ಪ್ರವಾಹ ಸಂತ್ರಸ್ತರ ಕಣ್ಣೀರಿನ ನಡುವೆ ಚಿಕ್ಕಮಗಳೂರು ಉತ್ಸವ; ಸಚಿವರ ಕ್ರಮಕ್ಕೆ ವಿರೋಧ

ಕಳೆದ ವರ್ಷ ಸುರಿದ ಮಳೆಯಿಂದ ಸಾವಿರಾರು ಜನರು ಆಸ್ತಿ ಪಾಸ್ತಿಯನ್ನ ಕಳೆದುಕೊಂಡ್ರೆ, ನೂರಾರು ಜನರು ಸೂರನ್ನ ಕಳೆದುಕೊಂಡು ಭವಿಷ್ಯದ ಚಿಂತೆಯಲ್ಲಿದ್ದಾರೆ.. ಈ ಮ?

news18-kannada
Updated:February 14, 2020, 5:31 PM IST
ಪ್ರವಾಹ ಸಂತ್ರಸ್ತರ ಕಣ್ಣೀರಿನ ನಡುವೆ ಚಿಕ್ಕಮಗಳೂರು ಉತ್ಸವ; ಸಚಿವರ ಕ್ರಮಕ್ಕೆ ವಿರೋಧ
ಸಿ.ಟಿ. ರವಿ
  • Share this:
ಚಿಕ್ಕಮಗಳೂರು (ಫೆ.14): ಜಿಲ್ಲೆ ಸಂಸ್ಕೃತಿಯ ಬೇರುಗಟ್ಟಿಗೊಳಿಸಲು ಇದೇ ಫೆ. 28ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ಉತ್ಸವ ಏರ್ಪಡು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಮುಂದಾಗಿದ್ದಾರೆ.  ಅದ್ದೂರಿಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಮಂತಗೊಳಿಸಿ ಈ ಹಬ್ಬ ನಡೆಸಲಾಗುವುದು ಎಂದು ಅವರು ತಿಳಿಸಿದ್ದು, ಸಚಿವರ ಈ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ.

ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸುರಿದ ರಣಭೀಕರ ಮಳೆಗೆ ಮೂಡಿಗೆರೆ ಸೇರಿದಂತೆ ಅನೇಕ ತಾಲೂಕಿನ ಜನರು ನಿರ್ಗತಿಕರಾಗಿದ್ದು, ಆಶ್ರಯತಾಣ ಸೇರಿದ್ದಾರೆ. ಆರು ತಿಂಗಳಾದರೂ ಅವರಿಗೆ ಶಾಶ್ವತ ಸೂರು ಕಲ್ಪಿಸಲು ಸರ್ಕಾರ ವಿಫಲವಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುವುದನ್ನು ಬಿಟ್ಟು ಈ ರೀತಿ ಕೋಟ್ಯಾಂತರ ರೂ ವೆಚ್ಚ ಮಾಡುವುದು ಸರಿಯಲ್ಲ ಎಂಬ ಕೂಗು ಕೇಳಿಬಂದಿದೆ.

ಮಲೆನಾಡಿನ ಜನರಲ್ಲಿ ಇನ್ನು ಸೂತಕದ ಛಾಯೆ ಆವರಿಸಿದ್ದು, ಮುಂದಿನ ಭವಿಷ್ಯ ಏನು ಎಂಬ ಚಿಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಕೋಟಿ ಕೋಟಿ ವೆಚ್ಚದಕ್ಕು ಉತ್ಸವ ಮಾಡುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್​, ಜೆಡಿಎಸ್​ ಸೇರಿದಂತೆ ವಿವಿಧ ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿದರು.

ಇದರ ಜೊತೆಗೆ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಡ್ಡೆ ತೋರಿದ ಉಸ್ತುವಾರಿ ಸಚಿವರು, ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದರು. ಸಾಹಿತ್ಯ ಸಮ್ಮೇಳನದ ವೇಳೆ ತೋರದ ಮುತುವರ್ಜಿ ಈಗ ತೋರುತ್ತಿರುವುದು ಏಕೆ ಎಂಬ ಪ್ರಶ್ನಿಸಿದ್ದಾರೆ.

ಇದನ್ನು ಓದಿ:  ಹುತಾತ್ಮ ಯೋಧ ಗುರುವಿನ ಸ್ಮರಣೆ ಕಾರ್ಯಕ್ಕೆ ಗೈರಾದ ಹೆಂಡತಿ ಕಲಾವತಿ

ಇನ್ನು  ಚಿಕ್ಕಮಗಳೂರು ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು, ಹಬ್ಬದ ಲಾಂಛನ ಕೂಡ ಬಿಡುಗಡೆ ಮಾಡಲಾಗಿದೆ. ಕಳೆದೆರಡು ದಶಕಗಳ ಹಿಂದೆ ನಿಂತಿದ್ದ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಈಗ ಜೀವ ತುಂಬುತ್ತಿರುವುದು ಸರಿ. ಈ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಾಧ್ಯ. ಆದರೆ, ಪ್ರವಾಹ ಸಂತ್ರಸ್ತರು ಇನ್ನು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಇಷ್ಟು ಅಡಂಬರ ಬೇಡ ಎಂಬ ಮಾತು ಕೇಳಿಬಂದಿದೆ.
 
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading