• Home
 • »
 • News
 • »
 • state
 • »
 • Hassan: ಪೊಲೀಸರ ಸರ್ಪಗಾವಲಿನಲ್ಲಿ ಸಂಗೊಳ್ಳಿ ರಾಯಣ್ಣ ಚೌಕಿ ತೆರವು ಕಾರ್ಯಾಚರಣೆ

Hassan: ಪೊಲೀಸರ ಸರ್ಪಗಾವಲಿನಲ್ಲಿ ಸಂಗೊಳ್ಳಿ ರಾಯಣ್ಣ ಚೌಕಿ ತೆರವು ಕಾರ್ಯಾಚರಣೆ

ಸಂಗೊಳ್ಳಿ ರಾಯಣ್ಣ ಚೌಕಿ

ಸಂಗೊಳ್ಳಿ ರಾಯಣ್ಣ ಚೌಕಿ

ಇಂದು ಬೆಳಗ್ಗೆ ಶ್ರವಣೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ನೂರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

 • News18 Kannada
 • 3-MIN READ
 • Last Updated :
 • Hassan, India
 • Share this:

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು (Shravanuru, Hole narasipura) ಗ್ರಾಮದಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿರುವ ಸಂಗೊಳ್ಳಿ ರಾಯಣ್ಣ ಚೌಕಿ (Sangolli Rayanna Chowki) ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ತೆರವು ಕಾರ್ಯಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ (Police deployed) ಮಾಡಲಾಗಿದೆ. ಕಳೆದ 13 ದಿನಗಳ ಹಿಂದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚೌಕಿ ನಿರ್ಮಾಣ ಮಾಡಲಾಗಿತ್ತು. ರಸ್ತೆ ಸಂಚಾರಕ್ಕೆ ಧಕ್ಕೆಯಾಗಲಿದೆ ಅನ್ನೋ ಕಾರಣ ನೀಡಿ ರಾಯಣ್ಣ ಚೌಕಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳ ನಡೆ ವಿರುದ್ಧ ಸ್ಥಳೀಯರು (Villagers) ಆಕ್ರೋಶ ಹೊರ ಹಾಕಿದ್ದಾರೆ. ತೆರವು ಕಾರ್ಯಾಚರಣೆ ಹಿನ್ನೆಲೆ ಶ್ರವಣೂರು ಗ್ರಾಮದ ಬೀದಿ ಬೀದಿಗಳಲ್ಲಿ ಪೊಲೀಸರು ಕಾಣಿಸುತ್ತಿದ್ದಾರೆ. ಚೌಕಿ ನಿರ್ಮಾಣಗೊಂಡಿರುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


ಸಂಗೊಳ್ಳಿ ರಾಯಣ್ಣ ಚೌಕಿ ತೆರವು ಸಂಬಂಧ ಹೊಳೆನರಸೀಪುರ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಆದರೂ ತೆರವು ಕಾರ್ಯಕ್ಕೆ ಗ್ರಾಮಸ್ಥರು ಒಪ್ಪಿರಲಿಲ್ಲ.


ತೆರವು ಯಾಕೆ?


ಇದೀಗ ಗ್ರಾಮಸ್ಥರ ವಿರೋಧದ ನಡುವೆ ಪೊಲೀಸರು ಸರ್ಪಗಾವಲಿನಲ್ಲಿ ಚೌಕಿನ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ರಸ್ತೆಯಲ್ಲಿ ಚೌಕಿ ನಿರ್ಮಾಣದಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂಬುವುದು ಜಿಲ್ಲಾಡಳಿತದ ವಾದವಾಗಿದೆ.


ಇಂದು ಬೆಳಗ್ಗೆ ಶ್ರವಣೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ನೂರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.


district administration clerance sangolli rayanna chowoki in shravanuru hassan mrq
ಸಂಗೊಳ್ಳಿ ರಾಯಣ್ಣ ಚೌಕಿ


ಗ್ರಾಮದಲ್ಲಿ 400ಕ್ಕೂ ಅಧಿಕ ಪೊಲೀಸರ ನಿಯೋಜನೆ


ಪ್ರಾಣ ಬಿಟ್ಟೆವು ಚೌಕಿ ತೆರವು ಮಾಡಲು ಬಿಡಲ್ಲ ಎಂದು ಸ್ಥಳೀಯರು ಎಚ್ಚರಿಕೆ ನೀಡಿರುವ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳಿವೆ. ಸ್ಥಳದಲ್ಲಿ 400ಕ್ಕೂ ಹೆಚ್ಚು ಪೊಲೀಸರು ಡಿಎಆರ್ ನಾಲ್ಕು ತುಕಡಿ, ಇಬ್ಬರು ಡಿವೈಎಸ್​ಪಿ, 10 ಸರ್ಕಲ್ ಇನ್​ಸ್ಪೆಕ್ಟರ್​, 20 ಪಿಎಸ್​ಐ ನೇತೃತ್ವದಲ್ಲಿ ತೆರವು ಕಾರ್ಯ ಮಾಡಲಾಗುತ್ತಿದೆ.


ಗ್ರಾಮಕ್ಕೆ ಪೊಲೀಸರ ಸರ್ಪಗಾವಲು


ಮುಂಜಾನೆಯೆ ಗ್ರಾಮದಲ್ಲಿ ನೂರಾರು ಪೊಲೀಸರು ಜಮಾವಣೆಗೊಂಡಿದ್ದು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಬ್ಯಾರಿಕೇಡ್ ಹಾಕಿ‌ ಭದ್ರತೆ ಹಾಕಲಾಗಿದೆ. ಇತ್ತ ಶ್ರವಣೂರಿಗೆ ಯಾರೂ ಬರದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನಿರ್ಬಂಧ ಸಹ ವಿಧಿಸಲಾಗಿದೆ.


ಮತ್ತೊಂದು ಸಮುದಾಯದಿಂದ ವಿರೋಧ


ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡುವ ನಿರ್ಧಾರದೊಂದಿಗೆ ವೃತ್ತ ನಿರ್ಮಾಣ ಮಾಡಲಾಗಿತ್ತು. ಸದ್ಯ ಒಂದು ಫೋಟೋ ಮಾತ್ರ ಹಾಕಲಾಗಿದೆ. ಆದ್ರೆ ಇದೇ ಜಾಗದಲ್ಲಿ ಬೇರೆ ನಾಯಕರ ಪ್ರತಿಮೆ ಸ್ಥಾಪನೆಗೆ ಅನುಮತಿ ಕೋರಿ ಬೇರೊಂದು ಸಮುದಾಯ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್​​ಗೆ ಮನವಿ ಸಲ್ಲಿಸಿದೆ.


district administration clerance sangolli rayanna chowoki in shravanuru hassan mrq
ಸಂಗೊಳ್ಳಿ ರಾಯಣ್ಣ ಚೌಕಿ


ಅನುಮತಿ ಪಡೆಯದೇ ಚೌಕಿ ನಿರ್ಮಿಸಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.


ಇದನ್ನೂ ಓದಿ: Hassan: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ; ಸಾರ್ವಜನಿಕರಿಂದ ಬಿತ್ತು ಧರ್ಮದೇಟು


ತೆರವು ಕಾರ್ಯಾಚರಣೆ ಹಿನ್ನೆಲೆ  ಶ್ರವಣೂರು ಗ್ರಾಮ ಸ್ತಬ್ಧವಾಗಿದೆ. ಬಹುತೇಕ ಗ್ರಾಮಸ್ಥರು ಮನೆಯಿಂದ ಹೊರ ಬಂದಿಲ್ಲ.


ಸೌಭಾಗ್ಯಗೆ ನ್ಯಾಯಾಂಗ ಬಂಧನ


ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧದ ಪಿತೂರಿ ಪ್ರಕರಣದಲ್ಲಿ ಸೌಭಾಗ್ಯ ಬಸವರಾಜನ್‌ಗೆ ನ್ಯಾಯಾಂಗ ಬಂಧನವಾಗಿದೆ. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಪತ್ನಿ ಸೌಭಾಗ್ಯ ಅವರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದರು.


ಸೌಭಾಗ್ಯರನ್ನು 1 ದಿನ ವಿಚಾರಣೆ ಬಳಿಕ ಪೊಲೀಸರು ಚಿತ್ರದುರ್ಗ 1ನೇ JMFC ಕೋರ್ಟ್‌ ಹಾಜರು ಪಡಿಸಿದ್ರು. ನ್ಯಾಯಾಲಯ ಡಿಸೆಂಬರ್‌ 26ರ ವರೆಗೆ ಸೌಭಾಗ್ಯ ಬಸವರಾಜನ್‌ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ

Published by:Mahmadrafik K
First published: