ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಎಸ್.ಟಿ. ಸೋಮಶೇಖರ್

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವೇ ಇಲ್ಲ. ನಾನೇನು ಮಂತ್ರಿಯಾಗುವ ಆಸೆಯಿಂದ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಸಚಿವ ಸ್ಥಾನ ನೀಡದೆ ಇದ್ದರೂ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ ಎಂದು ಅನರ್ಹ ಶಾಸಕ ಎಸ್​.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಎಸ್.ಟಿ. ಸೋಮಶೇಖರ್

ಎಸ್.ಟಿ. ಸೋಮಶೇಖರ್

  • Share this:
ಬೆಂಗಳೂರು (ಡಿಸೆಂಬರ್. 08); ಅನರ್ಹ ಶಾಸಕರ್ಯಾರು ಈವರೆಗೆ ಸಿಎಂ ಯಡಿಯೂರಪ್ಪ ಎದುರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ. ಚುನಾವಣೆಯಲ್ಲಿ ಸೋಲನುಭವಿಸಿದವರನ್ನು ವಿಧಾನ ಪರಿಷತ್​ಗೆ ನಾಮ ನಿರ್ದೇಶನ ಮಾಡುವ ಕುರಿತು ಮನವಿ ಮಾಡಿಲ್ಲ ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಉಪ ಚುನಾವಣೆ ಹಾಗೂ ಬಿಜೆಪಿ ಪಕ್ಷದ ಭವಿಷ್ಯದ ಕಾರ್ಯತಂತ್ರದ ಕುರಿತು ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ್ದ ಸಚಿವ ಕೆ.ಎಸ್. ಈಶ್ವರಪ್ಪ, “ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಚಿವ ಸ್ಥಾನ. ಅಕಸ್ಮಾತ್ ಸೋಲನುಭವಿಸಿದರೆ ಅವರಿಗೆ ಸಚಿವ ಸ್ಥಾನ ನೀಡುವ ಅಥವಾ ವಿಧಾನ ಪರಿಷತ್​ಗೆ ಕಳುಹಿಸುವ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ” ಎಂದು ತಿಳಿಸಿದ್ದರು.

ಈಶ್ವರಪ್ಪ ಅವರ ಹೇಳಿಕೆ ಇಂದು ತಿರುಗೇಟು ನೀಡಿರುವ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್, “17ಜನ ಅನರ್ಹ ಶಾಸಕರು ಒಟ್ಟಿಗೆ ಇದ್ದೇವೆ. ಆದರೆ, ನಾವ್ಯಾರೂ ಸಿಎಂ ಯಡಿಯೂರಪ್ಪ ಎದುರು ಸಚಿವ ಸ್ಥಾನದ ಅಥವಾ ಪರಿಷತ್​ಗೆ ಕಳುಹಿಸುವ ಕುರಿತು ಬೇಡಿಕೆ ಇಟ್ಟಿಲ್ಲ. ಹಿರಿಯ ನಾಯಕ ವಿಶ್ವನಾಥ್ ಅವರಿಗೆ ಮಾತ್ರ ಚುನಾವಣೆಯಲ್ಲಿ ನಿಲ್ಲಬೇಡಿ ಎಂದು ಹೇಳಿದ್ದರು. ಆದರೆ, ಅವರು ಚುನಾವಣೆಗೆ ಸ್ಪರ್ಧೆ ಮಾಡ್ತೇನೆ ಅಂದ್ರು.

ರೋಷನ್ ಬೇಗ್ ತಾವಾಗಿಯೇ ಚುನಾವಣೆ ನಿಲ್ಲಲಿಲ್ಲ. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸೋತವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವೇ ಇಲ್ಲ. ನಾನೇನು ಮಂತ್ರಿಯಾಗುವ ಆಸೆಯಿಂದ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಸಚಿವ ಸ್ಥಾನ ನೀಡದೆ ಇದ್ದರೂ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಕುರಿತು ಕಿಡಿಕಾರಿದ ಅವರು, “ಕಾಂಗ್ರೆಸ್ ನಾಯಕರಿಗೆ ಪಕ್ಷ ಬೆಳೆಸುವ ಅಥವಾ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶವೇ ಇಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿದರು. ನಾನು ಈಗಲೂ ಕಾಂಗ್ರೆಸ್​ನಲ್ಲೇ ಇದ್ದಿದ್ದರೆ ಸಮಾಧಿಯಾಗಿ ಹೋಗುತ್ತಿದ್ದೆ. ಬಿಜೆಪಿ ಪಕ್ಷಕ್ಕೆ ಬಂದು ಬಚಾವಾಗಿದ್ದೇನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕಂದ್ರೆ ಹೇಗೆ? ಆಕೆ ಇರುವುದು ಒಬ್ಬಳೇ ತಾನೇ; ಕೆ.ಎಸ್​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
First published: