News18 India World Cup 2019

ಜಿಲ್ಲಾಡಳಿತ ವಿರುದ್ದ ಮನೆಯಲ್ಲೇ ಪ್ರತಿಭಟನೆ ನಡೆಸುತ್ತಿರುವ ಪುರಸಭಾ ಸದಸ್ಯ

news18
Updated:June 8, 2018, 3:10 PM IST
ಜಿಲ್ಲಾಡಳಿತ ವಿರುದ್ದ ಮನೆಯಲ್ಲೇ ಪ್ರತಿಭಟನೆ ನಡೆಸುತ್ತಿರುವ ಪುರಸಭಾ ಸದಸ್ಯ
news18
Updated: June 8, 2018, 3:10 PM IST
- ಲೋಹಿತ್ ಶಿರೋಳ, ನ್ಯೂಸ್18 ಕನ್ನಡ

ಚಿಕ್ಕೊಡಿ ( ಜೂನ್. 08) :  ತನ್ನ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ ಎಂದು ಆರೋಪಿಸಿ ಬೆಳಗಾವಿ ಜಿಲ್ಲಾಡಳಿತದ ವಿರುದ್ದ ಪುರಸಭೆ  ಸದಸ್ಯನೋರ್ವ ಮಳೆಯನ್ನು ಲೆಕ್ಕಿಸಿದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಅಥಣಿ ಪಟ್ಟಣದ ವಾರ್ಡ ನಂಬರ್ 14 ರ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಬೀರಪ್ಪ ಯಂಕಂಚಿ ಅವರು ಧಾರಾಕಾರ ಮಳೆ ಸುರಿಯುತ್ತಿದ್ದರು, ಕೂಡ ಸುರಿಯುವ ಮಳೆ ಮತ್ತು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಎರಡೂ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಕ್ಷಣವೇ ನನ್ನ ವಾರ್ಡಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ಮುಖಂಡರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಮನವಿ ಮಾಡಿಕೊಂಡು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರೂ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಪಟ್ಟು ಹಿಡಿದು ಪುರಸಭೆ ಸದಸ್ಯ ಪ್ರತಿಭಟನೆ ಮುಂದುವರೆಸಿದ್ದಾರೆ

ಹಲವು ದಿನಗಳಿಂದ ನಮ್ಮ ವಾರ್ಡ್ ನಂಬರ್ 14ರಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ , ನಮ್ಮ ಸಾರ್ವಜನಿಕರು ತೊಂದರೆಯಾಗುತ್ತಿದ್ದು , ಇದೇ ತಿಂಗಳ ಬರುವ 20 ತಾರೀಖು ದಡ್ಡಿ ಸಿದ್ದೇಶ್ವರ ದೇವರ ಜಾತ್ರೆ ಇರುವ ಕಾರಣದಿಂದ , ತಕ್ಷಣ ಬೀದಿ ದೀಪ ಚರಂಡಿ ರಸ್ತೆ ಕಾಮಗಾರಿಗಳು ಪೂರ್ಣವಾಗುವ ತನಕ ಈ ಧರಣಿ ಹಿಂಪಡೆಯುವದಿಲ್ಲ ಎಂದು ಪುರಸಭೆ ಸದಸ್ಯ ಬೀರಪ್ಪ ತಿಳಿಸಿದ್ದಾರೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...