ನಾನು ಕುರುಬ ಎಂದು ಹೀಗೆ ಸಾರಾ ಮಹೇಶ್​​​ ಹಿಂಸೆ ನೀಡುತ್ತಿದ್ದಾರೆ: ಅನರ್ಹ ಶಾಸಕ ಎಚ್​​. ವಿಶ್ವನಾಥ್​​

ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಹಿಂಸೆ ನೀಡಲಾಗ್ತಿದೆ. ನಮಗೆ ಇಂತವರಿಂದ ರಕ್ಷಣೆ ಇಲ್ಲವೇ? ಎಂದರು. ಹಾಗೆಯೇ ಸಾರಾ ಮಹೇಶ್​​ ನೀಡುವ ಹೇಳಿಕಗೆ ಮನ್ನಣೆ ನೀಡದೇ, ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಜರಿದರು.

news18-kannada
Updated:October 16, 2019, 6:31 PM IST
  • Share this:
ಮೈಸೂರು(ಅ.16): ಮಾಜಿ ಸಚಿವ ಸಾರಾ ಮಹೇಶ್​​ ಮತ್ತು ಮಾಜಿ ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​. ವಿಶ್ವನಾಥ್​​ ನಡುವಿನ ವಾಕ್ಸಮರ ಮುಂದುವರೆದಿದೆ. ಎಚ್​​. ವಿಶ್ವನಾಥ್​​ 25 ಕೋಟಿಗೆ ಮಾರಾಟವಾಗಿದ್ದಾರೆ ಎಂಬ ಸಾರಾ ಮಹೇಶ್​​ ಗಭೀರ ಆರೋಪಕ್ಕೆ ಅನರ್ಹ ಶಾಸಕ ತಿರುಗೇಟು ನೀಡಿದ್ದಾರೆ. ನಾನು ಕುರುಬ ಎಂಬ ಕಾರಣಕ್ಕೆ ಸಾರಾ ಮಹೇಶ್ ಹೀಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅನರ್ಹ ಶಾಸಕ ಎಚ್​​. ವಿಶ್ವನಾಥ್ ಸವಾಲ್​​ ಹಾಕಿದ್ದಾರೆ.

ಇಂದು ನ್ಯೂಸ್​​-18 ಕನ್ನಡದೊಂದಿಗೆ ಮೈಸೂರಿನಲ್ಲಿ ಮಾತಾಡಿದ ಅನರ್ಹ ಶಾಸಕ ಎಚ್​​. ವಿಶ್ವನಾಥ್​​, ನಾಳೆ ನಾನು ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಸಾರಾ ಮಹೇಶ್ ಸದನದಲ್ಲಿ ನಾನು 25 ಕೋಟಿಗೆ ಮಾರಾಟ ಆಗಿದ್ದೇನೆ ಎಂಬ ಆರೋಪ ಮಾಡಿದ್ದಾರೆ. ಹಾಗಾಗಿ ನಾಳೆ ಸಾರಾ ಮಹೇಶ್ ನನ್ನನ್ನ ಕೊಂಡುಕೊಂಡವರನ್ನು ಬೆಟ್ಟಕ್ಕೆ ಕರೆದುಕೊಂಡು ಬರಲಿ. ಆತನ ಆರೋಪ ನಿಜ ಎಂದು ಸಾಬೀಪಡಿಸಲಿ ಎಂದು ಕುಟುಕಿದ್ದಾರೆ.

ನಾಳೆ ನಾನು ಬೆಟ್ಟಕ್ಕೋಗಿ ಸಾರಾ ಮಹೇಶ್​ಗಾಗಿ ಕಾಯುತ್ತೇನೆ. ನನ್ನನ್ನು ಖರೀದಿ ಮಾಡಿದವರು ಆತನೊಂದಿಗೆ ಬರಬೇಕು. ಸಾರಾ ಮಹೇಶ್​ ಒಬ್ಬರೇ ಬಂದರೇ ಅವರ ಆರೋಪ ಸುಳ್ಳು ಎಂದರ್ಥ. ನನಗೆ ಭಾರೀ ಕೆಲಸ ಇದೆ. ಆದ್ದರಿಂದ ಈ ವಿಚಾರಕ್ಕೆ ಇಲ್ಲಿಗೆ ಅಂತ್ಯ ಹಾಡೋಣ ಎಂದರು.

ಹಾಗೆಯೇ ಮಾತು ಮುಂದುವರೆಸಿದ ವಿಶ್ವನಾಥ್​​,  ನಾವೇನು ಮಾರಾಟಕ್ಕಿರುವ ವಸ್ತು ಏನ್​ ರೀ? ಎಂದು ಸಾರಾ ಮಹೇಶ್​​ ಆರೋಪಕ್ಕೆ ಸಿಡಿಮಿಡಿಗೊಂಡಿದ್ದಾರೆ. ಇನ್ನು ನಾನು ಟಿಕೆಟ್​​ ಕೂಡ ಮಾರಿಕೊಂಡಿದ್ದೇನೆ ಸುದ್ದಿಯೂ ಹಬ್ಬಿಸಲಾಗುತ್ತಿದೆ. ಖುದ್ದು ಸಾರಾ ಮಹೇಶ್​​ ಮತ್ತು ಮಂಜುನಾಥ್​​ ಹೀಗೆ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಇವರಿಗೆ ಇದೇ ಕೆಲಸ. ನಾನೇನು, ನನ್ನ ಅನುಭ ಏನು?, ನನ್ಯಾಕೇ ಟಿಕೆಟ್​​ ಮಾರಿಕೊಳ್ಳಲಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ‘ಸಾರಾ ಮಹೇಶ್ ಕೊಚ್ಚೆ ಗುಂಡಿ, ನಾನ್ಯಾಕೇ ಕಲ್ಲೆಸೆದು ಶರ್ಟ್​​ ಕೊಳೆ ಮಾಡಿಕೊಳ್ಳಲಿ‘: ಹೆಚ್. ವಿಶ್ವನಾಥ್​

ಇನ್ನು ನನ್ನ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಹಿಂಸೆ ನೀಡಲಾಗ್ತಿದೆ. ನಮಗೆ ಇಂತವರಿಂದ ರಕ್ಷಣೆ ಇಲ್ಲವೇ? ಎಂದರು. ಹಾಗೆಯೇ ಸಾರಾ ಮಹೇಶ್​​ ನೀಡುವ ಹೇಳಿಕಗೆ ಮನ್ನಣೆ ನೀಡದೇ, ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಜರಿದರು.

ಮಹೇಶ್​​ ಏನು ನನ್ನ ಮಾಲೀಕನೇ? ಆತನ ಮುಂದೆ ನಾನ್ಯಾಕೇ ಪ್ರಮಾಣ ಮಾಡಬೇಕು. ಅವನೇ ನನ್ನ ಖರೀದಿ ಮಾಡಿದವರನ್ನು ಕರೆದುಕೊಂಡು ಚಾಮುಂಡಿ ಬೆಟ್ಟದಲ್ಲಿ ದೇವರ ಮುಂದೆ ಪ್ರಮಾಣ ಮಾಡಲಿ. ಇಲ್ಲದೇ ಹೋದಲ್ಲಿ ಇದೊಂದು ಹಿಟ್​​ ಅಂಡ್​​ ರನ್​​ ಕೇಸ್​ ಎಂದು ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.----------
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading