HOME » NEWS » State » DISTRIBUTION OF RATION IN APRIL AND MAY ONE MONTH IN ADVANCE SAYS MINISTER GOPALAIAH HK

ಒಂದು ತಿಂಗಳ ಮುಂಚಿತವಾಗಿ ಏಪ್ರಿಲ್, ಮೇ ತಿಂಗಳ ರೇಷನ್​​​​​ ವಿತರಣೆ: ಸಚಿವ ಗೋಪಾಲಯ್ಯ

ಬಿಪಿಎಲ್ ಕಾರ್ಡ್ ನವರಿಗೆ 10 ಕೆ ಜಿ ಅಕ್ಕಿ‌ ಮತ್ತು 4 ಕೆಜಿ ಗೋಧಿ, ಅಂತ್ಯೋದಯ ಕಾರ್ಡ್ ನವರಿಗೆ 70 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು.

news18-kannada
Updated:March 21, 2020, 6:40 PM IST
ಒಂದು ತಿಂಗಳ ಮುಂಚಿತವಾಗಿ ಏಪ್ರಿಲ್, ಮೇ ತಿಂಗಳ ರೇಷನ್​​​​​ ವಿತರಣೆ: ಸಚಿವ ಗೋಪಾಲಯ್ಯ
ಸಚಿವ ಕೆ. ಗೋಪಾಲಯ್ಯ.
  • Share this:
ಬೆಂಗಳೂರು(ಮಾ.21) : ಏಪ್ರಿಲ್ ಮತ್ತು ಮೇ ಎರಡು ತಿಂಗಳ ಆಹಾರ ಪಡಿತರವನ್ನು ಏಪ್ರಿಲ್​ನಲ್ಲೇ ಕೊಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆ ಒಂದು ತಿಂಗಳ ಮುಂಚಿತವಾಗಿ ರೇಷನ್​​ ನೀಡುತ್ತಿದ್ದೇವೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆ ಸಚಿವ ಕೆ ಗೋಪಾಲಯ್ಯ ಹೇಳಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದ ಅವರು, ಬಿಪಿಎಲ್ ಕಾರ್ಡ್ ನವರಿಗೆ 10 ಕೆ ಜಿ ಅಕ್ಕಿ‌ ಮತ್ತು 4 ಕೆಜಿ ಗೋಧಿ, ಅಂತ್ಯೋದಯ ಕಾರ್ಡ್ ನವರಿಗೆ 70 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ರೇಷನ್ ಅಂಗಡಿ ತೆಗೆದು, ಆಹಾರ ಧಾನ್ಯ ವಿತರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಜನ ಸಂದಣಿ ಸೇರದ ರೀತಿಯಲ್ಲಿ ಕ್ರಮ ವಹಿಸಿ ಆಹಾರ ಧಾನ್ಯ ವಿತರಣೆ ಮಾಡಲು ಕ್ರಮ ವಹಿಸಬೇಕು. ದಿನಕ್ಕೆ ಇಷ್ಟು ಜನರಿಗೆ ಕೊಡಬೇಕು. ಜನರ ಮಧ್ಯೆ ಇಂತಿಷ್ಟು ಅಂತರ ಇರಬೇಕು ಎಂಬ ನಿಯಮ ಇದೆ. ರೇಷನ್ ಅಂಗಡಿಗಳಲ್ಲಿ ಈ ನಿಯಮ ಜಾರಿ ಮಾಡಿ ಆಹಾರ ಧಾನ್ಯ ವಿತರಣೆ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಕೊರೋನಾ ಸೋಂಕು ಇಲ್ಲದಿದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುವುದು ; ವಿ ಸೋಮಣ್ಣ

ಎಪಿಎಂಸಿ ಬಂದ್ ಮಾಡುವ ವಿಚಾರ, ಇಂದು ಸಂಜೆ 7 ಗಂಟೆಯಿಂದ ಎಪಿಎಂಸಿ ಸ್ವಚ್ಛ​​​ ಮಾಡುವಂತೆ  ವರ್ತಕರು ಒಂದು ಮನವಿ ಕೊಟ್ಟಿದ್ದಾರೆ. ಮಹಾರಾಷ್ಟ್ರದಿಂದ ಈರುಳ್ಳಿ , ಆಲೂಗಡ್ಡೆ ಬರುತ್ತಿದೆ. ಅಪಾಯ ಎನ್ನುವ ಭಾವನೆ ವರ್ತಕರದ್ದಾಗಿದೆ. ಈ ಬಗ್ಗೆ ಬುಧವಾರ ದಿಂದ ಮುಚ್ಚಬೇಕು ಅಂತ ಮನವಿ ಮಾಡಿದ್ದರು. ಈಗ ಮಾರ್ಚ್​ 31 ರವರೆಗೆ ಮುಚ್ಚುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸರ್ಕಾರ ಎಪಿಎಂಸಿ ಮುಚ್ಚುವ ಬಗ್ಗೆ ಇನ್ನೂ ಯಾವುದೇ ಭರವಸೆ ನೀಡಿಲ್ಲ ಎಂದು ಸಚಿವ ಕೆ ಗೋಪಾಲಯ್ಯ ಸ್ಪಷ್ಟನೆ ನೀಡಿದರು.
Youtube Video
First published: March 21, 2020, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories