ಅನರ್ಹ ಶಾಸಕರ ಸ್ಥಿತಿ ಇನ್ನೂ ಅತಂತ್ರ; ಉಪಚುನಾವಣೆ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ?

ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ನ. 13ರ ಬುಧವಾರ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಆ ತೀರ್ಪು ಅನರ್ಹರ ಪರ ಬರಲಿದೆಯೋ ಅಥವಾ ಸ್ಪೀಕರ್ ಆದೇಶದ ಪರವಾಗಿ ಬರಲಿದೆಯೋ ಎಂಬುದು ಕುತೂಹಲ ಮೂಡಿಸಿದೆ.

news18india
Updated:November 11, 2019, 10:13 AM IST
ಅನರ್ಹ ಶಾಸಕರ ಸ್ಥಿತಿ ಇನ್ನೂ ಅತಂತ್ರ; ಉಪಚುನಾವಣೆ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ?
ಅನರ್ಹ ಶಾಸಕರು
  • Share this:
ಬೆಂಗಳೂರು (ನ. 11): ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಅನರ್ಹ ಶಾಸಕರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ನಡುವೆ ಅವರು ರಾಜೀನಾಮೆ ನೀಡಿರುವ ವಿಧಾನಸಭಾ ಕ್ಷೇತ್ರಗಳಿಗೆ ಡಿ. 5ರಂದು ಉಪಚುನಾವಣೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಕೂಡ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ರದ್ದು ಮಾಡುವಂತೆ ಅನರ್ಹ ಶಾಸಕರು ಇಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ನ. 13ರ ಬುಧವಾರ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಆ ತೀರ್ಪು ಅನರ್ಹರ ಪರ ಬರಲಿದೆಯೋ ಅಥವಾ ಸ್ಪೀಕರ್ ಆದೇಶದ ಪರವಾಗಿ ಬರಲಿದೆಯೋ ಎಂಬುದು ಕುತೂಹಲ ಮೂಡಿಸಿದೆ. ಡಿ. 5ರಂದು ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆಯಲಿದೆ. ಉಳಿದ 2 ಕ್ಷೇತ್ರಗಳಲ್ಲಿ ಕೋರ್ಟ್​ನಲ್ಲಿ ಚುನಾವಣಾ ಪಿಟಿಷನ್ ಇರುವುದರಿಂದ ಚುನಾವಣೆ ಮಾಡುವಂತಿಲ್ಲ.

Karnataka By-Election: ಡಿ. 5ಕ್ಕೆ ಕರ್ನಾಟಕ ವಿಧಾನಸಭಾ ಉಪಚುನಾವಣೆ; ಇಂದಿನಿಂದ ನೀತಿಸಂಹಿತೆ ಜಾರಿ

ಅದೇರೀತಿ ಅನರ್ಹರ ಕೇಸು ಕೂಡ ಕೋರ್ಟ್​ನಲ್ಲಿದೆ. ಹಾಗಾಗಿ ಕೂಡಲೆ ಉಪ ಚುನಾವಣೆ ರದ್ದು ಮಾಡಿ. ನ. 13ರಂದು ಸುಪ್ರೀಂಕೋರ್ಟ್ ತೀರ್ಪು ಕೊಡಲಿದೆ. ತೀರ್ಪು ಬಂದ ಬಳಿಕ ಉಪ ಚುನಾವಣೆ ಘೋಷಣೆ ಮಾಡುವಂತೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ಅನರ್ಹರ ಪರ ವಕೀಲ ದೇವರಾಜೇಗೌಡ ಮನವಿ ಸಲ್ಲಿಸಲಿದ್ದಾರೆ.

Bulbul Cyclone: ಬುಲ್​ಬುಲ್ ಚಂಡಮಾರುತದ ಹೊಡೆತಕ್ಕೆ 22ಕ್ಕೂ ಹೆಚ್ಚು ಸಾವು; ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್​

ಇಂದಿನಿಂದ 15 ಕ್ಷೇತ್ರಗಳಲ್ಲಿ ಚುನಾವಣಾ ನೀತಿಸಂಹಿತೆ ಜಾರಿಗೆ ಬರಲಿದೆ. ಇಡೀ ಜಿಲ್ಲೆಯ ಬದಲಿಗೆ ಚುನಾವಣೆ ನಡೆಯುವ ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆ. ನೀತಿ ಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಮಾರ್ಪಾಡು ಮಾಡಲಾಗಿದೆ. ನ. 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಈ ಹಿಂದೆ ಚುನಾವಣೆ ಘೋಷಣೆಯಾದಾಗ 29 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದನ್ನು ಕೂಡ ಮಾನ್ಯ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಯಾವೆಲ್ಲ ಕ್ಷೇತ್ರಗಳಲ್ಲಿ ಚುನಾವಣೆ?:ಯಶವಂತಪುರ, ಕೆ.ಆರ್​.ಪುರ, ಶಿವಾಜಿನಗರ, ಮಹಾಲಕ್ಷ್ಮೀಲೇಔಟ್, ಹುಣಸೂರು, ಕೆ.ಆರ್. ಪೇಟೆ, ಗೋಕಾಕ್, ಅಥಣಿ, ಕಾಗವಾಡ, ರಾಣೆಬೆನ್ನೂರು, ಯಲ್ಲಾಪುರ, ವಿಜಯನಗರ, ಹಿರೇಕೆರೂರು, ಹೊಸಕೋಟೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಡಿ. 5ರಂದು ಉಪ ಚುನಾವಣೆ ನಡೆಯಲಿದೆ.

(ವರದಿ: ಚಿದಾನಂದ ಪಟೇಲ್)

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ