• Home
  • »
  • News
  • »
  • state
  • »
  • Belagavi ಕಾಂಗ್ರೆಸ್​ನಲ್ಲಿ ಜಾರಕಿಹೊಳಿ v/s ಸೇಠ್ ಬಣ ರಾಜಕೀಯ! 

Belagavi ಕಾಂಗ್ರೆಸ್​ನಲ್ಲಿ ಜಾರಕಿಹೊಳಿ v/s ಸೇಠ್ ಬಣ ರಾಜಕೀಯ! 

ಫಿರೋಜ್ ಸೇಠ್, ಸತೀಶ್​ ಜಾರಕಿಹೊಳಿ

ಫಿರೋಜ್ ಸೇಠ್, ಸತೀಶ್​ ಜಾರಕಿಹೊಳಿ

ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್ ಮಧ್ಯೆ ಭಿನ್ನಮತ ಈಗ ಬಹಿರಂಗವಾಗುತ್ತಿದೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷ ಸಂಘಟನೆ ಕಾರ್ಯಕ್ಕೆ ಸೇಠ್ ಬ್ರದರ್ಸ್ ಗೆ ಆಹ್ವಾನಿಸುತ್ತಿಲ್ಲ. ಜೊತೆಗೆ ಕಾಂಗ್ರೆಸ್ ಪಕ್ಷದ ಬ್ಯಾನರ್ ಗಳಲ್ಲೂ ಅವರ ಭಾವಚಿತ್ರ ಮಾಯವಾಗಿದೆ

  • Share this:

ಬೆಳಗಾವಿ (ಜು.24): ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ (Belagavi District Youth Congress) ಈಗ ಎಲ್ಲವೂ ಸರಿಯಲ್ಲ,  ಮನೆಯೊಂದು ಮೂರು ಬಾಗಿಲು ಆಗಿದೆ. ಕಿತ್ತೂರು ಆಯ್ತು ಈಗ ಬೆಳಗಾವಿ ಮಹಾನಗರದಲ್ಲೂ ಭಿನ್ನಮತ ಬಹಿರಂಗ ಆಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi,) VS ಸೇಠ್ ಬ್ರದರ್ಸ್ ಕೋಲ್ಡ್ ವಾರ್ (Cold War) ಮುಂದುರೆದಿದೆ. ಇದು ಕಾಂಗ್ರೆಸ್ ಮಹಾನಗರ ಘಟಕದಲ್ಲಿ ‌ಸಂಚಲನ‌ ಮೂಡಿಸಿದ್ದು, ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂಬುದು‌ ಕಾದು ನೋಡಬೇಕು.


ಕರ್ನಾಟಕ ವಿಧಾನ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ಪಕ್ಷಗಳು ಈಗಿಂದಲೇ ಸಿದ್ಧತೆ ಆರಂಭಿಸಿವೆ. ಹಾಗೇ ಬೆಳಗಾವಿ ಜಿಲ್ಲೆ ಕಾಂಗ್ರೆಸ್ ನಲ್ಲೂ ಬಿಜೆಪಿ ಪಕ್ಷದಂತೆ ಬಣ ರಾಜಕಾರಣ, ಭಿನ್ನಮತದ ಹೊಗೆ ದಟ್ಟವಾಗಿ ಆವರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮ್ಮುಖದಲ್ಲಿ ಕಿತ್ತೂರು ಕಾಂಗ್ರೆಸ್ ಭಿನ್ನಮತ ಬಹಿರಂಗ ವಾಗಿತ್ತು. ಈಗ ಬೆಳಗಾವಿ ಮಹಾನಗರ ಕಾಂಗ್ರೆಸ್ ನಲ್ಲಿ ಭಿನ್ನಮತ ಬಹಿರಂಗ ಗೊಂಡಿದೆ. ನಿನ್ನೆಯಷ್ಟೇ ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಚಿಂತನ ಸಭೆ ನಡೆಸಲಾಯಿತು.


ಜಾರಕಿಹೊಳಿ VS ಸೇಠ್ ಬಣ ರಾಜಕೀಯ! 


ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಗೆ ಮಾಜಿ ಶಾಸಕ ಫಿರೋಜ್ ಸೇಠ್ ಹಾಗೂ ಬೆಳಗಾವಿ ಮಹಾನಗರ ಘಟಕದ ಅಧ್ಯಕ್ಷ ರಾಜು ಸೇಠ್ ಅವರನ್ನೇ ಆಹ್ವಾನಿಸಿರಲಿಲ್ಲ. ಅಲ್ಲದೆ ಸೇಠ್ ಬ್ರದರ್ಸ್ ಸಹ ಈ ಕಾಂಗ್ರೆಸ್ ಅಲ್ಪಸಂಖ್ಯಾತ ಸಭೆಯಿಂದಲೂ ಅಂತರವನ್ನ ಕಾಯ್ದು ಕೊಂಡಿದ್ದರು. ಈ ಭಿನ್ನಮತಕ್ಕೆ ಫಿರೋಜ್ ಸೇಠ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯದ ಕೋಲ್ಡ್ ವಾರ್ ಕಾರಣ.


ಇದನ್ನೂ ಓದಿ: Chikkamagaluru: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಹೊಡೆದಾಟ


ಇದೇ ಕಾರಣಕ್ಕೆ ಸತೀಶ್ ಜಾರಕಿಹೊಳಿ ತಮ್ಮ ಬೆಂಬಲಿಗರನ್ನ ಇಟ್ಟುಕೊಂಡು ಪಕ್ಷ ಸಂಘಟನೆ ಆರಂಭಿಸಿದ್ದಾರೆ. ಎಲ್ಲಿ ಪಕ್ಷ ವೀಕ್ ಇದೇ, ಮಾಜಿ ಶಾಸಕರು ಇಲ್ಲದೇ ಇರೋ ಮತಕ್ಷೇತ್ರದಲ್ಲಿ ನಾನೇ ಸಂಘಟನೆ ಮಾಡುತ್ತಿರುವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸೇಠ್ ಬ್ರದರ್ಸ್ ಗೆ ಕಾರ್ಯಕ್ಕೆ ಆಹ್ವಾನ ನೀಡಲಾಗಿದೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


ಭಿನ್ನಮತ ಈಗ ಬಹಿರಂಗ


ಕಿತ್ತೂರು ಕಾಂಗ್ರೆಸ್ ನಂತೆಯೇ ಬೆಳಗಾವಿ ಮಹಾನಗರದಲ್ಲಿ ಎಲ್ಲವೂ ಸರಿಯಿಲ್ಲ. ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್ ಮಧ್ಯೆ ಭಿನ್ನಮತ ಈಗ ಬಹಿರಂಗವಾಗುತ್ತಿದೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷ ಸಂಘಟನೆ ಕಾರ್ಯಕ್ಕೆ ಸೇಠ್ ಬ್ರದರ್ಸ್ ಗೆ ಆಹ್ವಾನಿಸುತ್ತಿಲ್ಲ. ಜೊತೆಗೆ ಕಾಂಗ್ರೆಸ್ ಪಕ್ಷದ ಬ್ಯಾನರ್ ಗಳಲ್ಲೂ ಅವರ ಭಾವಚಿತ್ರ ಮಾಯವಾಗಿದೆ. ಹಾಗೇ ನೋಡಿದ್ರೆ ರಾಜು ಸೇಠ್ ಕಾಂಗ್ರೆಸ್ ಮಹಾನಗರ ಘಟಕದ ಅಧ್ಯೆ. ಶಿಷ್ಟಾಚಾರದ ಪ್ರಕಾರ ರಾಜು ಸೇಠ್ ಗೆ ಪ್ರತಿಯೊಂದು ಸಭೆ, ಸಮಾರಂಭಕ್ಕೆ ಆಹ್ವಾನಿಸಬೇಕು, ಪಕ್ಷದ ಬ್ಯಾನರ್ ಗಳಲ್ಲಿ ಅವರ ಭಾವಚಿತ್ರವನ್ನ ಹಾಕಲೇಬೇಕು.


ಇದನ್ನೂ ಓದಿ: Basavaraj Bommai: ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ


ಗುದ್ದಾಟಕ್ಕೆ ಬೀಳುತ್ತಾ ಬ್ರೇಕ್​


ಈಗ ಉತ್ತರ ಸಭೆಗೂ ಇಲ್ಲ, ದಕ್ಷಿಣ ಸಭೆಗೂ ಸೇಠ್ ಬ್ರದರ್ಸ್ ಗೈರು ಹಾಜರಾತಿ ಎದ್ದು ಕಾಣುತ್ತಿದೆ. ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ.‌ಮಹಾನಗರ ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಮತ್ತು ಫಿರೋಜ್ ಸೇಠ್ ಮಧ್ಯೆದ ಗುದ್ದಾಟ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪಕ್ಷದ ಹಿರಿಯ ನಾಯಕರು ಹೇಗೆ ಬ್ರೇಕ್ ಹಾಕಲಿದ್ದಾರೆ ಎಂದು ಕಾದು ನೋಡಬೇಕು.

Published by:Pavana HS
First published: