ನೆರೆ ಬಂತು, ಮನೆ- ಆಸ್ತಿ ಹೋಯ್ತು ಆದ್ರೆ, ಜಾತಿ ಮಾತ್ರ ಹೋಗಲಿಲ್ಲ; ಮೈಸೂರಿನಲ್ಲಿ ಜಾತಿಗೊಂದು ಪರಿಹಾರ ಕೇಂದ್ರ ತೆರೆದ ಜಿಲ್ಲಾಡಳಿತ!

ಪರಿಹಾರದಲ್ಲಿ ನಮಗೆ ಅರ್ಧ ಬೇಕು ಎಂದು ಹೇಳುವ ನಾಯಕ ಜನಾಂಗದವರು ನಮ್ಮ ಜೊತೆ ಸೇರುವುದಿಲ್ಲ, ನಮ್ಮ ನೆರಳನ್ನು ಕಂಡರೂ ದೂರ ಹೋಗ್ತಾರೆ, ದೇವಾಲಯ ಪ್ರವೇಶಕ್ಕೂ ಅಪಸ್ವರ ಎತ್ತುತ್ತಾರೆ ಎಂದು ಇಲ್ಲಿನ ಗ್ರಾಮದ ದಲಿತರು ನಾಯಕ ಜನಾಂಗದವರ ವರ್ತನೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

MAshok Kumar | news18
Updated:August 13, 2019, 5:21 PM IST
ನೆರೆ ಬಂತು, ಮನೆ- ಆಸ್ತಿ ಹೋಯ್ತು ಆದ್ರೆ, ಜಾತಿ ಮಾತ್ರ ಹೋಗಲಿಲ್ಲ; ಮೈಸೂರಿನಲ್ಲಿ ಜಾತಿಗೊಂದು ಪರಿಹಾರ ಕೇಂದ್ರ ತೆರೆದ ಜಿಲ್ಲಾಡಳಿತ!
ನಂಜನಗೂಡಿನ ಬೊಕ್ಕಳ್ಳಿಯಲ್ಲಿ ತೆರೆಯಲಾಗಿರುವ ಸಂತ್ರಸ್ತರ ಕೇಂದ್ರ.
  • News18
  • Last Updated: August 13, 2019, 5:21 PM IST
  • Share this:
ಮೈಸೂರು (ಆಗಸ್ಟ್.13); ತೀವ್ರ ಪ್ರವಾಹಕ್ಕೆ ಸಿಲುಕಿ ಇಡೀ ರಾಜ್ಯ ಇಂದು ತತ್ತರಿಸುತ್ತಿದೆ. ಜಾತಿಭೇದ ಮರೆತು ಜನರೆಲ್ಲಾ ಒಂದುಗೂಡಲು ಇಂತಹ ಪರಿಸ್ಥಿತಿಗಳು ನೆರವಾಗುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಾಭಿಪ್ರಾಯ ರೂಪುಗೊಳ್ಳುತ್ತಿರುವ ಇದೇ ದಿನಗಳಲ್ಲಿ ಮೈಸೂರಿನಲ್ಲಿ ಜಾತಿಗೊಂದು ಪರಿಹಾರ ಕೇಂದ್ರ ತೆರೆಯುವಂತಹ ದೈನೇಸಿ ಸ್ಥಿತಿ ಉಂಟಾಗಿದೆ. ಈ ಮೂಲಕ ಎಂತಹಾ ನೆರೆ ಬಂದರು ನಮ್ಮೊಳಗಿನ ಜಾತಿ ಎಂಬ ವಿಷ ಮಾತ್ರ ದೂರವಾಗಲಾರದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕಾವೇರಿ ಸೇರಿದಂತೆ ಉಪನದಿಗಳಾದ ಕಪಿಲ, ಹೇಮಾವತಿ ನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಸಾಮಾನ್ಯವಾಗಿ ಕಾವೇರಿ ತುಂಬಿ ಹರಿದಿತ್ತು. ಹೀಗಾಗಿ ಮಂಡ್ಯದಿಂದ ಚಾಮರಾಜ ನಗರದ ಕೊಳ್ಳೆಗಾಲದ ವರೆಗೆ ನದಿ ಪಾತ್ರದ ಅನೇಕ ಗ್ರಾಮಗಳು ಜಲಾವೃತವಾಗಿತ್ತು. ಹೀಗಾಗಿ ಈ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸಲಾಗಿತ್ತು.

ನಂಜನಗೂಡು ತಾಲೂಕಿನ ಬೊಕ್ಕಳ್ಳಿ ಗ್ರಾಮದ 90 ಮನೆಗೂ ಸಹ ಪ್ರವಾಹದ ನೀರು ನುಗ್ಗಿತ್ತು. ಹೀಗಾಗಿ ಅಲ್ಲಿನ 500ಕ್ಕೂ ಹೆಚ್ಚು ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಗ್ರಾಮದ ನಾಯಕ ಜನಾಂಗದವರು ನಾವು ದಲಿತರ ಜೊತೆ ಬರೆಯೋದಿಲ್ಲ ಎಂದು ವರಾತ ತೆಗೆದಿದ್ದಾರೆ. ಅಲ್ಲದೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಪರಿಹಾರ ಕೇಂದ್ರಕ್ಕೆ ನಾಯಕ ಜನಾಂಗದ ಯಾರೂ ಸಹ ಆಗಮಿಸಿಲ್ಲ.

ಹೀಗಾಗಿ ಜಿಲ್ಲಾಡಳಿತ ನಾಯಕ ಜನಾಂಗದವರಿಗೆಂದು ಪ್ರತ್ಯೇಕ ಸಂತ್ರಸ್ತ ಪರಹಾರ ಕೇಂದ್ರವನ್ನು ತೆರೆದಿದೆ. ಈ ಮೂಲಕ ಜಾತಿ ತಾರತಮ್ಯವನ್ನು ಹೋಗಲಾಡಿಸಬೇಕಾದ ಜಿಲ್ಲಾಡಳಿತವೇ ಅಸ್ಪೃಶ್ಯತೆಗೆ ಉತ್ತೇಜನ ನೀಡುತ್ತಿದೆ ಎಂದು ಜಿಲ್ಲೆಯ ಕೆಲ ಪ್ರಗತಿಪರರು ಅಪಸ್ವರ ಎತ್ತಿದ್ದಾರೆ.

ಇನ್ನೂ "ಪರಿಹಾರದಲ್ಲಿ ನಮಗೆ ಅರ್ಧ ಬೇಕು ಎಂದು ಹೇಳುವ ನಾಯಕ ಜನಾಂಗದವರು ನಮ್ಮ ಜೊತೆ ಸೇರುವುದಿಲ್ಲ, ನಮ್ಮ ನೆರಳನ್ನು ಕಂಡರೂ ದೂರ ಹೋಗ್ತಾರೆ, ದೇವಾಲಯ ಪ್ರವೇಶಕ್ಕೂ ಅಪಸ್ವರ ಎತ್ತುತ್ತಾರೆ" ಎಂದು ಇಲ್ಲಿನ ಗ್ರಾಮದ ದಲಿತರು ನಾಯಕ ಜನಾಂಗದವರ ವರ್ತನೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಡೀ ರಾಜ್ಯದಲ್ಲಿ ಒಂದೇ ಗ್ರಾಮಕ್ಕೆ ಜಾತಿ ಅನ್ವಯ ಎರಡೆರಡು ಪರಿಹಾರ ಕೇಂದ್ರಕ್ಕೆ ಸಾಕ್ಷಿಯಾದ ಕುಖ್ಯಾತಿಗೂ ಇದೀಗ ಮೈಸೂರು ಒಳಗಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕ್ಷೇತ್ರದಲ್ಲಿ ಈಗಲೂ ಅಸ್ಪೃಶ್ಯತೆ ಜೀವಂತವಾಗಿರುವ ಸುದ್ದಿ ಸಹ  ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

(ವರದಿ - ಪುಟ್ಟಪ್ಪ)
Loading...

ಇದನ್ನೂ ಓದಿ : ತುಂಗಭದ್ರೆಯಲ್ಲಿ ಪ್ರವಾಹ; ವಿಶ್ವ ಪ್ರಸಿದ್ಧ ಹಂಪಿ-ವಿರುಪಾಪೂರಗಡ್ಡಿಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಜನರ ರಕ್ಷಣೆ

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...