Video | ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕರ ದರ್ಬಾರ್; ಕೆಡಿಪಿ ಸಭೆಯಲ್ಲಿ ನಾರಾಯಣಗೌಡ ಉಪಸ್ಥಿತಿ

ಇಂದು ಸಂಸದೆ ಸುಮಲತಾ ಜೊತೆ ಕೆ.ಆರ್. ಪೇಟೆಯ ಕೆಡಿಪಿ ಸಭೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಭಾಗಿಯಾದರು. ಸಭೆಯಲ್ಲಿ ಎಸಿ ಶೈಲಜಾ, ತಹಶೀಲ್ದಾರ್ ಶಿವಮೂರ್ತಿ, ತಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

HR Ramesh | news18-kannada
Updated:October 10, 2019, 10:05 PM IST
Video | ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕರ ದರ್ಬಾರ್; ಕೆಡಿಪಿ ಸಭೆಯಲ್ಲಿ ನಾರಾಯಣಗೌಡ ಉಪಸ್ಥಿತಿ
ಕೆ.ಆರ್.ಪೇಟೆ ಕೆಡಿಪಿ ಸಭೆಯಲ್ಲಿ ಭಾಗಿಯಾಗಿರುವ ಅನರ್ಹ ಶಾಸಕ ನಾರಾಯಣಗೌಡ
  • Share this:
ಕೆ.ಆರ್.ಪೇಟೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನರ್ಹಗೊಂಡಿರುವ ನಾರಾಯಣಗೌಡ ಅವರು ಇಂದು ಅಧಿಕಾರಿಗಳ ಕೆ.ಡಿ.ಪಿ. ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ಮಾತ್ರವೇ ಭಾಗವಹಿಸಬೇಕಾದ ಈ ಸಭೆಗೆ ಅನರ್ಹ ಶಾಸಕರು ಉಪಸ್ಥಿತಿ ವಹಿಸಿದ್ದು ಹೇಗೆ ಎಂದು ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

ಇಂದು ಸಂಸದೆ ಸುಮಲತಾ ಜೊತೆ ಕೆ.ಆರ್. ಪೇಟೆಯ ಕೆಡಿಪಿ ಸಭೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಭಾಗಿಯಾದರು. ಸಭೆಯಲ್ಲಿ ಎಸಿ ಶೈಲಜಾ, ತಹಶೀಲ್ದಾರ್ ಶಿವಮೂರ್ತಿ, ತಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಜನಪ್ರತಿಗಳನ್ನು ಹೊರತುಪಡಿಸಿ ಉಳಿದವರು ಭಾಗಿಯಾಗಲು  ಅವಕಾಶವಿಲ್ಲ. ರಾಜೀನಾಮೆ ನೀಡಿ ಅನರ್ಹಗೊಂಡಿದ್ದರೂ ನಾರಾಯಣಗೌಡ ಅವರು ಅಧಿಕಾರಿ‌ಗಳ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅನರ್ಹ ಶಾಸಕರ ಈ ಉದ್ದಟತನಕ್ಕೆ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: Video | ಮೇಯರ್​ ಕಾಲಿಗೆ ಹಗ್ಗ ಕಟ್ಟಿ, ರಸ್ತೆ ಮೇಲೆ ಕಾರಿನಲ್ಲಿ ಎಳೆದೊಯ್ದ ರೈತರು; ಏಕೆ ಗೊತ್ತೇ?

First published: October 10, 2019, 10:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading