31 ಕೋಟಿ ಕಾರ್​ನಲ್ಲಿ ಸಿಎಂ ಬಿಎಸ್​ವೈ ಭೇಟಿ ಮಾಡಲು ಬಂದ ಅನರ್ಹ ಶಾಸಕ ಎಂಟಿಬಿ

Rolls Royce Phantom Car: ರೋಲ್ಸ್​ ರಾಯ್ಸ್​ ಪ್ಯಾಂಟಮ್​ ಕಾರು ಖರೀದಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಇದೀಗ ಆ ಆಸೆ ಕೈಗೂಡಿದೆ -ಎಂಟಿಬಿ ನಾಗರಾಜ್​

Seema.R | news18-kannada
Updated:August 14, 2019, 3:15 PM IST
31 ಕೋಟಿ ಕಾರ್​ನಲ್ಲಿ ಸಿಎಂ ಬಿಎಸ್​ವೈ ಭೇಟಿ ಮಾಡಲು ಬಂದ ಅನರ್ಹ ಶಾಸಕ ಎಂಟಿಬಿ
ಎಂಟಿಬಿ ನಾಗರಾಜ್​ ಅವರ ಹೊಸ ರೋಲ್ಸ್​ ರಾಯ್​ ಕಾರ್​
  • Share this:
ಬೆಂಗಳೂರು (ಆ.14): ಮೈತ್ರಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ನೆರೆ ಪರಿಹಾರ ಚೆಕ್​ ನೀಡಿದರು. ಎಂಟಿಬಿ ಬಿಎಸ್​ವೈ ಭೇಟಿಗಿಂತ ಹೆಚ್ಚಾಗಿ ಜನರ ಗಮನಸೆಳೆದಿರುವುದು ಅವರು ಪ್ರಯಾಣಿಸಿದ ಕಾರು.

ಮುಂಬೈನಿಂದ ಮರಳಿದ ಬಳಿಕ ಇದೇ ಮೊದಲ ಬಾರಿ ಬಿಎಸ್​ವೈ ಭೇಟಿ ಮಾಡಿರುವ ಎಂಟಿಬಿ ನಾಗರಾಜ್​, ಒಂದು ವಾರದ ಹಿಂದೆಯಷ್ಟೇ ಖರೀದಿಸಿದ 31 ಕೋಟಿ ಬೆಲೆಬಾಳುವ ಕಾರಿನಲ್ಲಿ ಆಗಮಿಸಿದ್ದಾರೆ.

ನೆರೆ ಸಂತ್ರಸ್ತರಿಗೆ 1 ಕೋಟಿ ಪರಿಹಾರದ ಬೆಕ್​ ನೀಡಿದ ಎಂಟಿಬಿ ನಾಗರಾಜ್​


ರೋಲ್ಸ್​ ರಾಯ್ಸ್ ಪ್ಯಾಟಮ್​​​ ಕಾರಿನಲ್ಲಿ ಬಂದ ಅವರು, ಪ್ರವಾಹ ಸಂತ್ರಸ್ತರಿಗೆ 1 ಕೋಟಿ ಚೆಕ್​ ನೀಡಿದ್ದಾರೆ.  ದುಬೈ ಮೂಲದ ಈ ಕಾರನ್ನು ಮುಖಂಡವಾಗಿ ಕಾಯ್ದಿರಿಸಿ ವಿಶೇಷವಾಗಿ ವಿನ್ಯಾಸ ಮಾಡಿಸಿದ್ದಾರೆ. ಈ ಕಾರು ಎಲ್ಲರ ಗಮನಸೆಳೆದಿದೆ.

ಇನ್ನು ಈ ಕುರಿತು ಖುದ್ದು ಪ್ರತಿಕ್ರಿಯೆ ನೀಡಿರುವ ಅವರು, "ಈ ಕಾರು ಖರೀದಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಇದೀಗ ಆ ಆಸೆ ಕೈಗೂಡಿದೆ" ಎಂದಿದ್ದಾರೆ.

ಇದನ್ನು ಓದಿ: ನೆರೆ ಸಂಬಂಧ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂಬ ಸಿಎಂ ಹೇಳಿಕೆಗೆ ಜೆಡಿಎಸ್ ಖಂಡನೆ

ಇನ್ನು ಎಂಟಿಬಿ ನಾಗರಾಜ್​ ಅವರ ಕಾರಿನ ಕುರಿತು ಟೀಕಿಸಿರುವ ಕಾಂಗ್ರೆಸ್​ ನಾಯಕ ನಿವೇದಿತಾ ಆಳ್ವಾ, ಎಂಟಿಬಿ ನಾಗರಾಜ್​ ಈಗಾಗಲೇ ಲಕ್ಷಾಧೀಶ್ವರರು. ಆದರೆ, ರಜಾದಿನ ಕಳೆಯಲು ಮುಂಬೈಗೆ ವೈಯಕ್ತಿಕ ವಿಮಾನದಲ್ಲಿ ತೆರಳಿದ್ದರು.   ಅನರ್ಹಗೊಂಡಿದ್ದ ಶಾಸಕರು ತಮ್ಮ ಹೊಸ ಕಾರಿನೊಂದಿಗೆ ಫೋಸ್​ ನೀಡಿದ್ದಾರೆ ಎಂದಿದ್ದಾರೆ. ವಸತಿ ಸಚಿವರಾಗಿದ್ದ ಎಂಟಿಬಿ ನಾಗರಾಜ್​ ಅವರನ್ನು ಕಾಂಗ್ರೆಸ್​ ನಾಯಕರು ಎಷ್ಟೆ ಮನವೊಲಿಸಿದರೂ ಕೂಡ ಅವರು ಮುಂಬೈಗೆ ಹೋಗಿ ಅತೃಪ್ತ ಶಾಸಕರ ತಂಡ ಸೇರಿದ್ದರು. ಬಹುಮತ ಸಾಬೀತು ಮಾಡುವ ವೇಳೆ ಕೂಡ ಈ ಶಾಸಕರು ಗೈರಾದ ಹಿನ್ನೆಲೆ ಸಂಖ್ಯಾಬಲದ ಕೊರತೆಯಿಂದ ಮೈತ್ರಿ ಸರ್ಕಾರ ಬಿದ್ದು ಹೋಯಿತು. ಇದಾದ ಬಳಿಕ ಕಾಂಗ್ರೆಸ್​ ಅತೃಪ್ತ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ