ಒಂದೇ ಗಂಟೆಯಲ್ಲಿ ಸಚಿವರ ಪಟ್ಟಿಯಲ್ಲಿದ್ದ ನನ್ನ ಹೆಸರು ನಾಪತ್ತೆ: ಮಂತ್ರಿಗಿರಿ ಕೈ ತಪ್ಪಿದ ರಹಸ್ಯ ಬಿಚ್ಚಿಟ್ಟ ವಿಶ್ವನಾಥ್​​

ಇನ್ನೇನು ಪ್ರಮಾಣ ವಚನ ಪಡೆಯಬೇಕು ಎಂಬ ಅಂತಿಮ ಕ್ಷಣದಲ್ಲಿ ನನ್ನ ಹೆಸರು ಪಟ್ಟಿಯಿಂದ ಕಣ್ಮರೆಯಾಯಿತು. ಈ ವೇಳೆ ಕುಮಾರಸ್ವಾಮಿ ಕರೆ ಮಾಡಿ ನನ್ನನ್ನು ಅವರು ತಂಗಿದ್ದ ಹೋಟೆಲ್​ಗೆ ಕರೆಸಿಕೊಂಡರು. ಸಾ.ರಾ ಮಹೇಶ್​ ಕುಟುಂಬವೆಲ್ಲಾ ಬಂದಿದೆ. ಅವರನ್ನು ಮಂತ್ರಿ ಮಾಡುತ್ತೇವೆ ಎಂದರು- ವಿಶ್ವನಾಥ್​​

Seema.R | news18-kannada
Updated:November 28, 2019, 3:02 PM IST
ಒಂದೇ ಗಂಟೆಯಲ್ಲಿ ಸಚಿವರ ಪಟ್ಟಿಯಲ್ಲಿದ್ದ ನನ್ನ ಹೆಸರು ನಾಪತ್ತೆ: ಮಂತ್ರಿಗಿರಿ ಕೈ ತಪ್ಪಿದ ರಹಸ್ಯ ಬಿಚ್ಚಿಟ್ಟ ವಿಶ್ವನಾಥ್​​
ಮಾಜಿ ಸಚಿವ ಎಚ್​. ವಿಶ್ವನಾಥ್​
  • Share this:
ಮೈಸೂರು (ನ.28): ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ನನ್ನ ಮಂತ್ರಿ ಮಾಡಲು ಕುಮಾರಸ್ವಾಮಿ, ದೇವೇಗೌಡರಿಗೆ ಇಷ್ಟ ಇತ್ತು. ಇದೇ ಕಾರಣಕ್ಕೆ ನನ್ನ ಹೆಸರನ್ನು ಸಚಿವರ ಪಟ್ಟಿಯಲ್ಲಿ ಸೇರಿಸಿದ್ದರು. 10.30ಕ್ಕೆ ಇದ್ದ ನನ್ನ ಹೆಸರು 11.30ರ ವೇಳೆ ನಾಪತ್ತೆಯಾಗಿತ್ತು ಎಂದು ತಮಗೆ ಸಚಿವ ಸ್ಥಾನ ಕೈ ತಪ್ಪಿದರ ಕುರಿತು ಅನರ್ಹ ಶಾಸಕ ಎಚ್​ ವಿಶ್ವನಾಥ್​ ಗುಟ್ಟು ಬಿಚ್ಚಿಟ್ಟಿದ್ದಾರೆ. 

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಸಿಎಂ ಆಗಿದ್ದ ಕುಮಾರಸ್ವಾಮಿಯೇ ಫೋನ್​ ಮಾಡಿ ಕರೆಸಿಕೊಂಡಿದ್ದರು. ದೊಡ್ಡ ಗೌಡರು ಕೂಡ ನಿನ್ನನ್ನು ಮಂತ್ರಿ ಮಾಡುತ್ತೇವೆ ಎಂದರು. ಅದಕ್ಕೆ ನಾನು ಸಿದ್ದರಾಮಯ್ಯ ಒಪ್ಪುವುದಿಲ್ಲ ಬೇಡ ಎಂದೆ.

ಆದರೂ ಕೂಡ ನಿನ್ನನ್ನು ಮಂತ್ರಿ ಮಾಡಿಯೇ ಮಾಡುತ್ತೇವೆ ಎಂದು ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಹಾಕಿದರು. ಇನ್ನೇನು ಪ್ರಮಾಣ ವಚನ ಪಡೆಯಬೇಕು ಎಂಬ ಅಂತಿಮ ಕ್ಷಣದಲ್ಲಿ ನನ್ನ ಹೆಸರು ಪಟ್ಟಿಯಿಂದ ಕಣ್ಮರೆಯಾಯಿತು. ಈ ವೇಳೆ ಕುಮಾರಸ್ವಾಮಿ ಕರೆ ಮಾಡಿ ನನ್ನನ್ನು ಅವರು ತಂಗಿದ್ದ ಹೋಟೆಲ್​ಗೆ ಕರೆಸಿಕೊಂಡರು. ಸಾ.ರಾ ಮಹೇಶ್​ ಕುಟುಂಬವೆಲ್ಲಾ ಬಂದಿದೆ. ಅವರನ್ನು ಮಂತ್ರಿ ಮಾಡುತ್ತೇವೆ ಎಂದರು.

ಇದನ್ನು ಓದಿ: ಅನರ್ಹರ ಖರೀದಿ ಆರೋಪ: ಸಿದ್ದರಾಮಯ್ಯ ಮೇಲೆ ಮಾನನಷ್ಟ ಪ್ರಕರಣ; ಸಿಎಂ ಬಿಎಸ್​ವೈ ಎಚ್ಚರಿಕೆ

 

ನಾನು ಕೂಡ ಮಂತ್ರಿ ಸ್ಥಾನ ನೀಡಿದರೆ ಸಿದ್ದರಾಮಯ್ಯ ಒಪ್ಪುವುದಿಲ್ಲ. ಕುಮಾರ‌ಸ್ವಾಮಿ ಜೊತೆಗೆ ಸವಾಲುಗಳಿಗೆ ಎದುರಾಗಿ ನಿಲ್ಲುವ ಜವಾಬ್ದಾರಿ ಕೊಡಿಸಿ ಅಂತಾನು ಕೇಳಿಕೊಂಡೆ ಎಂದು ತಮಗೆ ಸಚಿವ ಸ್ಥಾನ ಕೈ ತಪ್ಪಿದ ಕುರಿತು ನಿಜವಾದ ಗುಟ್ಟನ್ನು ಅವರು ಹೊರ ಹಾಕಿದರು.

(ವರದಿ : ಪುಟ್ಟಪ್ಪ)
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading