ನಾವೆಲ್ಲಾ ಸೇರಿಯೇ ಬಿಜೆಪಿ ಸರ್ಕಾರ ರಚಿಸಿದ್ದು; ಹಾಗಾಗಿ ನಾವು ಬಿಜೆಪಿ ಸೇರುವುದು ಖಚಿತ; ಎಚ್​ ವಿಶ್ವನಾಥ್​​

ಉಪಚುನಾವಣೆಯ ಹೊತ್ತಿಗೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾದರೆ, ಹುಣಸೂರಿನಿಂದಲೇ ಸ್ಪರ್ಧಿಸುತ್ತೇವೆ. ಈ ಹಿಂದೆ ಅಲ್ಲಿಂದಲೇ  ಜನರು ನನ್ನನ್ನು ಮತಕೊಟ್ಟು ಗೆಲ್ಲಿಸಿದ್ದಾರೆ. ನಾನು ಗೆದ್ದು ರಾಜಿನಾಮೆ ನೀಡಿದ್ದೇನೆ. ಈಗಲೂ ಜನರು ಗೆಲ್ಲಿಸುವ ವಿಶ್ವಾಸವಿದೆ. ಆದ್ದರಿಂದ ಮತ್ತೆ ಚುನಾವಣೆಗೆ ನಿಲ್ಲುತ್ತೇನೆ ಎನ್ನುವ ಮೂಲಕ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Seema.R | news18-kannada
Updated:October 27, 2019, 3:41 PM IST
ನಾವೆಲ್ಲಾ ಸೇರಿಯೇ ಬಿಜೆಪಿ ಸರ್ಕಾರ ರಚಿಸಿದ್ದು; ಹಾಗಾಗಿ ನಾವು ಬಿಜೆಪಿ ಸೇರುವುದು ಖಚಿತ; ಎಚ್​ ವಿಶ್ವನಾಥ್​​
ಹೆಚ್. ವಿಶ್ವನಾಥ್
  • Share this:
ಕೊಡಗು (ಅ.27): ನಾವೆಲ್ಲಾ ಸೇರಿಯೇ ಬಿಜೆಪಿ ಸರ್ಕಾರ ರಚಿಸಿದ್ದೇವೆ. ಆದ್ದರಿಂದ ನಾವೆಲ್ಲರೂ ಬಿಜೆಪಿ ಸೇರುವುದು ಖಚಿತ ಎಂದು ಅನರ್ಹ ಶಾಸಕ ಎಚ್​ ವಿಶ್ವನಾಥ್​ ಸ್ಪಷ್ಟಪಡಿಸಿದ್ದಾರೆ. 

ಇಲ್ಲಿನ ಬಾಳಗೋಡಿನಲ್ಲಿ ಮಾತನಾಡಿದ ಅವರು, ಸದ್ಯ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್​ ಅಂಗಳದಲ್ಲಿದೆ. ಅಲ್ಲಿಯವರೆಗೂ ತಟಸ್ಥರಾಗಿರುತ್ತೇವೆ. ತೀರ್ಪಿನ ಬಳಿಕ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತೇವೆ ಎಂದರು.

ಉಪಚುನಾವಣೆಯ ಹೊತ್ತಿಗೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾದರೆ, ಹುಣಸೂರಿನಿಂದಲೇ ಸ್ಪರ್ಧಿಸುತ್ತೇವೆ. ಈ ಹಿಂದೆ ಅಲ್ಲಿಂದಲೇ  ಜನರು ನನ್ನನ್ನು ಮತಕೊಟ್ಟು ಗೆಲ್ಲಿಸಿದ್ದಾರೆ. ನಾನು ಗೆದ್ದು ರಾಜಿನಾಮೆ ನೀಡಿದ್ದೇನೆ. ಈಗಲೂ ಜನರು ಗೆಲ್ಲಿಸುವ ವಿಶ್ವಾಸವಿದೆ. ಆದ್ದರಿಂದ ಮತ್ತೆ ಚುನಾವಣೆಗೆ ನಿಲ್ಲುತ್ತೇನೆ ಎನ್ನುವ ಮೂಲಕ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸೆರೆವಾಸದ ಬಳಿಕ ಜಾಮೀನು ಪಡೆದು ಹೊರ ಬಂದ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ಗೆ ಅದ್ಧೂರಿ ಸ್ವಾಗತ ಮಾಡಿದರ ಕುರಿತು ಪ್ರತಿಕ್ರಿಯಿಸಿದ ಅವರು, ಜನರು ವಿಶ್ವಾಸದಿಂದ ಅವರ ನಾಯಕನನ್ನು ಸ್ವಾಗತಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಈ ಕ್ರಮವನ್ನು ವಿರೋಧಿಸಿದ ಸಂತೋಷ್​ ಹೆಗ್ಡೆ ಅವರ ದೃಷ್ಟಿಕೋನ ಕೂಡ ಸರಿಯದ್ದದ್ದೆ. ಸಂತೋಷ್ ಹೆಗ್ಗಡೆಯವರು ಸುಪ್ರೀಂಕೋರ್ಟ್ ವಕೀಲರಾಗಿದ್ದವರು. ಅವರ ದೃಷ್ಟಿಕೋನದಲ್ಲಿ ಡಿಕೆಶಿಯವರ ಸ್ವಾಗತವನ್ನು ವಿರೋಧಿಸಿದ್ದಾರೆ ಎಂದರು.

ಇದನ್ನು ಓದಿ: ಕಾಂಗ್ರೆಸ್ ತೊರೆಯಲಿರುವ ಸಿದ್ದರಾಮಯ್ಯ ಆಪ್ತ; ವಿಜಯ್​ ಶಂಕರ್ ಮನವೊಲಿಕೆಗೆ ಮುಂದಾದ ಕೈ ನಾಯಕರು

ಬಿಜೆಪಿಯಿಂದ ತಮ್ಮ ರಾಜಕೀಯ ಜೀವನ ಮುಗಿಸುವ ಯತ್ನ ನಡೆದಿದೆ ಎಂಬ ಡಿಕೆಶಿವಕುಮಾರ್​ ಹೇಳಿಕೆ ಸಮಂಜಸವಲ್ಲ. ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಒಂದು ಪಕ್ಷದ ನಾಶಕ್ಕೆ ಅದರ ನಾಯಕರೇ ಕಾರಣ ಎಂದರು.

First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading