• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಧಾರವಾಡದ ಬಿಸಿಲಿನ ತಾಪಕ್ಕೆ 34 ವಿವಿ ಮೆಷಿನ್‌ಗಳು ಢಮಾರ್! ಕಂಗಾಲಾದ ಅಧಿಕಾರಿಗಳು

Karnataka Elections: ಧಾರವಾಡದ ಬಿಸಿಲಿನ ತಾಪಕ್ಕೆ 34 ವಿವಿ ಮೆಷಿನ್‌ಗಳು ಢಮಾರ್! ಕಂಗಾಲಾದ ಅಧಿಕಾರಿಗಳು

ವಿವಿ ಮೆಷಿನ್‌

ವಿವಿ ಮೆಷಿನ್‌

ಭಾರೀ ಬಿಸಿಲಿನ ತಾಪಮಾನಕ್ಕೆ ಪೇಡಾನಗರಿ ಜಿಲ್ಲೆಯಲ್ಲಿ 34 ವಿವಿ ಪ್ಯಾಡ್‌ಗಳನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೇ ಖಚಿತಪಡಿಸಿದ್ದಾರೆ.

  • Share this:

ಧಾರವಾಡ: ರಾಜ್ಯದೆಲ್ಲೆಡೆ ಮತದಾನ ಪ್ರಕ್ರಿಯೆ (Karnataka Polls) ಬಿರುಸಿನಿಂದ ನಡೆಯುತ್ತಿದೆ. ವಿಧಾನಸಭಾ ಚುನಾವಣೆಗೆ ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಸಿಲಿನ ತಾಪಮಾನಕ್ಕೆ (VV Machine) ವಿವಿ ಮೆಷಿನ್‌ಗಳೇ ಕೈಕೊಟ್ಟಿರುವ ಪ್ರಕರಣ ವರದಿಯಾಗಿದೆ.


ಹೌದು. ಧಾರವಾಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದು, ಹೀಗಿದ್ದರೂ ಮತದಾರರು ತಮ್ಮ ಹಕ್ಕು ಚಲಾವಣೆಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಆದರೆ ಭಾರೀ ಬಿಸಿಲಿನ ತಾಪಮಾನಕ್ಕೆ ಪೇಡಾನಗರಿ ಜಿಲ್ಲೆಯಲ್ಲಿ 34 ವಿವಿ ಪ್ಯಾಡ್‌ಗಳನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೇ ಖಚಿತಪಡಿಸಿದ್ದಾರೆ.


ಧಾರವಾಡ ವನಿತಾ ಶಾಲೆಯ ಮತದಾನ ಕೇಂದ್ರಕ್ಕೆ ಭೇಟಿದ ಬಳಿಕೆ‌ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೆಲವೊಂದು ಕಡೆ ಬೆಳಿಗ್ಗೆ ಮತದಾನದ ಮಷಿನ್‌ಗೆ ತೊಂದರೆ ಆಗಿದೆ. ಇನ್ನುಳಿದ ಕಡೆ ಬಿಸಿಲಿನಿಂದ ವಿವಿ ಪ್ಯಾಡ್ ಕೈ ಕೊಟ್ಟಿದೆ. ಆದರೆ ಎಲ್ಲಾ ಪಕ್ಷಗಳ ಸ್ಥಳೀಯ ಏಜೆಂಟ್‌ಗಳ ಸಮ್ಮುಖದಲ್ಲೇ ವಿವಿ ಯಂತ್ರಗಳನ್ನು ಬದಲಾವಣೆ ಮಾಡಲಾಗಿದೆ. ಜೊತೆಗೆ ಎರಡು ಕಂಟ್ರೋಲ್ ಯುನಿಟ್‌ ಮೋಕಫೋಲ್ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ: Karnataka Election Voting LIVE: ಕರ್ನಾಟಕ ವಿಧಾನಸಭಾ ಚುನಾವಣೆ- ರಾಜ್ಯದಲ್ಲಿ ಇದುವರೆಗೆ 37.25% ಮತದಾನ


ಹೆಸರು ಕೈ ಬಿಟ್ಟ ವಿಚಾರ


ಇನ್ನು ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟ ಬಗ್ಗೆ ಕೂಡ ನಮಗೆ ದೂರು ಬಂದಿದೆ. ಕಳೆದ ಆರು ತಿಂಗಳ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರೋರ ಬಗ್ಗೆ ಮಾಹಿತಿ ತಿಳಿಸಲು ಹೇಳಲಾಗಿತ್ತು. ಕಳೆದ 6 ತಿಂಗಳಲ್ಲಿ 40 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೆಲವೊಬ್ಬರು ಮತದಾರರ ಪಟ್ಟಿಯನ್ನು ಚೆಕ್ ಮಾಡಿಲ್ಲ. ಕೆಲವೊಬ್ಬರದು ಬೇರೆ ಕಡೆ ಹೆಸರು ಇರೋದ್ರಿಂದ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮತ ಹಾಕಲು ಅವರಿಗೆ ಅವಕಾಶ ಇಲ್ಲ. ಫಾರಂ ಸಿಕ್ಸ್ ಅಪ್ಲೈ ಮಾಡಿದ್ರೆ ಸೇರಿಸಲಾಗುವುದು ಎಂದು ಹೇಳಿದರು.


ಇನ್ನು ಮತದಾನ ಮಾಡಿರೋ ವಿಡಿಯೋ ಬಹಿರಂಗ ಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗಿತ್ತು. ಮತ ಹಾಕಿದ್ದನ್ನು ವಿಡಿಯೋ ಮಾಡೋದು, ಯಾರಿಗೆ‌ ಮತ ಹಾಕಿರೊದಾಗಿ ಹೇಳೋದು ತಪ್ಪು. ಎಲ್ಲರೂ ಒಳ್ಳೆ ಮನೋಭಾವದಿಂದ ಮತದಾನ ಮಾಡಿ ಎಂದು ಹೇಳಿದರು.


ಇದನ್ನೂ ಓದಿ: Weather Report: ಮತದಾನದಂದೇ ರಾಜ್ಯದ ಹಲವೆಡೆ ಮಳೆಯಾಗೋ ಸಾಧ್ಯತೆ; ಹೀಗಿದೆ ಇಂದಿನ ಹವಾಮಾನ ವರದಿ


ಹುಬ್ಬಳ್ಳಿಯಲ್ಲಿ ಸರತಿ ಸಾಲಿನಲ್ಲಿ ಮತ ಚಲಾಯಿಸಲು ಬಂದ ಬೆಕ್ಕು!


ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಜನರು ಮಾತ್ರ ಮತದಾನ ಮಾಡೋಕೆ ಬಂದಿಲ್ಲ. ಜನರ ಜೊತೆ ಬೆಕ್ಕು ಕೂಡ ಮತದಾನಕ್ಕೆ ಬಂದಿದೆ. ಮತ ಚಲಾಯಿಸಲೆಂದು ಸರತಿ ಸಾಲಿನಲ್ಲಿ ನಿಂತವರಿಗೆ ಕುಳಿತುಕೊಳ್ಳಲು ಚೆಯರ್ ವ್ಯವಸ್ಥೆ ಮಾಡಲಾಗಿತ್ತು. ಇದರ ಚೆಯರ್‌ನಲ್ಲಿ ಎಲ್ಲರೂ ಕುಳಿತಿದ್ದರು. ಈ ವೇಳೆ ಅಲ್ಲೇ ಇದ್ದ ಬೆಕ್ಕು ಸಾಲಿನಲ್ಲಿ ಹಾಕಿದ್ದ ಖಾಲಿ ಕುರ್ಚಿಯಲ್ಲಿ ಕುಳಿತಿದೆ. ಜನರನ್ನು ಅದನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಕೂಡ ಅದು ಅಲ್ಲಿಂದ ಕದಲಲಿಲ್ಲ. ಅಲ್ಲೇ ಇದ್ದ ಪತ್ರಕರ್ತರು ಕುರ್ಚಿಯಲ್ಲಿ ಜನರ ಜೊತೆ ಕುಳಿತಿದ್ದ ಬೆಕ್ಕಿನ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಹಾಕಲಾಗಿದ್ದ ಮತಗಟ್ಟೆ ಸಂಖ್ಯೆ 188 ರ ಬಳಿ ಬಂದ ಬೆಕ್ಕು ತಾನು ಕೂಡ ಮತ ಚಲಾಯಿಸುತ್ತೇನೆ ಅನ್ನೋ ಹಾಗೆ ಚೆಯರ್‌ನಲ್ಲಿ ಕುಳಿತು ಫೋಸ್ ನೀಡಿದೆ. ಆರಂಭದಲ್ಲಿ ಆ ಬೆಕ್ಕನ್ನು ಎಬ್ಬಿಸಲು ಅಲ್ಲಿದ್ದ ಮತದಾರರು ಪ್ರಯತ್ನಪಟ್ಟರೂ ಕೂಡ ಅದು ಕದಲದಿದ್ದಕ್ಕೆ ಅದರ ಪಾಡಿಗೆ ಅದನ್ನು ಬಿಟ್ಟರು. ಆ ಬಳಿಕ ಬೆಕ್ಕು ತನ್ನಷ್ಟಕ್ಕೆ ತಾನು ಕುಳಿತು ಆಟವಾಡ್ತಾ ಇತ್ತು.

First published: