ಉಪಚುನಾವಣೆ ಹೊಸ್ತಿಲಲ್ಲಿ ಮಾಜಿ ಸ್ವೀಕರ್ ಕ್ಷಮೆ ಕೋರಿದ ಅನರ್ಹ ಶಾಸಕ‌‌‌‌‌ ನಾರಾಯಣಗೌಡ!

ನಮ್ಮ ತಾಲೂಕಿನ ಕೆಲ ಕಿಡಿಗೇಡಿಗಳು ಕೃಷ್ಣ ಅವರು ಅಲ್ಲಿ ಜಮೀನು‌ ಮಾಡಿದ್ದಾರೆ, ಡಾಲರ್ಸ್ ಕಾಲೋನಿಯಲ್ಲಿ ಕಾಂಪ್ಲೆಕ್ಸ್ ಕಟ್ಟಿದ್ದಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದರು. ನನಗೂ ಮನಸ್ಸು ಕೆಡಿಸಿದರು. ಆದರೆ, ಕೃಷ್ಣ ಅವರು ನಿಜವಾಗಿಯೂ ಪ್ರಾಮಾಣಿಕರು ಎಂದು ಹಾಡಿ ಹೊಗಳಿದರು.

HR Ramesh | news18-kannada
Updated:November 7, 2019, 9:39 PM IST
ಉಪಚುನಾವಣೆ ಹೊಸ್ತಿಲಲ್ಲಿ ಮಾಜಿ ಸ್ವೀಕರ್ ಕ್ಷಮೆ ಕೋರಿದ ಅನರ್ಹ ಶಾಸಕ‌‌‌‌‌ ನಾರಾಯಣಗೌಡ!
ಅನರ್ಹ​ ಶಾಸಕ ನಾರಾಯಣಗೌಡ
  • Share this:
ಮಂಡ್ಯ: ಉಪ ಚುನಾವಣೆ ಹೊಸ್ತಿಲಲ್ಲಿ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅವರು ಮಾಜಿ ಸ್ವೀಕರ್ ಅವರನ್ನು ಹಾಡಿ ಹೊಗಳಿ, ಅವರ ಕ್ಷಮೆಯನ್ನೂ ಕೋರಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೂ ಮಾಜಿ ಸ್ಪೀಕರ್ ಅವರನ್ನು ನಾರಾಯಣಗೌಡ  ಹೊಗಳಿದ್ದಾರೆಯೇ ಎಂದು ಅಚ್ಚರಿ ಪಡಬೇಡಿ, ಏಕೆಂದರೆ ಅವರು ಹೊಗಳಿರವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಲ್ಲ, ಬದಲಿಗೆ ಕೆ.ಆರ್.ಪೇಟೆಯ ಮಾಜಿ ಶಾಸಕ, ಜೆಡಿಎಸ್ ಹಿರಿಯ ಮುಖಂಡ ಕೃಷ್ಣ ಅವರನ್ನು.

ಕೃಷ್ಣ ಅವರು 40 ವರ್ಷ ರಾಜಕೀಯದಲ್ಲಿ ದುಡಿದ ಮಂಡ್ಯದ ಗಾಂಧಿ‌, ಸರಳ ಸಜ್ಜನ ರಾಜಕಾರಣಿ. ನಮ್ಮ ತಾಲೂಕಿನ ಕೆಲ ಕಿಡಿಗೇಡಿಗಳು ಕೃಷ್ಣ ಅವರು ಅಲ್ಲಿ ಜಮೀನು‌ ಮಾಡಿದ್ದಾರೆ, ಡಾಲರ್ಸ್ ಕಾಲೋನಿಯಲ್ಲಿ ಕಾಂಪ್ಲೆಕ್ಸ್ ಕಟ್ಟಿದ್ದಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದರು. ನನಗೂ ಮನಸ್ಸು ಕೆಡಿಸಿದರು. ಆದರೆ, ಕೃಷ್ಣ ಅವರು ನಿಜವಾಗಿಯೂ ಪ್ರಾಮಾಣಿಕರು ಎಂದು ಹಾಡಿ ಹೊಗಳಿದರು.

ಈ ಬರದ ಭೂಮಿಯಲ್ಲಿ ಬಂಜರು ತಾಲೂಕಿನಲ್ಲಿ ಜನ್ಮ‌ ಪಡೆದವರು. ಅವರು ತಪ್ಪು ಮಾಡಿಲ್ಲ, ನಾನು ಭಗವಂತನ‌ ಹತ್ತಿರ ಕ್ಷಮೆ ಕೇಳೋಕೆ ಬಯಸುತ್ತೇನೆ. ಅಂತಹವರ ಬಗ್ಗೆ ನನ್ನ‌ ಕಿವಿಗೆ ತುಂಬಿ ತುಂಬಿ‌ ದಾರಿ‌ ತಪ್ಪಿಸಿದ್ರು. ತಾಲೂಕಿನ ಶಾಸಕನಾಗಿಸಿದರೂ, ಅದಕ್ಕಾಗಿ ನಾನು‌ ನಿಮ್ಮ ಸೇವಕನಾಗಿ ದುಡಿಯುತ್ತೇನೆ. ಒಳ್ಳೆಯವರು ಯಾರು ಅವರ ಜೊತೆ ಇರುತ್ತೇನೆ. ಅವರ ಪಾದದ ಕೆಲಸವನ್ನೂ ಮಾಡುತ್ತೇನೆ ಎಂದು ಹೇಳಿದರು.

ಇದನ್ನು ಓದಿ: ಕೆಆರ್ ಪೇಟೆಯಲ್ಲಿ ಭರ್ಜರಿ ಮಟನ್ ಭಾಗ್ಯ; ಉಪಚುನಾವಣೆಯಲ್ಲಿ ಜನರನ್ನು ಸೆಳೆಯಲು ಒಂದೇ ದಿನ ಎರಡು ಕಡೆ ಬಾಡೂಟ

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ