ರಾವಣನಂತೆ ಡಿಸಿಎಂ ಲಕ್ಷ್ಮಣ ಸವದಿ ಹಾಳಾಗಿ ಹೋಗುತ್ತಾರೆ ; ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ

ಡಿಸಿಎಂ ಸ್ಥಾನದ ಮಹತ್ವ ಅವರಿಗೆ ಗೊತ್ತಿಲ್ಲ. ಬಿದ್ದ ಮನೆ ಹಿಡಿದಿದ್ದಾರೆ ಹೊರತು ಏನೂ ಕನಸು ಇಲ್ಲ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು

G Hareeshkumar | news18-kannada
Updated:October 26, 2019, 7:32 PM IST
ರಾವಣನಂತೆ ಡಿಸಿಎಂ ಲಕ್ಷ್ಮಣ ಸವದಿ ಹಾಳಾಗಿ ಹೋಗುತ್ತಾರೆ ; ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ
ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ (ಅ.26 ): ಸೋತರು ಲಕ್ಷ್ಮಣ ಸವದಿಯವರಿಗೆ ಡಿಸಿಎಂ ಸ್ಥಾನದ ಮಹತ್ವ ಗೊತ್ತಿಲ್ಲ. ಹತ್ತು ತಲೆ ರಾವಣ ಹಾಳಾಗಿ ಹೋಗಿರುವಾಗ ಇನ್ನೂ ಈ ಸವದಿ ಯಾವ ಲೆಕ್ಕ ಎಂದು ಲಕ್ಷ್ಮಣ ಸವದಿ ವಿರುದ್ಧ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ವಾಗ್ದಾಳಿ ನಡೆಸಿದ್ದಾರೆ. 

ಬೇಜವಾಬ್ದಾರಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಹಾಳಾಗಿದ್ದಾರೆ. ಶಾಸಕ ಉಮೇಶ್ ಕತ್ತಿ ಅವರು ಸವದಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನನ್ನ ಸಹಮತವಿದ್ದು, ಡಿಸಿಎಂ ಸ್ಥಾನದ ಮಹತ್ವ ಅವರಿಗೆ ಗೊತ್ತಿಲ್ಲ. ಬಿದ್ದ ಮನೆ ಹಿಡಿದಿದ್ದಾರೆ ಹೊರತು ಏನೂ ಕನಸು ಇಲ್ಲ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಜತೆಗೆ ನಾನು ಪ್ರಯಾಣ ಮಾಡಿರುವುದು ದೊಡ್ಡ ವಿಷಯವಲ್ಲ, ಅದರಲ್ಲಿ ವಿಶೇಷತೆ ಇಲ್ಲ. ರಾಜಕೀಯವಾಗಿ ಏನೂ ಚರ್ಚೆ ಆಗಿಲ್ಲ.  ಖಾಸಗಿ ಮಾತುಕತೆ ಮಾಡಿದ್ದೇವೆ. ಯಾವುದೇ ಪಕ್ಕದಲ್ಲಿದ್ದರು ಕುಮಾರಸ್ವಾಮಿ ಜತೆಗೆ ಒಳ್ಳೆಯ ಸಂಬಂಧವಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಲ್ಲಿ ಎನೇ ಆದರೂ ಚುನಾವಣೆಗೆ ನಿಲ್ಲಲು ಅವಕಾಶ ಇದೆ ಅಂತಾ ಕಾನೂನು ತಜ್ಞರು ಹೇಳಿದ್ದಾರೆ. ಅಕ್ಟೋಬರ್ 30 ರಿಂದ ನಾನು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತೇನೆ. ಯಾವುದೇ ಸಂದರ್ಭದಲ್ಲಿ ಆದ್ರೂ ನಾನು‌ ಚುನಾವಣೆಗೆ ರೆಡಿ ಇದ್ದೇನೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ನಿಲ್ಲುವ ಅವಕಾಶ ಕೊಡುತ್ತಾರೆ. ಅಂತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಇದು ಅಂತ್ಯವಲ್ಲ, ಆರಂಭ; ಎಲ್ಲದಕ್ಕೂ ಸತ್ಯ, ನ್ಯಾಯ, ಕಾಲ ಸೂಕ್ತ ಉತ್ತರ ಕೊಡುತ್ತೆ: ಡಿಕೆ ಶಿವಕುಮಾರ್​​

ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ದ್ರೋಹದ ಕಥೆ ಮಾಡಿದ್ರೇ ಅವನು ಮನೆಗೆ ಓಡಿಹೊಗುತ್ತಾರೆ.  ಜಾರಕಿಹೊಳಿ‌ ಕುಟುಂಬದ ಬಗ್ಗೆ ಅಪಮಾನ ಮಾಡಬಾರದು ಅಂತಾ ಸುಮ್ಮನಿದ್ದೇವೆ. ನಾನು ಬಾಲಚಂದ್ರ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ‌ ಮಾತಿಗೆ ಉತ್ತರ ಹೇಳುತ್ತೇನೆ ಎಂದರು.

 
First published:October 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ