• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಜೋರು ಮಳೆಗೆ ಕೆಸರು ಗದ್ದೆಯಂತಾದ ಕೋಲಾರದ ಎಪಿಎಂಸಿ ಮಾರುಕಟ್ಟೆ - ಯಾವುದೇ ಮುಂಜಾಗೃತ ಕ್ರಮಕೈಗೊಳ್ಳದ ಜಿಲ್ಲಾಡಳಿತ

ಜೋರು ಮಳೆಗೆ ಕೆಸರು ಗದ್ದೆಯಂತಾದ ಕೋಲಾರದ ಎಪಿಎಂಸಿ ಮಾರುಕಟ್ಟೆ - ಯಾವುದೇ ಮುಂಜಾಗೃತ ಕ್ರಮಕೈಗೊಳ್ಳದ ಜಿಲ್ಲಾಡಳಿತ

ಕೋಲಾರ ಎಪಿಎಂಸಿ ಮಾರ್ಕೆಟ್​

ಕೋಲಾರ ಎಪಿಎಂಸಿ ಮಾರ್ಕೆಟ್​

ಕೋಲಾರ ಎಪಿಎಂಸಿ ಮಾರುಕಟ್ಟೆ ಒಟ್ಟು 21 ಎಕರೆ ಪ್ರದೇಶದಲ್ಲಿ ಇದೆ. ಇಲ್ಲಿ ನೂರಕ್ಕು ಹೆಚ್ಚು ಟೊಮೆಟೋ ಮಂಡಿಗಳಿವೆ. ತರಕಾರಿ ವಹಿವಾಟು ನಡೆಸುವ ಕಾರಣ ನಿತ್ಯವು ಇಲ್ಲಿ ಟ್ರಾಪಿಕ್ ಕಿರಿಕಿರಿ ಇದ್ದೇ ಇರುತ್ತೆ. ಇದರ ಜೊತೆಗೆ ಟೊಮೆಟೋ ಸೀಸನ್ ಆರಂಭವಾದರೆ ಸಂಚಾರದಟ್ಟಣೆ ಹೆಚ್ಚಿ ನಿಯಂತ್ರಣ ಸಾಧಿಸಲು ಹರಸಾಹಸ ಪಡಬೇಕಾಗುತ್ತದೆ.

ಮುಂದೆ ಓದಿ ...
 • Share this:

ಕೋಲಾರ(ಜೂ.27): ಕಳೆದ ಎರಡು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ಈಗಾಗಲೇ ಬಿತ್ತನೆ ಕಾರ್ಯ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮಧ್ಯೆ ಭಾರೀ ಮಳೆಗೆ ಕೋಲಾರದ ಎಪಿಎಂಸಿ ಮಾರುಕಟ್ಟೆ ರಸ್ತೆಗಳು ಕೆಸರು ಗದ್ದೆಯಂತಾಗಿದೆ. ಇದು ಗೊತ್ತಿದ್ದರೂ ಜಿಲ್ಲಾಡಳಿತ ಇನ್ನೂ ಯಾವುದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದೆ.


ಎರು ವರ್ಷದಿಂದಲೂ ಕೋಲಾರದ ಕೋಲ್ಡ್​ ಸ್ಟೋರೆಜ್​​​ ಕೇಂದ್ರದ ಬಳಿಯೇ ತರಕಾರಿ ಮಾರುಕಟ್ಟೆ ತೆರೆಯಲಾಗುತ್ತದೆ. ಇಲ್ಲಿ ಮಳೆಯಾದರೇ ಸಹಜವಾಗಿ ಮಾರುಕಟ್ಟೆ ಗದ್ದೆಯಂತಾಗುತ್ತದೆ. ಹೀಗಾದರೇ ವಾಹನ ಸವಾರರು ಸಂಚಾರ ಮಾಡಲಾಗದೇ ಪರದಾಡಬೇಕಾಗುತ್ತದೆ. ಹೀಗಿದ್ದರೂ ಜಿಲ್ಲಾಡಳಿತ ಮರುಕಟ್ಟೆಯಲ್ಲಿ ಮುಂಜಾಗೃತ ಕ್ರಮವಾಗಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಮಾಡದೇ ಸುಮ್ಮನೇ ಕೂತಿದೆ.


ಇನ್ನು, ಕಾಲ್ನಡಿಗೆ ಮೂಲಕ ಮಾರುಕಟ್ಟೆಗೆ ಆಗಮಿಸುವ ಜನರಂತೂ ಭಾರೀ ಆತಂಕದಲ್ಲಿದ್ದಾರೆ. ಮಳೆಯಾದಗ ಒಂದೆಜ್ಜೆ ಮುಂದಿಟ್ಟರೇ ಏನು ಅನಾಹುತ ಆಗಲಿದೆಯೋ ಎಂದು ಭೀತಿ ಶುರುವಾಗಿದೆ.


ಕೋಲಾರದ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ಮಂಡಿಗಳಿವೆ. ಇಲ್ಲಿಗೆ ಪಕ್ಕದ ಜಿಲ್ಲೆ ಚಿಕ್ಕಬಳ್ಳಾಪುರದಿಂದಲೂ ನಿತ್ಯ ವಿವಿಧ ತರಕಾರಿಗಳನ್ನು ಸಣ್ಣಪುಟ್ಟ ವಾಹನಗಳಿಂದ ತರಲಾಗುತ್ತಿದೆ. ಮಧ್ಯಾಹ್ನದ ವೇಳೆ ತರಕಾರಿ ಹರಾಜು ಪ್ರಕ್ರಿಯೆ ಮುಗಿಯಲಿದೆ. ಬಳಿಕ ಖರೀದಿದಾರರು ದೊಡ್ಡದೊಡ್ಡ ವಾಹನಗಳಲ್ಲಿ ತರಕಾರಿಯನ್ನ ಸಾಗಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಹಿವಾಟು ನಡೆದು ಸರ್ಕಾರಕ್ಕೆ ಭಾರೀ ತೆರಿಗೆ ಕಟ್ಟಲಾಗುತ್ತದೆ.


ಇಷ್ಟೆಲ್ಲಾ ತೆರಿಗೆ ಸರ್ಕಾರಕ್ಕೆ ಹೋದರೂ ಮಾರುಕಟ್ಟೆ ಸುತ್ತಮುತ್ತಲಿನ ಮಣ್ಣಿನ ರಸ್ತೆಗಳು ಇನ್ನೂ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಎರಡು ವರ್ಷಗಳಿಂದ ತರಕಾರಿ ಮಂಡಿಗಳು ತಾತ್ಕಾಲಿಕ‌ ಟೆಂಟುಗಳಲ್ಲಿಯೇ ಇವೆ. ರೈತರು ತರಕಾರಿ ತಂದರೂ ಬರೀ ಮಣ್ಣಿನ ನೆಲದ ಮೇಲೆಯೆ ಇಡುವ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ಮಾರುಕಟ್ಟೆ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ನಷ್ಟ ರೈತರಿಗೆ ಬಿಟ್ಟರೆ ಮತ್ಯಾರಿಗು ಅಲ್ಲ.


ಇದನ್ನೂ ಓದಿ: ಟೊಮೊಟೋ ಸೀಸನ್​ ಆರಂಭ: ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಜನವೋ ಜನ


ಕೋಲಾರ ಎಪಿಎಂಸಿ ಮಾರುಕಟ್ಟೆ ಒಟ್ಟು 21 ಎಕರೆ ಪ್ರದೇಶದಲ್ಲಿ ಇದೆ. ಇಲ್ಲಿ ನೂರಕ್ಕು ಹೆಚ್ಚು ಟೊಮೆಟೋ ಮಂಡಿಗಳಿವೆ. ತರಕಾರಿ ವಹಿವಾಟು ನಡೆಸುವ ಕಾರಣ ನಿತ್ಯವು ಇಲ್ಲಿ ಟ್ರಾಪಿಕ್ ಕಿರಿಕಿರಿ ಇದ್ದೇ ಇರುತ್ತೆ. ಇದರ ಜೊತೆಗೆ ಟೊಮೆಟೋ ಸೀಸನ್ ಆರಂಭವಾದರೆ ಸಂಚಾರದಟ್ಟಣೆ ಹೆಚ್ಚಿ ನಿಯಂತ್ರಣ ಸಾಧಿಸಲು ಹರಸಾಹಸ ಪಡಬೇಕಾಗುತ್ತದೆ.


ಇನ್ನು, ಪ್ರತಿವರ್ಷ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಟೊಮೊಟೋ ಸೀಸನ್ ಆರಂಭವಾಗುತ್ತೆ. ಅಂದರೆ, ಕೋಲಾರ ಜಿಲ್ಲೆಯ ಬಹುತೇಕ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೊಟೋ ಬೆಳೆದು ಕಟಾವು ಮಾಡಿ ಮಾರುಕಟ್ಟೆಗೆ ತರುವ ಸಮಯ ಈ ಮೂರು ತಿಂಗಳಾಗಿರುತ್ತದೆ.

top videos


  ಮಾರುಕಟ್ಟೆಗೆ ಬರುವ ಟೊಮೆಟೋ ಪ್ರಮಾಣ ಹೆಚ್ಚುತ್ತಿದೆ. ವಹಿವಾಟು ಸುಲಭವಾಗಿ ನಡೆಸಲು ಹೆಚ್ಚಿನ ಸ್ಥಳಾವಕಾಶ ನೀಡುವಂತೆ ಅನುಮತಿ ಕೋರಿ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕು ಮನವಿ ನೀಡಲಾಗಿದೆ. ಕೋಲಾರ ತಾಲೂಕಿನ ಚೆಲುವನಹಳ್ಳಿ ಬಳಿಯ ಅರಣ್ಯ ಇಲಾಖೆ ವ್ಯಾಪ್ತಿಯ 30 ಎಕರೆ ಜಾಗ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಕಾರಣ ಜಾಗವನ್ನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿಲಾಗಿದೆ.

  First published: