15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ, ಕಾಂಗ್ರೆಸ್ ಗೆಲುವು ನಿಶ್ಚಿತ; ಡಿಕೆ ಶಿವಕುಮಾರ್​

ಅಧಿಕಾರ ಮಾಡಲು ಬಿಡಲ್ಲವೆಂಬ ಸಿಎಂ ಬಿಎಸ್​​ವೈ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಯಾಕೆ ಅಧಿಕಾರ ನಡೆಸಬೇಕು. ಆ ಪರಿಸ್ಥಿತಿ ನಿರ್ಮಾಣಕ್ಕೆ ಯಡಿಯೂರಪ್ಪನೇ ಕಾರಣ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ಬೆಂಗಳೂರು(ಡಿ.03): ಈ ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ. ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಭವಿಷ್ಯ ನುಡಿದಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪದ್ಮವ್ಯೂಹ ರಚನೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಯಾವುದಾವುದೋ ವ್ಯೂಹ ರಚನೆ ಮಾಡುತ್ತಾರೆ. ನಮ್ಮ ತಂತ್ರಗಾರಿಕೆ ನಾವು ಮಾಡುತ್ತಿದ್ದೇವೆ. 15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಹೇಳಿದರು.

ಡಿ.9ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ; ಮತ್ತೆ ಕಾಂಗ್ರೆಸ್​ ಸರ್ಕಾರ ಬರಲಿದೆ; ಸಿದ್ದರಾಮಯ್ಯ

ಮುಂದುವರೆದ ಅವರು, ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ. ಪಕ್ಷ, ಜನರಿಗೆ ಮೋಸ ಮಾಡಿದವರು ಗೆಲ್ಲಬಾರದು. ಇವರನ್ನು ಸೋಲಿಸಿ ಜನರೇ ಬುದ್ಧಿ ಕಲಿಸುತ್ತಾರೆ. ಬೇರೆ ಯಾವ ರಾಜ್ಯದಲ್ಲೂ ಆಪರೇಷನ್ ಕಮಲ ನಡೆಯಲ್ಲ. ಆದರೆ ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲ ನಡೆಯುವುದು ಸಾಮಾನ್ಯ ಎಂದು ಟೀಕೆ ಮಾಡಿದರು.

ಅಧಿಕಾರ ಮಾಡಲು ಬಿಡಲ್ಲವೆಂಬ ಸಿಎಂ ಬಿಎಸ್​​ವೈ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಯಾಕೆ ಅಧಿಕಾರ ನಡೆಸಬೇಕು. ಆ ಪರಿಸ್ಥಿತಿ ನಿರ್ಮಾಣಕ್ಕೆ ಯಡಿಯೂರಪ್ಪನೇ ಕಾರಣ ಎಂದು ಹೇಳಿದರು.

ದೊರೆಸ್ವಾಮಿ, ಸಂತೋಷ ಹೆಗಡೆ, ಗೋಪಾಲಗೌಡರು ಹೇಳಿರುವುದನ್ನು ನಾನು ನೋಡಿದ್ದೇನೆ. ಜನ ಅನರ್ಹರ ವಿರುದ್ಧ ನಿಂತು ಪ್ರಜಾಪ್ರಭುತ್ವ ಉಳಿಸಲಿ.  ವೇಣುಗೋಪಾಲ್ ಹಿರಿಯ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಅದನ್ನು ನಿಭಾಯಿಸುತ್ತಿದ್ದೇವೆ.

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿ ಹಾಕದ ವಿಚಾರವಾಗಿ, ಪಕ್ಷದ ನಿರ್ಧಾರದ ಬಗ್ಗೆ ನನಗೇನು ಗೊತ್ತಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧ ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್​​-ಜೆಡಿಎಸ್​​ನಲ್ಲಿ ಒಗ್ಗಟ್ಟಿಲ್ಲ: ಬಿಜೆಪಿ 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ; ಸಿಎಂ ಯಡಿಯೂರಪ್ಪ
First published: