ಫಲಿತಾಂಶಕ್ಕೆ ಇನ್ನೇರಡೇ ದಿನ ಬಾಕಿ: ಅನರ್ಹ ಶಾಸಕರಲ್ಲಿ ಹೆಚ್ಚಿದ ಆತಂಕ; ಎಂಟಿಬಿ ಬಳಿಕ ಸಿಎಂ ಭೇಟಿಯಾದ ಗೋಪಾಲಯ್ಯ

ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾದರೆ, ಬಿಜೆಪಿ ಕೂಡ ಅನರ್ಹರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಅನರ್ಹರಿಗೆ ಟಿಕೆಟ್​ ಕೊಟ್ಟ ಕ್ರಮ ಸ್ಥಳೀಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆ ಒಂದು ವೇಳೆ ಸೋತರೆ ತಮಗೆ ಸ್ಥಾನಮಾನವಿಲ್ಲದಂತೆ ಆಗುತ್ತದೆ ಎಂದು ಅನರ್ಹರ ಅಳಲಾಗಿದೆ. 

Seema.R | news18-kannada
Updated:December 7, 2019, 12:23 PM IST
ಫಲಿತಾಂಶಕ್ಕೆ ಇನ್ನೇರಡೇ ದಿನ ಬಾಕಿ: ಅನರ್ಹ ಶಾಸಕರಲ್ಲಿ ಹೆಚ್ಚಿದ ಆತಂಕ; ಎಂಟಿಬಿ ಬಳಿಕ ಸಿಎಂ ಭೇಟಿಯಾದ ಗೋಪಾಲಯ್ಯ
ಸಚಿವ ಕೆ. ಗೋಪಾಲಯ್ಯ
  • Share this:
ಬೆಂಗಳೂರು (ಡಿ.07): ಉಪಚುನಾವಣಾ ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇದ್ದು, ಅನರ್ಹ ಶಾಸಕರಲ್ಲಿ ಆತಂಕ ಮನೆ ಮಾಡಿದೆ. ಉಪಚುನಾವಣಾ ಫಲಿತಾಂಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿರುವ ಹಿನ್ನೆಲೆ ಮತದಾರರು ತಮ್ಮ ಕೈ ಬಿಟ್ಟರೆ ತಮ್ಮ ಮುಂದಿನ ದಾರಿ ಏನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಒಬ್ಬರಾದ ಬಳಿಕ ಒಬ್ಬ ಅನರ್ಹ ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಅಳಲು ತೊಡಿಕೊಳ್ಳಲು ಮುಂದಾಗಿದ್ದಾರೆ. 

ಅನರ್ಹಗೊಂಡರು ಬಿಜೆಪಿ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರಿಗೆ ಈ ಗೆಲುವು ಅನಿವಾರ್ಯವಾಗಿದೆ. ಆದರೆ, ಚುನಾವಣಾ ಪ್ರಚಾರದ ವೇಳೆ ಅನರ್ಹರ ವಿರುದ್ಧ ಕಂಡು ಬಂದ ಆಕ್ರೋಶ, ವಿಪಕ್ಷಗಳು ಅನರ್ಹ ವಿರುದ್ಧ ನಡೆಸಿದ ಪ್ರಚಾರ ಗಮನಿಸಿದರೆ ಈ ಬಾರಿ ಫಲಿತಾಂಶ ಏನಾಗಲಿದೆ ಎಂಬ ಅನುಮಾನ ಅವರನ್ನು ಕಾಡುತ್ತಿದೆ.

ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾದರೆ, ಬಿಜೆಪಿ ಕೂಡ ಅನರ್ಹರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಅನರ್ಹರಿಗೆ ಟಿಕೆಟ್​ ಕೊಟ್ಟ ಕ್ರಮಕ್ಕೆ ಬಿಜೆಪಿ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಮೂಡಿದೆ. ಈ ಹಿನ್ನೆಲೆ ಒಂದು ವೇಳೆ ಸೋತರೆ ತಮಗೆ ಸ್ಥಾನಮಾನವಿಲ್ಲದಂತೆ ಆಗುತ್ತದೆ ಎಂದು ಅನರ್ಹರ ಅಳಲಾಗಿದೆ.

ಇದನ್ನು ಓದಿ: ಸೋಲಿನ ಭೀತಿ?; ಸಂಸದ ಬಚ್ಚೇಗೌಡ ವಿರುದ್ಧ ಸಿಎಂಗೆ ದೂರು ಸಲ್ಲಿಸಿದ ಎಂಟಿಬಿ

ಇದೇ ಕಾರಣಕ್ಕೆ ಇಂದು ಅನರ್ಹ ಶಾಸಕರು ಸಿಎಂ ಮನೆ ದೌಡಾಯಿಸುತ್ತಿದ್ದು, ಫಲಿತಾಂಶ ಏನೇ ಬಂದರೂ ತಮ್ಮ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.  ಬೆಳಗ್ಗೆ ಎಂಟಿಬಿ ನಾಗರಾಜ್​ ಭೇಟಿಯಾಗಿ ಹೋಗುತ್ತಿದ್ದಂತೆ, ಮಹಾಲಕ್ಷ್ಮೀ ಲೇಔಟ್​ ಬಿಜೆಪಿ ಅಭ್ಯರ್ಥಿ ಕೆ ಗೋಪಾಲಯ್ಯ ಭೇಟಿಯಾಗಿ ದುಗುಡ ಹೊರಹಾಕಿದ್ದಾರೆ.

ಸಿಎಂ ಯಡಿಯೂರಪ್ಪ ಕೂಡ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಗೆಲ್ಲುತ್ತೀರಾ.  ಮಂತ್ರಿಯಾಗುವುದಕ್ಕೆ ಸಿದ್ಧವಾಗಿ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಮತದಾನ ಪ್ರಮಾಣ ಹಾಗೂ ಸೋಲು ಗೆಲುವಿನ ಬಗ್ಗೆ ಚರ್ಚೆ ನಡೆಸಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.
First published: December 7, 2019, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading