Melukote: ಚೆಲುವನಾರಾಯಣನ ಆಭರಣವನ್ನು ದಾರಿ ಮಧ್ಯೆ ತಡೆದಿದ್ದು ಯಾರು? ವೈರಮುಡಿ ಉತ್ಸವಕ್ಕೆ ಆರಂಭದಲ್ಲೇ ವಿಘ್ನ!

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಿಂತುಹೋಗಿದ್ದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವಿಶ್ವಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವ ಇಂದು ನಡೆಯಲಿದೆ. ಆದರೆ ಈ ಮಹೋತ್ಸವಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾದ ಘಟನೆ ಸಹ ನಡೆದಿದೆ.

ವೈರಮುಡಿ ಉತ್ಸವದ ಸಂಗ್ರಹ ಚಿತ್ರ

ವೈರಮುಡಿ ಉತ್ಸವದ ಸಂಗ್ರಹ ಚಿತ್ರ

  • Share this:
ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಯ (Melukote) ಚೆಲುವನಾರಾಯಣ ಸ್ವಾಮಿಯ (Cheluva Narayana Swamy) ಸನ್ನಿಧಿಯಲ್ಲಿ ಸಂಭ್ರಮ ಕಳೆಗಟ್ಟಿದೆ. ಶ್ರೀ ಚೆಲುವರಾಯನಿಗೆ ವೈರಮುಡಿ ಉತ್ಸವ (Vairamudi Utsava) ಇಂದು ನಡೆಯಲಿದೆ. ಕೊರೋನಾ (Corona) ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಿಂತುಹೋಗಿದ್ದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವಿಶ್ವಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವಕ್ಕೆ (Brahmotsva) ಕಳೆದ ವಾರ ತೆಪ್ಪೋತ್ಸವದ ಮೂಲಕ ಚಾಲನೆ ನೀಡಲಾಗಿತ್ತು. ವೈರಮುಡಿ ಉತ್ಸವದ ಅಂಗವಾಗಿ ಕಳೆದ ಭಾನುವಾರ ರಾತ್ರಿ ಮೇಲುಕೋಟೆ ಕಲ್ಯಾಣಿಯಲ್ಲಿ ಚೆಲುವನಾರಾಯಣ ಸ್ವಾಮಿಗೆ ವಿಜೃಂಭಣೆಯಿಂದ ತೆಪ್ಪೋತ್ಸವ ನೆರವೇರಿತ್ತು. ಇಂದು ರಾತ್ರಿ ವೈರಮುಡಿ ಉತ್ಸವ ನಡೆಯಲಿದೆ. ಆದರೆ ಈ ಮಹೋತ್ಸವಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾದ ಘಟನೆ ಸಹ ನಡೆದಿದೆ.

ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಆರಂಭದಲ್ಲೇ ವಿಘ್ನ

ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವಕ್ಕೆ ಆರಂಭದಲ್ಲೇ ಕೊಂಚ ವಿಘ್ನ ಎದುರಾದ ಘಟನೆ ನಡೆದಿದೆ. ಸ್ಥಾನೀಕರ ವೈಯಕ್ತಿಕ ಪ್ರತಿಷ್ಠೆಗೆ ವೈರಮುಡಿ ಉತ್ಸವ ಬಡವಾಗಿದೆ. ಮೇಲುಕೋಟೆಯಲ್ಲಿ ನಾಲ್ಕನೇ ಸ್ಥಾನೀಕರು ಚೆಲುವನಾರಾಯಣನ ಆಭರಣಗಳಿದ್ದ ವಾಹನಕ್ಕೆ ತಡೆ ಒಡ್ಡಿದ್ದಾರೆ.

ಮೇಲುಕೋಟೆಗೆ ಆಭರಣ ತಲುಪಲು ವಿಳಂಬ

ಮಂಡ್ಯದಿಂದ ಬೆಳಗ್ಗೆ 7 ಗಂಟೆಗೆ ತೆರಳಬೇಕಿದ್ದ ವೈರಮುಡಿ ಆಭರಣಗಳು 8 ಗಂಟೆಯಾದರು ಮಂಡ್ಯಕ್ಕೆ ಬರಲೇ ಇಲ್ಲ. ಯಾಕೆಂದ್ರೆ ಮೇಲುಕೋಟೆಯಲ್ಲೇ ವಾಹನಕ್ಕೆ 4ನೇ ಸ್ಥಾನೀಕರು ಅಡ್ಡಿ ಪಡಿಸಿದ್ರು. ವೈರಮುಡಿ ಆಭರಣ ಕೊಂಡೊಯ್ಯಲು ಬಿಡದೇ ವಾಹನಕ್ಕೆ ಅಡ್ಡಿ ಮಾಡಿದ್ರು. ಇತ್ತ ವಾಹನ ಬಾರದೇ ಭಕ್ತರೆಲ್ಲ ಕಾದು ಕುಳಿತಿದ್ದರು.

ಇದನ್ನೂ ಓದಿ: Modi: ನರೇಂದ್ರ ಮೋದಿಯವರ ತಾಯಿಯ ತೂಕದಷ್ಟು ಚಿನ್ನದಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ಅಲಂಕಾರ!

ವೈರಮುಡಿ ಕೊಂಡೊಯ್ಯಲು ಅವಕಾಶ ನೀಡುವಂತೆ ಪಟ್ಟು

ವೈರಮುಡಿ ಕೊಂಡೊಯ್ಯಲು ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನಿಕರ ಕುಟುಂಬದಿಂದ ಪಟ್ಟು ಹಿಡಿದಿದ್ದರು. 1ನೇ ಸ್ಥಾನಿಕರು ಪ್ರತಿವರ್ಷ ವೈರಮುಡಿ ತರುವ ಉಸ್ತುವಾರಿ ವಹಿಸ್ತಿದ್ದರು. ಆದರೆ ಕಳೆದ ಬಾರಿ ಕೋರ್ಟ್ ನಮ್ಮ ಪರ ಆದೇಶ ಮಾಡಿತ್ತು.  ಕೋರ್ಟ್ ಆದೇಶದಂತೆ ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನಿಕರ ಕುಟುಂಬಸ್ಥರು ಪಟ್ಟು ಹಿಡಿದ್ರು.

ಕೊನೆಗೂ ಹೊರಟ ಆಭರಣ ಹೊತ್ತೊಯ್ದ ವಾಹನ

ಬಳಿಕ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಮನವೊಲಿಕೆಗೆ ಮುಂದಾದ್ರು. ಸಾಕಷ್ಟು ಮನವಿ ಮಾಡಿದ್ರೂ ಪ್ರತಿಭಟನಾನಿರತರು ಸ್ಪಂದಿಸಿಲ್ಲ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ, ಪ್ರತಿಭಟನಾ ನಿರತ ಸ್ಥಾನೀಕರನ್ನು ಸೈಡಿಗೆ ತಳ್ಳಿ, ಆಭರಣ ಹೊತ್ತ ವಾಹನ ಹೋಗಲು ಅವಕಾಶ ನೀಡಿದ್ರು.

ಇಂದು ನಡೆಯಲಿದೆ ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವ

ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಮೇಲುಕೋಟೆಯಲ್ಲಿ ಇಂದು ಅದ್ದೂರಿ ವೈರಮುಡಿ ಬ್ರಹ್ಮೋತ್ಸವ ಜರುಗಲಿದೆ. ರಾತ್ರಿ 8 ಗಂಟೆಯೊತ್ತಿಗೆ ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿದ ಗರುಢಾರೂಢನಾದ ಚಲುವನಾರಾಯಣಸ್ವಾಮಿ ಭಕ್ತರಿಗೆ ದರುಶನ ನೀಡಲಿದ್ದಾನೆ.

ಸಾಕ್ಷಾತ್ ಭಗವಂತನೆ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದಶರ್ನ ನೀಡುತ್ತಾನೆ ಎಂಬ ಪ್ರತೀತಿ ಇದೆ ಹಿಗಾಗಿ ಚಲುವನಾರಾಯಣಸ್ವಾಮಿಯನ್ನ ಕಣ್ತುಂಬಿಕೊಳ್ಳಲು ರಾಜ್ಯವಲ್ಲದೆ ಹೊರ ರಾಜ್ಯದಿಂದಲ್ಲೂ ಇಲ್ಲಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ.

ಜಿಲ್ಲಾ ಖಜಾನೆಯಿಂದ ಆಗಮಿಸಲಿದೆ ಆಭರಣ

ಮಂಡ್ಯ ಜಿಲ್ಲಾ ಖಜಾನೆಯಿಂದ  ವೈರಮುಡಿ, ರಾಜಮುಡಿ, ಸೇರಿದಂತೆ ತಿರುವಾಭರಣಗಳು ಮೇಲುಕೋಟೆಗೆ ರವಾನೆಯಾಗಲಿವೆ. ದೇವಸ್ಥಾನದ ಸ್ಥಾನಿಕರು ಹಾಗೂ ಅಧಿಕಾರಿಗಳ ಭದ್ರತೆಯಲ್ಲಿ ಆಭರಣಗಳು ಜಿಲ್ಲಾ ಖಜಾನೆಯಿಂದ ಹೊರಡಲಿವೆ. ನಗರದ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಮೊದಲ ಪೂಜೆ ಸಲ್ಲಿಸಿ ನಂತರ ಪಾಂಡವಪುರ  ಮಾರ್ಗವಾಗಿ ಆಭರಣಗಳನ್ನ ತೆಗೆದುಕೊಂಡು ಹೋಗಲಾಗತ್ತೆ.

ಇದನ್ನೂ ಓದಿ: Koppal: ಅಂಜನಾದ್ರಿಯಲ್ಲಿ ಅಭಿವೃದ್ದಿ ಪರ್ವ ಆರಂಭ

ದಾರಿ ಮಧ್ಯೆ ಭಕ್ತರಿಂದ ಪೂಜೆ

ಈ ಮಧ್ಯೆ ಮಾರ್ಗದಲ್ಲಿ ಸಿಗುವ ನೂರಾರು ಹಳ್ಳಿಗಳಲ್ಲಿನ ಜನರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗತ್ತೆ. ಹೀಗೆ ಬೆಳಗ್ಗೆ ಹೊರಟ ಆಭರಣಗಳು ಸಂಜೆಯೊತ್ತಿಗೆ ಮೇಲುಕೋಟೆ ತಲುಪಲಿದ್ದು, ಪಾರ್ವಾಟೆ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ನಂತರ ಚಿನ್ನದ ಪಲ್ಲಕಿ ಮೂಲಕ ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಲಿವೆ.
Published by:Annappa Achari
First published: