಯಕವಾಗಿಲ್ಲ. ಹಾಗೆಂದು ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬಜೆಟ್ ಸಿಕ್ಕಿಲ್ಲ ಎಂಬ ಆರೋಪವಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಎಚ್.ಕೆ.ಪಾಟೀಲರು ಹೇಳಿದ್ದಾರೆ. ಆದರೆ ಅದು ಅವರ ವೈಯಕ್ತಿಕ ಹೇಳಿಕೆ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ನಿಗದಿತ ಅನುದಾನ ನೀಡಲಾಗಿದೆ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ. ಅಖಂಡ ಕರ್ನಾಟಕದ ಕಲ್ಯಾಣದ ದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದೆ ಎಂದರು.

ಸಮ್ಮಿಶ್ರ ಸರ್ಕಾರ ಎಂದ ಮೇಲೆ ಕೆಲವೊಂದು ಗೊಂದಲಗಳಿರುತ್ತವೆ. ಸಣ್ಣ-ಪುಟ್ಟ ಅಡಚಣೆ ಇದ್ದೇ ಇರುತ್ತದೆ. ಹಾಗೆಂದು ಆಡಳಿತ ಮಾಡುವಲ್ಲಿ ನಿಷ್ಕ್ರಿಯವಾಗಿದ್ದೇವೆ ಎಂದರ್ಥವಲ್ಲ. ಆಡಳಿತ ಯಂತ್ರಿ ಸರಿಯಾದ ರೀತಿಯಲ್ಲಿಯೇ ಸಾಗಿದೆ ಎಂದರು. ರಾಜ್ಯಾದ್ಯಂತ ಸುಮಾರು 3500 ವಸತಿ ನಿಲಯಗಳಿದ್ದು, ಅವ್ಯವಸ್ಥೆಯ ಆಗರವಾಗಿವೆ ಎಂಬ ದೂರು ಕೇಳಿ ಬಂದಿದೆ. ಯಾವ ರೀತಿಯ ಅವ್ಯವಸ್ಥೆಯಿದೆ ಎಂಬ ಕುರಿತು ವರದಿ ನೀಡಲು ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ವರದಿಯ ನಂತರ ವಸತಿ ನಿಲಯಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲುಗುವುದು ಎಂದು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ವಿಭಾಗೀಯ ಕೇಂದ್ರವಾಗಿರುವ ಕಲಬುರ್ಗಿಯಲ್ಲಿ ಉತ್ತಮವಾದ ಝೂ ಇಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಹೊಸ ಝೂ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ನೂತನ ಝೂ ನಿರ್ಮಾಣ ಮಾಡಿದ ನಂತರ ಮಿನಿ ಝೂ ಸ್ಥಳಾಂತರಿಸಲಾಗುವುದು ಎಂದರು. ಚಿಂಚೋಳಿಯ ಕೊಂಚವರಂ ಅರಣ್ಯ ಪ್ರದೇಶದಲ್ಲಿ ಎಕೋ ರೈಲು ಸಂಚಾರ ಆರಂಭಿಸಲೂ ಚಿಂತನೆ ನಡೆಸಿರುವುದಾಗಿ ಪ್ರಿಯಾಂಕ ಖರ್ಗೆ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

 

 
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...